ಕಲಬುರಗಿ: ಭ್ರಷ್ಟಾಚಾರ, ದುರಾಡಳಿತ ಕುರಿತು ಸಾಲು ಸಾಲು ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ಸಿದ್ದರಾಜು. ಎಸ್.ಪಿ -ಮಾರ್ಗದರ್ಶನದಲ್ಲಿ ನೇತೃತ್ವದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಮೂರು ವಲಯ ಕಚೇರಿ ಸೇರಿ ಪಾಲಿಕೆಯ ಸುತ್ತಮುತ್ತಲಿನ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲಿಸಿದರು.
ಸರ್ಚ್ ವಾರೆಂಟ್ ಸಮೇತ ದಾಳಿ ನಡೆಸಿದ ಲೋಕಾಯುಕ್ತ ತಂಡ,ಈ ವೇಳೆ ಪಾಲಿಕೆ ಅಧಿಕಾರಿಗಳನ್ನು ಲೋಕಾಯುಕ್ತ ಎಸ್.ಪಿ ಸಿದ್ದರಾಜು ಅವರು ತೀವ್ರ ತರಾಟೆಗೆ ತೆಗೆದುಕೊಂಡರು.

ವಲಯ ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ-೧, ವಲಯ ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ-೨ ವಲಯ ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ-೩, ಸ್ನೇಹ ಬಿಲ್ಡರ್ಸ್ ರಿಯಲ್ ಸ್ಟೇಟ್ ಸೆಂಟರ್ ಮಿನಿ ವಿಧಾನಸೌಧ ರೋಡ್ ಎಸ್. ಬಿ. ಬಿಲ್ಡಿಂಗ್ ಪ್ಲಾನ್ ಜಗತ್ ಸರ್ಕಲ್, ಜೆರಾಕ್ಸ್ ಮತ್ತು ಡಿಟಿಪಿ ಸೆಂಟರ್. ಮಹಾನಗರ ಪಾಲಿಕೆ. ಬಿಲ್ಡಿಂಗ್. ಆವರಣ. ಜಗತ್ ಸರ್ಕಲ್, ಎಸ್.ಬಿ. ಜಿಲ್ಡಿಂಗ್ ಪ್ಯಾನ್ಸ್, ಮಹಾನಗರ ಪಾಲಿಕೆ ಕಛೇರಿ ಎದುರುಗಡೆ, ಅನ್ನಪೂರ್ಣ ಕ್ರಾಸ್ ಕಡೆಗೆ ಹೋಗುವ ರಸ್ತೆ ಜಗತ್ ವೃತ್ತ, ಪಾಲಿಕೆಯ ಪತ್ರದ ವಿಭಾಗ ಸೇರಿದಂತೆ ಹಲವು ಕಡತಗಳನ್ನು ಪರಿಶೀಲನೆ ನಡೆಸಿದರು.
ಸರ್ಕಾರಿ ಪಂಚರು, ಪೊಲೀಸ್ ಅಧಿಕಾರಿಗಳು ಮತ್ತು. ಸಿಬ್ಬಂದಿಗಳು, ೮೦ ಅಧಿಕಾರಿಗಳು, ಪೊಲೀಸರು ಸೇರಿ ಒಟ್ಟು ಏಳು ವಿಶೇಷ ತಂಡಗಳನ್ನು ರಚನೆ ಮಾಡಿರುವ ಎಸ್.ಪಿ. ಸಿದ್ಧರಾಜು ಅವರು, ಮಹಾನಗರ ಪಾಲಿಕೆಯ ವಲಯಗಳ ಕಛೇರಿಗಳಲ್ಲಿನ ಅಧಿಕಾರಿಗಳ ವಿಚಾರಣೆ ಹಾಗೂ ಅಲ್ಲಿನ ಶೋಧ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದು, ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದರು.