ಕಲಬುರಗಿ, ಏ. 16:ಕಲಬುರಗಿ ಅಂದರೆ ಬಿಸಲಿನ ನಾಡು ಎಂದೇ ಖ್ಯಾತವಾಗಿರುವ ನಗರ. ಇಲ್ಲಿ ಸರಿ ಸುಮಾರು ಪ್ರತಿ ಬೇಸಿಗೆ ಕಾಲದಲ್ಲಿ ಸುಮಾರು 40 ರಿಂದ 47ರವರೆಗೆ ತಾಪಮಾನ ವಿರುವುದು ಸಾಮಾನ್ಯವಾಗಿದೆ.
ಇತ್ತಿಚೆಗಂತೂ ಹೆಚ್ಚಿದ ತಾಪಮಾನದಿಂದಾಗಿ ವಾಹನ ಚಾಲಕರು ತೀವ್ರ ತೊಂದರೆಯಾಗುತ್ತಿದ್ದು, ಅಂತಹದರಲ್ಲಿ ಟ್ರಾಫಿಕ್ ಸಿಗ್ನಲ್‌ಗಲ ಹಾವಳಿಯಿಂದಾಗಿ ಮತ್ತಷ್ಟು ತಾಪಮಾನದಿಂದ ಬಳಲುವಂತಾಗಿದೆ.
ಈ ಮುಂಚೆ ನಗರ ಪೋಲಿಸ ಆಯುಕ್ತರು ಪ್ರಕಟಣೆ ಹೊರಡಿಸಿ ಬೇಸಿಗೆ ಮುಗಿಯವರೆಗೆ ಮಧ್ಯಾನ 12 ರಿಂದ ಸಂಜೆ 4ಗಂಟೆಯ ವರೆಗೆ ಎಲ್ಲ ಟ್ರಾಫಿಕ್ ಸಿಗ್ನಲ್‌ಗಳನ್ನು ಬಂದ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ ಅದು ಕೇವಲ ಕೆಲವು ದಿನಗಳು ಅಂದರೆ 15 ರಿಂದ 20 ದಿನಗಳ ವರೆಗೆ ಮಾತ್ರ ಜಾರಿಯಲ್ಲಿತ್ತು.
ಈಗ ಮತ್ತೇ ಎಲ್ಲಡೆ ಅಂದರೆ ನಗರದ ಟೌನ್‌ಹಾಲ್, ತಿಮ್ಮಾಪೂರಿ ವೃತ್ತ, ಜೇವರ್ಗಿ ಕ್ರಾಸ್ ಹತ್ತಿರ, ಲಾಲಗೀರಿ ಕ್ರಾಸ್ ವೃತ್ತ, ಆಳಂದ ರಿಂಗ್ ರಸ್ತೆ ವೃತ್ತ ಸೇರಿದಂತೆ ಹೀಗೆ ಹಲವಾರು ಕಡೆ ಸಿಗ್ನಲ್‌ಗಳು ಬೆಳಿಗ್ಗೆಯಿಂದ ಕಾರ್ಯನಿರ್ವಹಿಸುತ್ತಿವೆ.
ಇದರಿಂದಾಗಿ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸುವುದನ್ನು ಈಗಲಾದರೂ ತಪ್ಪಿಸಲು ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳುವುದೇ?