ಕಲಬುರಗಿ,ಸೆ.೧೫:ಪ್ರದೇಶದ ಹೃದ್ರೋಗಿಗಳಿಗೆ ಗೊಲ್ಡನ್ ಹವರ್ ನಲ್ಲಿಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿಯ ಆರ್ಥಿಕ ನೆರವಿನ “ಕೆ.ಕೆ.ಅರ್.ಡಿ.ಬಿ ಹಾರ್ಟ್ ಲೈನ್” ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.೧೭ ರಂದು ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ಸೋಮವಾರ ಕಲಬುರಗಿ ನಗರದಲ್ಲಿರುವ ಮಂಡಳಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ಜೀವನಶೈಲಿ ಕಾರಣ ಹದಿಹರೆಯದ ಯುವಕರು, ೪೦ಕ್ಕಿಂತ ಕಡಿಮೆ ವಯಸ್ಸಿನವರಲ್ಲಿಯೂ ಹಾರ್ಟ್ ಅಟ್ಯಾಕ್ ಕಾಣುತ್ತಿದ್ದೇವೆ. ಕಳೆದ ೩ ವರ್ಷದಲ್ಲಿ ಜಯದೇವ ಆಸ್ಪತ್ರೆಯ ಅಂಕಿ ಸಂಖ್ಯೆ ಪ್ರಕಾರ ಹೃದಯಾಘಾತದಿಂದ ನಿಧನ ಹೊಂದಿದ ೧,೦೦೪ ರಲ್ಲಿ ೪೫ ವಯಸ್ಸಿಗ್ಗಿಂತ ಕಡಿಮೆ ಇರುವ ೪೭೭ ಜನ ಸಾವಪ್ಪಿದ್ದಾರೆ. ಹೀಗಾಗಿ ಹೃದಯಾಘಾತದಿಂದ ಸಾವು ತಪ್ಪಿಸುವ ನಿಟ್ಟಿನಲ್ಲಿ ಈ ಹಾರ್ಟ್ ಲೈನ್ ಯೋಜನೆ ಆರಂಭಿಸಲಾಗುತ್ತಿದೆ ಎಂದರು.
ಈ ಯೋಜನೆಯಡಿ ಕಲಬುರಗಿ ಜಿಲ್ಲೆಗೆ ೯, ಬೀದರ-೪, ಯಾದಗಿರಿ-೨, ರಾಯಚೂರು-೫, ಬಳ್ಳಾರಿ-೪, ಕೊಪ್ಪಳ-೫, ವಿಜಯನಗರ-೩ ಸೇರಿದಂತೆ ಒಟ್ಟು ಅತ್ಯಾಧುನಿಕ ೩೨ ಅಂಬುಲೆನ್ಸ್ ವಾಹನಗಳನ್ನು ಒದಗಿಸಲಾಗಿದೆ. ಕಾರ್ಡಿಯಕ್ ಮಾನಿಟರ್, ಡೆಫಿಬ್ರಿಲೇಟರ್, ಪೋರ್ಟೇಬಲ್ ವೆಂಟಿಲೇಟರ್, ಅಂಬು ಬ್ಯಾಗ್, ಎಮರ್ಜೆನ್ಸಿ ಡ್ರಗ್ಸ್ ಸೇವೆಗಳನ್ನು ಈ ಅಂಬುಲೆನ್ಸ್ ಹೊಂದಿವೆ ಎಂದರು.

೩೨ ಅಂಬುಲೆನ್ಸ್ ವಾಹನಗಳು ಪ್ರದೇಶದ ತಾಲೂಕಾ, ಸಮುದಾಯ ಆರೋಗ್ಯ ಆಸ್ಪತ್ರೆಗಳಿಗೆ ಹಂಚಿಕೆ ಮಾಡಿದ್ದು, ತಲಾ ೯.೬೪ ಕೋಟಿ ರೂ. ವೆಚ್ಚದಲ್ಲಿ ಖರೀದಿಸಿದ ಅಂಬುಲೆನ್ಸ್ (ಬಿ.ಎಲ್.ಎಸ್) ಅರೋಗ್ಯ ಇಲಾಖೆಗೆ ಹಸ್ತಾಂತರಿಸಿದೆ. ಪ್ರಸ್ತುತ ಇರುವ ೪೯ ಅಂಬುಲೆನ್ಸ್ ಸೇರಿದಂತೆ ಒಟ್ಟಾರೆ ೮೧ ಅಂಬುಲೆನ್ಸ್ ವಾಹನಗಳು ಪ್ರದೇಶದ ಆರೋಗ್ಯ ಸೇವೆಗಳು ಲಭ್ಯವಾಗಲಿವೆ ಎಂದರು.
ಮAಡಳಿಯಿAದ ಕಳೆದ ೨ ವರ್ಷಗಳಲ್ಲಿ “ಆರೋಗ್ಯ ಆವಿಷ್ಕಾರ” ಯೋಜನೆಯಡಿ ಸುಮಾರು ೨,೦೦೦ ಕೋಟಿ ರೂ. ಒದಗಿಸಿದ್ದೇವೆ. ಪ್ರಸಕ್ತ ವರ್ಷ ಸಹ ಖಬುರಗಿಯಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ೪೦ ಕೋಟಿ ರೂ., ಬೀದರ ವೈದ್ಯಕೀಯ ಸಂಸ್ಥೆಯ ಅಸ್ಒತ್ರೆಯಲ್ಲಿ ಕ್ಯಾನ್ರ್ ವಿಭಾಗ ಅರಂಭಿಸಲು ೧೮ ಕೋಟಿ ರೂ., ಖಬುರಗಿಯ ಜಿಮ್ಸ್ ಅಧೀನದಲ್ಲಿ ಎಂಡೋಕ್ರೋನೊಲೋಜಿ ಘಟಕ ಸ್ಥಾಪನೆಗೆ ೧೮ ಕೋಟಿ ರೂ., ಕಲಬುರಗಿಯಲ್ಲಿ ನಿಮ್ಹಾನ್ಸ್ ಶಾಖೆ ಸ್ಥಾಪನೆಗೆ ೩೪ ಕೋಟಿ ರೂ., ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ೩೪ ಕೋಟಿ ರೂ., ರಾಯಚೂರಿನ ರಾಜೀವ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ೧೭ ಕೋಟಿ ರೂ. ಹಾಗೂ ಯಲಬುರ್ಗಾ, ಜೇವರ್ಗಿ ಹಾಗೂ ಕೊಪ್ಪಳನಲ್ಲಿ ತಲಾ ೬ ಕೋಟಿ ರೂ. ವೆಚ್ಚದಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆ ಮತ್ತು ಕಲಬುರಗಿಯಲ್ಲಿ ಆರೋಗ್ಯ ಭವನ ನಿರ್ಮಾಣಕ್ಕೆ ಮಂಡಳಿ ಅನುದಾನ ನೀಡುತ್ತಿದೆ ಎಂದರು.
ಹಬ್ & ಸ್ಪೋಕ್ ಮಾದರಿಯಲ್ಲಿ ಚಿಕಿತ್ಸೆ:
ಕೆ.ಕೆ.ಆರ್.ಡಿ.ಬಿ ಹಾರ್ಟ್ ಲೈನ್ ಯೋಜನೆ ಹಬ್ & ಸ್ಪೋಕ್ ಮಾದರಿಯಲ್ಲಿ ಚಿಕಿತ್ಸೆ ನೀಡುವ ಯೋಜನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಯಾವುದೇ ವ್ಯಕ್ತಿ ಹೃದಯಾಘಾತಕ್ಕೆ ಒಳಗಾದಲ್ಲಿ ಅಂಬುಲೆನ್ಸ್ ಗೆ ಕರೆ ಮಾಡಿದಾಗ ಹತ್ತಿರದ ತಾಲೂಕಾ ಆಸ್ಪತ್ರೆಗಳಿಗೆ ರೋಗಿಗಳನ್ನು ಸಂಪರ್ಕಿಸಲು ತಿಳಿಸಲಾಗುತ್ತದೆ. ಅಲ್ಲಿ ಹೃದ್ರೋಗಿಗಳಿಗೆ ಜಯದೇವ ಆಸ್ಪತ್ರೆಯ ತಜ್ಞ ವೈದ್ಯರ ಸಲಹೆ ಪಡೆದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಜಯದೇವ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಇನ್ನು ತಾಲೂಕಾ ಆಸ್ಪತ್ರೆಯಲ್ಲಿ ೧೨ ಚಾನೆಲ್ ಇ.ಸಿ.ಜಿ, ಎನ್.ಐ.ಬಿ.ಪಿ., ಎಸ್.ಪಿ.ಓ-೨, ಮೊಬೈಲ್ ಫೋನ್, ಲ್ಯಾಪಟಾಪ, ಪ್ರಿಂಟರ್ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ಕಲಬುರಗಿ, ಬೀದರ, ಯಾದಗಿರಿ, ರಾಯಚೂರು ಜಿಲ್ಲೆಯ ಕೆಲವು ಆಸ್ಪತ್ರೆಗಳು
ಕಲಬುರಗಿಯ ಜಯದೇವ ಆಸ್ಪತ್ರೆಯ ಹಬ್ ಗೆ, ಕೊಪ್ಪಳ ಜಿಲ್ಲೆಯ ಅಸ್ಪತ್ರೆಗಳು ಬಾಗಲಕೋಟೆಯ ಹಬ್ ಗೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಅಸ್ಪತ್ರೆಗಳು ಬಳ್ಳಾರಿ ಹಬ್ ಗೆ ಒಳಪಡಲಿವೆ. ಮುಂದಿನ ದಿನದಲ್ಲಿ ಸಮುದಾಯ ಅರೋಗ್ಯ ಕೇಂದ್ರದ ವರೆಗೂ ಈ ಸೇವೆ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದು ಡಾ.ಅಜಯ್ ಸಿಂಗ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್, ಉಪ ಕಾರ್ಯದರ್ಶಿ ಮಂಜುನಾಥ ಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ, ಉಪನಿರ್ದೇಶಕ ಡಾ.ಅಂಬರಾಯ ರುದ್ರವಾಡಿ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ ಇದ್ದರು.