ಚಿತ್ತಾಪೂರದಲ್ಲಿ ಅಕ್ರಮ ಗಣಿಗಾರಿಕೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಹೈಕೋರ್ಟ್ ಮೋರೆ:ಸಿದ್ಧಲಿಂಗ ಸ್ವಾಮೀಜಿ ಅಂದೋಲಾ

0
54

ಕಲಬುರಗಿ, ಸೆ. 25: ಚಿತ್ತಾಪೂರ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆರುವ ವಿಷಯ ಈಗಾಗಲೇ ರಾಜ್ಯದ ಗಮನ ಸೆಳೆದಿದ್ದು ಅಲ್ಲದೇ ಇಲ್ಲಿ ಅಕ್ರಮ ನಡೆದಿದೆ ಎನ್ನುವ ಬಗ್ಗೆ ಬಳ್ಳಾರಿಯ ತನಿಖಾ ತಂಡ ಕೂಡ ತನ್ನ ವರದಿಯಲ್ಲಿ ಹೇಳಿದೆ, ಆದರೂ ಕೂಡ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳದೇ ಇರುವ ಬಗ್ಗೆ ಜಿಲ್ಲಾಧಿಕಾರಿಗಳ ನಡೆ ಸಂಶAಯಾಸ್ಪದವಾಗಿದೆ ಎಂದು ಶಿವ ಸೇನಾ ರಾಜ್ಯಧ್ಯಕ್ಷರಾದ ಸಿದ್ಧಲಿಂಗ ಸ್ವಾಮಿ ಆಂದೋಲಾ ಅವರು ಹೇಳಿದ್ದಾರೆ.
ಅವರಿಂದು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಪಂಚಾಯತ್ ರಾಜ್, ಐಟಿಬಿಟಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವಂತಹ ಕ್ಷೇತ್ರಾö್ವಗಿದ್ದು, ಇವರ ಆಶ್ರಯದಲ್ಲಿ ನೂರಾರೂ ಕೋಟಿ ಅಕ್ರಮ ಮರಳು ಗಣಿಗಾರಿಕೆ ನಡೆಯತ್ತಿದೆ ಎಂದು ಆರೋಪಿಸಿದ ಅವರು ಈ ಕುರಿಂತೆ ನಮ್ಮ ಶಿವಸೇನಾ ಪ್ರಮುಖ ಮಲ್ಲಣ್ಣಗೌಡ ಪಾಟೀಲ ಅವರು ದೂರು ಕೊಟ್ಟಿದ್ದರ ಪರಿಣಾಮವಾಗಿ ಮೇ ತಿಂಗಳಲ್ಲಿ ಬಳ್ಳಾರಿಯ ಹೆಚ್ಚುವರಿ ಗಣಿ ನಿರ್ದೇಶಕರ ಸೂಚನೆ ಮೇರೆಗೆ ಒಂದು ತಂಡ ತನಿಖೆ ನಡೆಸಿ ಇಲ್ಲಿ ಸ್ಪಷ್ಟವಾಗಿ ಅಕ್ರಮ ನಡೆದಿರುವ ಬಗ್ಗೆ ವರದಿ ನೀಡಿದೆ ಎಂದು ಅವರು ಹೇಳಿದರು.
ತನಿಖಾ ತಂಡ ಆಗಮಿಸುವ ಮಾಹಿತಿ ತಿಳಿದ ಜಿಲ್ಲಾಡಳಿತ ಇಲ್ಲಿನ ಜಿಲ್ಲಾಧಿಕಾರಿಗಳು ತಾಲೂಕ ಮರಳು ಸಮಿತಿಯ ಅಧ್ಯಕ್ಷರಾಗಿರುವ ಸಹಾಯಕ ಆಯುಕ್ತರಿಗೆ ಮತ್ತು ಮರಳು ಸಮಿತಿಯ ಕಾರ್ಯದರ್ಶಿಯೂ ಆದ ಚಿತ್ತಾಪೂರ ತಹಸೀಲ್ದಾರ ನಾಗಲಿಂಗಯ್ಯ ಹಿರೇಮಠ ಅವರುಗಳಿಗೆ ನೋಟಿಸ್ ಜಾರಿ ಮಾಡಿ 24 ಗಂಟೆಯೊಳಗೆ ಉತ್ತರ ನೀಡಲು ಸ್ಪಷ್ಟವಾಗಿ ಆದೇಶ ನೀಡಿದ್ದರೂ ಕೂಡ ಇಲ್ಲಿಯವರೆಗೂ ಯವುದೇ ಅಧಿಕಾರಿಗಳು ಈ ನೋಟಿಸ್‌ಗೆ ಉತ್ತರ ನೀಡುವ ಗೋಜಿಗೆ ಹೋಗದಿರುವುದು ಎಂತಹ ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಇದು ಅಲ್ಲದೇ ಗಣಿ ಉಪನಿರ್ದೇಶಕರಾದ ಸೋಮಶೇಖರ ಅವರಿಗೆ 5 ಬಾರಿ ನೋಟಿಸ್ ಜಾರಿ ಮಾಡಿ, ಇವರಿಗೂ ಕೂಡ ಉತ್ತರಕ್ಕೆ 24 ಗಂಟೆ ಟೈಮ್ ನೀಡಿದ್ದರೂ ಇವರು ಕೂಡ ಯಾವುದೇ ಉತ್ತರ ನೀಡಲಿಲ್ಲ.
ಚಿತ್ತಾಪೂರದಲ್ಲಿ ವಿಪರಿತವಾಗಿ ಅಕ್ರಮ ನಡೆದಿದೆ. 2 ರಿಂದ 3 ಲಕ್ಷ ಮೆಟ್ರಿಕ್ ಟನ್ ಮರಳು ಎತ್ತಿದ್ದಾರೆ. ರಸ್ತೆ ಮಾಡಿದ್ದಾರೆ. ಇಷ್ಟಿದ್ದೂ ಕೂಡ ಯಾವುದೇ ಕ್ರಮ ಜರುಗಿಸಲಾಗಿಲ್ಲ ಎಂದರು.
ಮುಖ್ಯವಾಗಿ ಮರಳುಗಾರಿಕೆ ಮಾಡಲು ಹಕ್ಕು ಕೊಟ್ಟಿರುವುದು ಕೆ.ಆರ್.ಐ.ಡಿ.ಎಲ್. ಹೆಸರು ಮಾತ್ರ ಕೆ.ಆರ್.ಐ.ಡಿ.ಎಲ್. ಇದರ ಡೀಲ್ ಮಾತರ್ ಸಚಿವರ ಸಂಬAಧಿಕರದ್ದೇ ಆಗಿದೆ ಎಂದ ಶ್ರೀಗಳು, ಇಲ್ಲಿ ಏನಿದ್ದರೂ ಅಳಿಯ, ಬೀಗರು, ಮಾವ ಇವರದೇ ದರಬಾರು, ಅಲ್ಲದೇ ಮರಳು ಲೂಟಿ ಮಾಡುವವರೇ ಸಚಿವ ಸಂಬAಧಿಕರು, ಆಪ್ತರಾಗಿದ್ದಾರೆ ಎಂದು ಅವರು ನೇರವಾಗಿ ಆರೋಪಿಸಿದರು.
ಕೇವಲ, ಎಸಿ, ತಹಸೀಲ್ದಾರ, ಗಣಿ ಉಪನಿರ್ದೇಶಕರಿಗೆ ಮಾತ್ರ ನೋಟಿಸ್ ಕೊಟ್ಟಿದ್ದು, ಸರಕಾರ ನೇಮಿಸಿದ ಕೆ.ಆರ್.ಐ.ಡಿ.ಎಲ್. ಗೆ ಯಾಕೆ ನೋಟಿಸ್ ಕೋಟ್ಟಿಲ್ಲ. ಅವರನ್ನು ಹೊರತುಪಡಿಸಿ ಉಳಿದವರಿಗೆ ನೋಟಿಸ್ ಕೊಡಲು ಯಾರದಾದರೂ ಇವರಿಗೆ ನಿರ್ದೇಶನ ಇತ್ತಾ. ಅಲ್ಲದೇ ಸ್ಪಷ್ಟವಾಗಿ ಬಳ್ಳಾರಿಯಿಂದ ಬಂದ ತನಿಖೆ ತಂಡ ಇಲ್ಲಿ ಮರಳುಗಣಿಗಾರಿಕೆ ಮಾಡಲು ಕೊಟ್ಟಂತಹ 40 ಏಕರೆ ಜಮೀನನ್ನು ಬಿಟ್ಟು ಬೇರೆ ಕಡೆನೂ ಮರಳಿಗಾರಿಕೆ ಮಾಡಿರುವ ಮಾಹಿತಿ ಕಲೆಹಾಕಿದ್ದು, ಅವರು ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ. ಅಕ್ರಮ ಸಾಬೀತಾಗಿದೆ. ಇಷ್ಟಿದದರೂ ಕೆ.ಆರ್.ಐ.ಡಿ.ಎಲ್. ನವರಿಗೆ ಜಿಲ್ಲಾಧಿಕಾರಿಗಳು ನೋಟಿಸ್ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಒಳ್ಳೆ ಹೆಸರನ್ನು ಮಾಡಿರುವ ಜಿಲ್ಲಾಧಿಕಾರಿಗಳು, ಸರಕಾರದ ನಿಯಮಾನುಸಾರ ನೋಟಿಸ್‌ನ್ನು ಕೊಟ್ಟಿದ್ದೀರಿ. 24 ಗಂಟೆಯೊಳಗೆ ಉತ್ತರ ನೀಡಲು ಕೂಡ ಉಲ್ಲೇಖಿಸಲಾಗಿದೆ. ಆದರೆ ಇಲ್ಲಿಯವರೆಗೂ ಆ ಅಧಿಕಾರಿಗಳ ಮೇಲೆ ಯಾಕೆ ಕ್ರಮಗೈಗೊಂಡಿಲ್ಲ. ಅಧಿಕಾರಿಗಳ ಸಸ್ಪೇಷನ್ ಆದೇಶ ಜಾರಿ ಮಾಡಿಲ್ಲ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲ್ಲ. ಇಂತAಥ ಕ್ರಮಕೈಗೊಳ್ಳದಿರುವುದಕ್ಕೆ ನಿಮ್ಮ ಕೈ ಕಟ್ಟಿ ಹಾಕರುವುದು ಯಾರು? ಇಂತಹ ಅಕ್ರಮ ನಡೆದಿರುವ ಬಗ್ಗೆ ಗುಲ್ಲೇದಿರುವುಕ್ಕೆ ಕ್ರಮದ ಪುಸ್ತಕ ಹೇಗೆ ತೆರೆದಿದ್ದೀರಿ, ಅದೇ ರೀತಿ ಮುಚ್ಚಬೇಕು, ಯಾವೊಬ್ಬ ಅಧಿಕಾರಿಗೂ ಕೂಡ ಹಾನಿಯಾಗಬಾರದು ಎಂಬ ಕಟ್ಟಾಪ್ಪಣೆಗಳು ಹೊರಡಿಸಿದ್ದರ ಕಾರಣ, ಇಂತಹ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳವುಲ್ಲಿ ಜಿಲ್ಲಾಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
ರಬ್ಬರ್ ಸ್ಟಾಂಪ್ ಡಿಸಿ:
ನಾನು ಪದೇ ಪದೇ ಹೇಳುವಂತೆ ಇಲ್ಲಿನ ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಅನತಿಯಂತ ಕೆಲಸ ಮಾಡುತ್ತಿದ್ದು, ಅವರು ರಬ್ಬರ್‌ಸ್ಟಾö್ಯಂಪ್ ಡಿಸಿ ಆಗಿರುವುದಕ್ಕೆ ಈಗ ನಡೆದಿರುವ ಅಕ್ರಮ ಘಟನೆಗಳೇ ಸಾಬೀತಾಗಿದೆ.
ಅಕ್ರಮ ಮರುಳುಗಣಿಗಾರಿಕೆ ನಡೆಸಿದ್ದದರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಅಕ್ರಮ ಮರಳು ಗಣಿಗಾರಿಯಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಂಡು ಅವರ ಸಂಬಳದಲ್ಲಿ ನಡೆದ ಅಕ್ರಮ ಅವ್ಯವಹಾರದ ಹಣವನ್ನು ಕಟ್ ಮಾಡಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಇಲ್ಲದ್ದಿದ್ದರೆ ನಾವು ಹೈಕೋರ್ಟ ಮೇಟ್ಟಿಲೇರುವುದಾಗಿ ಶಿವಸೇನಾ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಂದೋಲಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here