23ರಂದು ಡಾ. ಎಸ್. ಎಸ್. ಪಾಟೀಲ್ ಪುಣ್ಯಸ್ಮರಣೋತ್ಸವ ಪಿ.ಎಸ್. ಶಂಕರ್, ಮಲ್ಲಿಕಾ ಘಂಟಿ, ಅಕ್ಕೋಣಿ ಸೇರಿ ಆರು ಜನರಿಗೆ 2025ನೇ ಸಾಲಿನ ಕರ್ಮಯೋಗಿ ಪ್ರಶಸ್ತಿ

0
268

ಕಲಬುರಗಿ, ಅ. 22:ಕರ್ಮಯೋಗಿ ಡಾ. ಎಸ್. ಎಸ್. ಪಾಟೀಲರ್ 3ನೇ ಪುಣ್ಯಸ್ಮರೋತ್ಸವ ಹಾಗೂ ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭವು ನಾಳೆ ದಿನಾಂಕ 23-08-2025ರಂದು ಸಂಜೆ 5 ಗಂಟೆಗೆ ನಗರದ ಕೋರಂಟಿ ಹನುಮಾನ ದೇವಸ್ಥಾನದ ಹತ್ತಿರದ ನಾಗನಹಳ್ಳಿ ರಸ್ತೆಯಲ್ಲಿರುವ ಜಸ್ಟ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷರೂ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ನಾಡೋಜ ಡಾ. ಮನು ಬಳಿಗಾರ್ ಅವರು ಹೇಳಿದ್ದಾರೆ.
ಅವರು ಶುಕ್ರವಾರ ಇಲ್ಲಿ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಕರ್ಮಯೋಗಿ ಪ್ರಶಸ್ತಿಯನ್ನು ಈ ಬಾರಿಯೂ ಕೂಡ ಐದು ಜನ ಸಾಧಕರಿಗೆ ನೀಡಲಾಗುತ್ತಿದ್ದು, ಇದು 3ನೇ ಪಶಸ್ತಿ ಪ್ರದಾನವಾಗಿದ್ದು, ಈ ಮುಂಚೆ ಎರಡು ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 10 ಜನ ಸಾಧಕರಿಗೆ ಪಶಸ್ತಿ ನೀಡಲಾಗಿದೆ, ಅದರಲ್ಲೂ ವಿಶೇಷವಾಗಿ ಈ ಪ್ರಶಸ್ತಿ ಕಲ್ಯಾಣ ಕರ್ನಾಟಕದ ಭಾಗಕ್ಕೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದ್ದು, ಈ ಭಾಗದಲ್ಲಿ ಹಲವಾರು ಕ್ಷೇತ್ರಗಳಲ್ಲಿನ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಲಾಗಿದೆ ಎಂದರು.

ಪ್ರಶಸ್ತಿಯು 50 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿದ್ದು, ಪುರಸ್ಕೃತರಿಗೆ ವಸತಿ, ಸಾರಿಗೆ, ಉಟೋಪಚಾರದ ವ್ಯವಸ್ಥೆ ಮಾಡಲಾಗಿದೆ.
ಕಡಗಂಚಿಯ ಸಂಸ್ಥಾನಮಠದ ಶ್ರೀ ಷ. ಬ್ರ. ವೀರತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಲಿರುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಡಾ. ಬಿ. ಜಿ. ಪಾಟೀಲ್, ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ಆಗಮಿಸಲಿದ್ದಾರೆ.
ಎಸ್. ಆರ್. ಪಾಟೀಲ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀಮತಿ ಸರೋಜಿನಿದೇವಿ ಎಸ್. ಪಾಟೀಲ್ ಘನ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕರಾದ ಬಸಂತಕುಮಾರ ಪಾಟೀಲ್, ಪಾಟೀಲ್ ಗ್ರೂಪ್ ಅಫ್ ಇಂಡಸ್ಟಿçನ್ ಅಧ್ಯಕ್ಷರಾದ ಡಾ. ಲಿಂಗರಾಜ ಎಸ್. ಪಾಟೀಲ್, ಉದ್ಯಮಿಗಳಾದ ಆರ್. ಜಿ. ಪಾಟೀಲ್ ಮತ್ತು ಪಾಟೀಲ್ ಗ್ರೂಪ್ ಗ್ರೂಪ್ ಅಫ್ ಇಂಡಸ್ಟಿçನ್ ನಿರ್ದೇಶಕರಾದ ಸಿದ್ಧಲಿಂಗ್ ಎಸ್. ಪಾಟೀಲ್ ಅವರು ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಕರ್ಮಯೋಗಿ ಪ್ರಶಸ್ತಿ ಪ್ರದಾನ ಮಾಡಲುತ್ತಿದ್ದು, ಈ ಪ್ರಶಸ್ತಿಗೆ ವೈದ್ಯಕೀಯ ಕ್ಷೇತ್ರದಿಂದ ಪ್ರಸಿದ್ಧ ವೈದ್ಯರು, ವೈದ್ಯ ಸಾಹಿತಿಗಳು, ಲೇಖಕರೂ ಆದ ನಾಡೋಜ ಡಾ. ಪಿ. ಎಸ್. ಶಂಕರ, ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಫ್ರೋ. ಮಲ್ಲಿಕಾ ಎಸ್. ಘಂಟಿ, ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಉದ್ದಮಿ ರಾಘವೇಂದ್ರ ಮೈಲಾಪೂರ, ಸಾಹಿತ್ಯ ಕ್ಷೇತ್ರದಿಂದ ಹಿರಿಯ ಸಾಹಿತಿಗಳಾದ ಡಾ. ಸ್ವಾಮಿರಾವ ಕುಲಕರ್ಣಿ, ಜ್ಞಾನ ಪ್ರಸಾರ ಕ್ಷೇತ್ರದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಹಾಗೂ ವಾರ್ತಾ ಇಲಾಖೆಯ ನಿವೃತ್ತ ಉಪನಿರ್ದೇಶಕರೂ ಆಗಿದ್ದ ಅಪ್ಪಾರಾವ ಅಕ್ಕೋಣಿ ಹಾಗೂ ಲಲಿತ ಕಲೆ ಕ್ಷೇತ್ರದಿಂದ ಬೀದರಿನ ಖ್ಯಾತ ಕಲಾವಿದರಾದ ಚಂದ್ರಶೇಖರ ಭೀ. ಸೋಮಶೆಟ್ಟಿ ಅವರುಗಳಿಗೆ ಕರ್ಮಯೋಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ವಿವರಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಮನು ಬಳಿಗಾರ್ ಅವರೊಂದಿಗೆ ಸಿದ್ದಲಿಂಗ್ ಎಸ್. ಪಾಟೀಲ್, ಅಭಿಜಿತ್ ಸಿಂಧೆ, ಸಂದೀಪ ಬಿ. ಮಾಳಗೆ, ನಾಗರಾಜ ಸಾಲೋಳ್ಳಿ ಮತ್ತು ನಾಗೇಶ ಬಿ. ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here