ಅಫಜಲಪೂರ : ಆರ್ ಎಸ್ ಎಸ್ ಟಚ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಹಾಗೂ ದುಷ್ಟ ಶಕ್ತಿಗಳ ವಿರುದ್ಧ ಹಿಂದೂಗಳು ಒಂದಾಗಬೇಕು ಎಂದು ಮಾಶಾಳದ ಮರುಳರಾಧ್ಯ ಶ್ರೀಗಳು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ದೇಶದಲ್ಲಿ ಎಲ್ಲಿಯವರೆಗೆ ಹಿಂದೂಗಳು, ಮಠ ಮಂದಿರಗಳು ಸನ್ಯಾಸಿಗಳು ಹಾಗೂ ದೇಶ ಭಕ್ತರು ಇರುತ್ತಾರೋ ಅಲ್ಲಿಯವರೆಗೆ ಆರ್ ಎಸ್ ಎಸ್ ನ್ನು ಯಾರು ಕೂಡ ಟಚ್ ಮಾಡಕ ಆಗಲ್ಲ ಎಂದು ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗೆ ನಿಷೇಧ ಹೇರಿದ ರಾಜ್ಯ ಕಾಂಗ್ರೇಸ್ ರ‍್ಕಾರದ ವಿರುದ್ಧ ಹರಿಹಾಯ್ದರು. ರ‍್ಕಾರ ಆರ್ ಎಸ್ ಎಸ್ ಕೋಲು ಹಿಡಿದವರ ಬಗ್ಗೆ ಮಾತನಾಡುತ್ತೆ ಆದರೆ ಕೈಯಲ್ಲಿ ತಲವಾರ ಹಿಡುದ ಪುಂಡಾಟಿಕೆ ಮೆರೆಯುವವರ ವಿರುದ್ಧ ಯಾವುದೇ ಕ್ರಮ ಜರುಗಿಸುವದಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಅಷ್ಟೇ ಅಲ್ಲದೆ ರಾಜ್ಯದಲ್ಲಿ ಅನೇಕ ಮಹಿಳೆಯರ ಮೇಲೆ ದರ‍್ಜನ್ಯವಾಗುತ್ತಿದೆ, ಕೊಲೆಗಳಾಗುತ್ತಿವೆ, ನೇರೆಹಾವಳಿ ಬಂದು ಅನೇಕ ರೈತರು ಸಂಕಷ್ಟದಲ್ಲಿದ್ದಾರೆ, ಅಂತಹ ಅನೇಕ ಸಮಸ್ಯೆಗಳ ಬಗ್ಗೆ ರಾಜ್ಯ ರ‍್ಕಾರ ಗಮನಿಸುವದು ಬಿಟ್ಟು ಕ್ಷುಲ್ಲಕ ವಿಷಯಗಳ ಕಡೆ ಹೆಚ್ಚಿನ ಒತ್ತು ನೀಡುತ್ತಿರುವದು ಸರಿಯಲ್ಲ ಎಂದರು.
ಹಿಂದೂಗಳು ಯಾವುದೇ ಜಾತಿ ಮತ ಪಂಗಡ ಎನ್ನದೆ ಎಚ್ಚೆತ್ತುಕೊಳ್ಳಬೇಕು,ನಾವು ಚಲಾಯಿಸುವ ಪ್ರತಿಯೊಂದು ಮತ ದೇಶದ ಹಿತಕ್ಕಾಗಿ ಹಿಂದೂಗಳ ರಕ್ಷಣೆಗಾಗಿ ಇರಲಿ, ಎಲ್ಲರೂ ಒಗ್ಗಟ್ಟಿನಿಂದ ದೇಶ ರಕ್ಷಣೆ ಮಾಡಿ ದುಷ್ಟ ಶಕ್ತಿಗಳನ್ನು ಹೊಡೆದೊಡಿಸೋಣ ಎಂದರು.






