
ಕಲಬುರಗಿ, ಸೆ. 26: À ಕಳೆದ ನಾಲ್ಕು ತಿಂಗಳಿAದ ತಮ್ಮ ವೇತನ ಪಾವತಿ ಮಾಡದಿರುವುದನ್ನು ಪ್ರತಿಭಟಿಸಿ ಕಲಬುರಗಿ ಮಹಾನಗರಪಾಲಿಕೆ ಪೌರಕಾರ್ಮಿಕರು ವಾಹನ ಚಾಲಕರುÀ, ಲೋರ‍್ಸ್ಗಳು ಮತ್ತು ಕ್ಲೀರ‍್ಸ್ಗಳು ನಾಳೆ (27 ರಿಂದ) ದಿನನಿತ್ಯದ ಸ್ವಚ್ಛತಾ ಕಾರ್ಯ ಸ್ಥಗೀತಗೊಳಿಸಿ ಪಾಲಿಕೆ ಎದುರು ನಿರಂತರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಶಿವಕುಮಾರ ಎಂ. ಮುಡ್ಡಿ ಅವರು ತಿಳಿಸಿದ್ದಾರೆ.

ಈ ಕುರಿತಂತೆ ಪಾಲಿಕೆಯ ಆಯುಕ್ತರಿಗೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸದಿರೂ, ನಮ್ಮ ಸಮಸ್ಯೆಗೆ ಸ್ಪಂದಿಸದೆ, ನಾಳೆ ದಸರಾ ಹಬ್ಬ ಇರವುದರಿಂದ ಕುಟುಂಬದವರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದರಿಂದ ಅನಿವಾರ್ಯವಾಗಿ ಈ ಪ್ರತಿಭಟನೆ ಮಾಡುವ ನಿಧಾರ ಮಾಡಿರುವುದಾಗಿ ಅವರು ಹೇಳಿದ್ದಾರೆ.
ಈ ಪ್ರತಿಭಟನೆಯಿಂದ ಸಾರ್ವಜನಿಕರಿಗಾಗುವ ಅನಾನುಕೂಲತೆಗೆ ಖೇದ ವ್ಯಕ್ತಪಡಿಸಿರುವ ಅವರು, ನಮ್ಮ ಬೇಡಿಕೆ ಈಡೇರಿಸುವಲ್ಲಿ ಪಾಲಿಕೆ ಆಯುಕ್ತರ ಮುತುರ್ವಜಿ ವಹಿಸದಿರುವುದರಿಂದ ನಾವು ಈ ನಿರ್ಧಾರಕ್ಕೆ ಬರಲಾಯಿತು ಎಂದು ತಿಳಿಸಿದ್ದಾರೆ.