ಕಲಬುರಗಿ, ಆ. 20:ಜಿಲ್ಲೆಯ ಕಾಳಗಿ ತಾಲೂಕ ಪಟ್ಟಣ ಪಂಚಾಯತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯ ಗಳಿಸಿದೆ. ಒಟ್ಟು 11 ಸದಸ್ಯ ಬಲದ ಈ ಪಟ್ಟಣ ಪಂಚಾಯತ್‌ದಲ್ಲಿ ಕಾಂಗ್ರೆಸ್ ಪಕ್ಷದ 6 ಸದಸ್ಯರು, ಬಿಜೆಪಿಯ 5 ಸದಸ್ಯರು ಆಯ್ಕೆಯಾಗಿದ್ದಾರೆ.
ತೀವ್ರ ಹಣಾಹಣಿಯ ಕ್ಷೇತ್ರವಾಗಿದ್ದ ಇಲ್ಲಿ ಕಾಂಗೈ ಮತ್ತು ಬಿಜೆಪಿ ಪಕ್ಷಗಳ ಮಧ್ಯೆ ಗೆಲುವಿಗಾಗಿ ತೀವ್ರ ಕಸರತ್ತು ನಡೆದಿತ್ತು, ಅಂತಿಮವಾಗಿ ಇಂದು ಫಲಿತಾಂಶ ಪ್ರಕಟವಾಗಿ ಕಾಂಗೈ ಒಂದು ಕ್ಷೇತ್ರದಲ್ಲಿ ಹೆಚ್ಚಿನ ಸ್ಥಾನಗಳಿಸುವ ಮೂಲಕ ಬಿಜೆಪಿಗೆ ಪೆಟ್ಟು ನೀಡಿದೆ.
ವಾರ್ಡ ನಂ. 5ರ ಕಾಂಗೈ ಅಭ್ಯರ್ಥಿಯೊಬ್ಬರು ಕೇವಲ 2 ಮತಗಳ ಅಂತರದಿAದ ಬಿಜೆಪಿ ಅಭ್ಯರ್ಥಿ ಎದುರು ಪರಾಭವಗೊಂಡಿದ್ದಾರೆ. ಇದೇ ಆಗಸ್ಟ 17ರಂದು ಈ ಪಟ್ಟಣ ಪಂಚಾಯತ್‌ನ 11 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.
ಕಾಂಗ್ರೆಸ್ ಪಕ್ಷದ ಪರವಾಗಿ ಜಿಡಿಎ ಅಧ್ಯಕ್ಷ ಮಜರಖಾನ್ ಆಲಂಖಾನ, ಕಾಂಗೈ ಮುಖಂಡರಾದ ಕಿರಣ ದೇಶಮುಖ ಮತ್ತು ಸಿದ್ಧಾರ್ಥ ಕೋರವಾರ ಅವರು ವೀಕ್ಷಕರಾಗಿದ್ದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ವಿಜಯಗೊಳಿಸಿದ ಕಾಳಗಿ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ವಿಶೇಷವಾಗಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮತ್ತು ರಾಜೇಶ ಗುತ್ತೇದಾರ ಅವರುಗಳನ್ನು ಜಿಡಿಎ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮಜರಖಾನ್ ಆಲಂಖಾನ ಅವರು ಅಭಿನಂದಿಸಿದ್ದಾರೆ.
ಪಟ್ಟಣ ಪಂಚಾಯತ್‌ನ ವಾರ್ಡ ನಂ. 1, 2, 3, 6, 7 ಮತ್ತು 8ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದರೆ ಬಿಜೆಪಿಯಿಂದ ವಾರ್ಡ ನಂ. 4, 5, 9, 10 ಮತ್ತು 11ರಲ್ಲಿ ವಿಜಯಿಯಾಗಿದ್ದಾರೆ.
ಜಯಗಳಿಸಿದ್ದ ಅಭ್ಯರ್ಥಿಗಳ ವಿವಿರ ಇಂತದೆ. ವಾರ್ಡ ನಂ. 1 ರಿಂದ ಗುರುರಾಜ ತಂದೆ ತಿಪ್ಪಯ್ಯ ಮರತೂರ, ವಾರ್ಡ ನಂ. 2 ರಿಂದ ಬಸವರಾಜ ತಂದೆ ಪರಮೇಶ್ವರ ಮಡಿವಾಳ, ವಾರ್ಡ ನಂ. 3 ರಿಂದ ಶ್ರೀಮತಿ ಲಲಿತಾಬಾಯಿ ಸಿದ್ರಾಮಪ್ಪ ಕಮಲಾಪೂರ, ವಾರ್ಡ ನಂ. 6 ರಿಂz ಶ್ರೀಮತಿ ಸಹಲಿಯಾ ಬೇಗಂ ಬಿಜಾಪೂರ, ವಾರ್ಡ ನಂ. 7ರಿಂದ ಶರಣಪ್ಪ ಬೇಲೂರ, ವಾರ್ಡ ನಂ. 8 ರಿಂದ ಉಷಾರಾಣಿ ದತ್ತಾತ್ರೇಯ ಗುತ್ತೇದಾರ.
ಬಿಜೆಪಿಯಿಂದ ವಾರ್ಡ ನಂ. 4ರ ಶ್ರೀಮತಿ ಪಾರ್ವತಿ ಗಂಡ ಜಗನ್ನಾಥ, ವಾರ್ಡ ನಂ. 5 ರಿಂದ ರವಿದಾಸ ಎಸ್. ಪತಂಗೆ, ವಾರ್ಡ ನಂ. 10 ವಿಜಯಕುಮಾರ ಶಂಕರ ಜಾಧವ, ಮತ್ತು ವಾರ್ಡ ನಂ. 11 ರಿಂದ ಶ್ರೀಮತಿ ಪೂಜಾ ರಾಜು ರಾಠೋಡ ಅವರು ಜಯಗಳಿಸಿದ್ದರೆ.