ಸಮ ಸಮಾಜ ನಿರ್ಮಾಣಕ್ಕೆ ಸಂಕಲ್ಪ:ಪ್ರಿಯಾoಕ್ ಖರ್ಗೆ

0
99

ಕಲಬುರಗಿ,ಜ.26:ದೇಶದಲ್ಲಿ ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಸಮುದಾಯಕ್ಕೆ ಸಂವಿಧಾನ ಜಾರಿಯಿಂದ ರಾಜಕೀಯ ಸಮಾನತೆ ಸಿಕ್ಕಿದೆಯಾದರು ಅರ್ಥಿಕ ಮತ್ತು ಸಾಮಾಜಿಕ ಸಮಾನತೆ ಇನ್ನು ದೊರೆತಿಲ್ಲ ಎಂಬುದನ್ನು ಮನಗಂಡಿರುವ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಸ್ಥಿರತೆ ತಂದು ಸಮ-ಸಮಾಜದ ನಿರ್ಮಾಣದ ಸಂಕಲ್ಪ ಮಾಡಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸೋಮವಾರ ಕಲಬುರಗಿ ನಗರದ ಡಿ.ಎ.ಆರ್. ಪೊಲೀಸ್ ಪರೇಡ್ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದ ನಂತರ ವಿವಿಧ ಪರೇಡ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, 26 ಜನೇವರಿ 1950 ಸಂವಿಧಾನ ಜಾರಿಗೆ ಬಂದು ಸಾಮಾಜಿಕ-ರಾಜಕೀಯ ವಂಚಿತ ಸಮುದಾಯಕ್ಕೆ ಧ್ವನಿ ಬಂದ ದಿನ. ಎಸ್.ಸಿ-ಎಸ್.ಟಿ ಆದಿವಾಸಿಗಳಿಗಳು ಮುಖ್ಯವಾಹಿನಿಗೆ ಬಂದ ಐತಿಹಾಸಿಕ ದಿನ. ಮಹಿಳೆಯರಿಗೆ ಸಮಾನವಾದ ಅವಕಾಶ ಕೊಟ್ಟ ಸುದಿನವಾಗಿದೆ ಎಂದರು.
130 ಕೋಟಿ ಜನಸಂಖ್ಯೆಯ ದೇಶದಲ್ಲಿ ವಿವಿಧ ಭಾಷೆ, ಆಚಾರ ವಿಚಾರ, ವಿಭಿನ್ನ ಆಚರಣೆಗಳು ಇವೆ. ಸಂವಿಧಾನ ಇರದೆ ಇದ್ದಿದ್ದರೆ ಇವುಗಳನ್ನು ಕಾಪಾಡಿಕೊಂಡು ಬರಲು ಅಸಾಧ್ಯವಾಗಿತ್ತು. ಭಿನ್ನತೆಯಲ್ಲಿ ಏಕತೆ ಇರುವ ದೇಶದಲ್ಲಿ ಡಾ.ಅಂಬೇಡ್ಕರ್ ಅವರು ನೀಡಿದ ಶ್ರೇಷ್ಟ ಸಂವಿಧಾನದಿAದ ಇಂದು ನಾವೆಲ್ಲರು ಬಲಿಷ್ಟ ಭಾರತ ನಿರ್ಮಿಸಲು ಸಾಧ್ಯವಾಗುತ್ತಿದೆ ಎಂದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಂಚಿತ ಸಮುದಾಯಕ್ಕೆ ನ್ಯಾಯ ಕಲ್ಪಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಾರದಿದಲ್ಲಿ ವ್ಯವಸ್ಥೆಯ ಮೇಲೆ ಅಪನಂಬಿಕೆ ಹುಟ್ಟುಕೊಳ್ಳುತ್ತದೆ ಎಂದು ಅಂಬೇಡ್ಕರ್ ಅಂದೇ ಎಚ್ಚರಿಸಿದರು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ರೈತರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಹಾಗೂ ಇತರರಿಗೆ ಆರ್ಥಿಕ ಸಮಾನತೆ ತರುವ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ರೈತಾಪಿ ವರ್ಗಕ್ಕೆ ಬೆಳೆ ವಿಮೆ, ಎನ್.ಡಿ.ಅರ್.ಎಫ್/ ಎಸ್.ಡಿ.ಅರ್.ಎಫ್, ತೊಗರಿ ವಿಶೇಷ ಪ್ಯಾಕೇಜ್, ಬೆಳೆ ಪರಿಹಾರ ಸೇರಿ ಸುಮಾರು 2,591 ಕೋಟಿ ರೂ. ದಾಖಲೆ ಪ್ರಮಾಣದಲ್ಲಿ ಪರಿಹಾರ ದೊರಕಿದೆ. ಜಿಲ್ಲೆಯಾದ್ಯಂತ 450 ಲಕ್ಷ ರೂ. ವೆಚ್ಚದಲ್ಲಿ 9 ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪಿಸಲಾಗಿದೆ. ಇದಲ್ಲದೆ 197 ಲಕ್ಷ ರೂ. ವೆಚ್ಚದಲ್ಲಿ ಕಮಲಾಪೂರ, ಸೇಡಂ, ಅಫಜಲಪೂರ ಹಾಗೂ ಚಿತ್ತಾಪೂರನಲ್ಲಿ ಡ್ರೋನ್ ಸಿಂಪಡಣೆ ಕೇಂದ್ರ ಸ್ಥಾಪಿಸಿದೆ. ಅಫಜಲಪೂರ ಮತ್ತು ಚಿತ್ತಾಪೂರ ತಾಲೂಕಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಸಿರಿಧಾನ್ಯ ಸಂಸ್ಕರಣ ಕೇಂದ್ರ ಸ್ಥಾಪಿಸಲಾಗುತ್ತಿದೆ. ಚಿತ್ತಾಪೂರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶೀಥಲೀಕರಣ ಘಟಕ ಮತ್ತು ಕಲಬುರಗಿ ಜಿಲ್ಲೆಯಾದ್ಯಂತ 7.59 ಕೋಟಿ ರೂ. ವೆಚ್ಚದಲ್ಲಿ 7 ಸೂಕ್ಷ್ಮ ಜಲಾನಯನ ಸಂಸ್ಕರಣ ಯೋಜನೆಗಳು ಅನುಷ್ಠಾನಗೊಳಿಸಲಾಗಿದೆ, ಒಟ್ಟಾರೆ ರೈತಾಪಿ ವರ್ಗದವರ ಆದಾಯ ದ್ವಿಗುಣವಾಗುವ ನಿಟ್ಟಿನಲ್ಲಿ ಈ ಎಲ್ಲಾ ಯೋಜನೆಗಳು ಸಾಕಾರಗೊಳಿಸಲಾಗುತ್ತಿದೆ ಎಂದರು.

LEAVE A REPLY

Please enter your comment!
Please enter your name here