ಕಲಬುರಗಿ ಪಾಲಿಕೆ ಉಳಿಸಿಕೊಂಡ ಕಾಂಗೈ ಮೇಯರ್ ಆಗಿ ವರ್ಷಾ ಜಾನೆ ಡೆಪ್ಟಿ ಮೇಯರಾಗಿ ತೃಪ್ತಿ ಅಲ್ಲದ ಆಯ್ಕೆ

0
701

ಕಲಬುರಗಿ: ಆ. 07:ಕಲಬುರಗಿ ಮಹಾನಗರ ಪಾಲಿಕೆಯ 23 ನೇ ಅವಧಿಯ ಚುನಾವಣೆಯಲ್ಲಿ ಮಹಾಪೌರರಾಗಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ವರ್ಗದ ಅಭ್ಯರ್ಥಿ ಶ್ರೀಮತಿ ವರ್ಷಾ ಜಾನೆ, ಉಪ ಮಹಾಪೌರರಾಗಿ ಹಿಂದುಳಿದ ವರ್ಗದ ಆಭ್ಯರ್ಥಿ ಶ್ರೀಮತಿ ತೃಪ್ತಿ ಶಿವಶರಣಪ್ಪ ಅಲ್ಲದ್ ಲಾಖೆ ಆಯ್ಕೆಯಾಗಿದ್ದಾರೆ.
ಗುರುವಾರದಂದು ನಗರದ ಇಂದಿರಾ ಸ್ಮಾರಕ ಭವನದಲ್ಲಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಅವರ ಅಧ್ಯಕ್ಷತೆಯಲ್ಲಿ 23 ನೇ ಅವಧಿಗೆ ಮಹಾಪೌರ ಮತ್ತು ಉಪಮಹಾಪೌರರ ಚುನಾವಣೆ ನಡೆಸಲಾಯಿತು.
ಚುನಾವಣೆಯಲ್ಲಿ ಒಟ್ಟು 66 ಸದಸ್ಯರ ಪೈಕಿ 63 ಸದಸ್ಯರು ಹಾಜರಿದ್ದು. ಅದರಲ್ಲಿ 55 ಜನ ವಾರ್ಡ್ ಕಾರ್ಪೋರೇಟರಗಳು 3 ಜನ ಎಮ್.ಎಲ್.ಎ. ಗಳು 6 ಜನ ಎಮ್.ಎಲ್.ಸಿ.ಗಳು ಮತ್ತು 3 ಸದಸ್ಯರು ಗೈರು ಇದ್ದು, ಚುನಾವಣೆಯಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಕೈ ಎತ್ತುವ ಮೂಲಕ ಬೆಂಬಲ ನೀಡಿ ಅಭ್ಯರ್ಥಿಗಳ ಆಯ್ಕೆಗೆ ಬೆಂಬಲ ನೀಡಿದರು.
ಮಹಾಪೌರರ ಸ್ಥಾನಕ್ಕೆ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ವರ್ಷಾ ಜಾನೆ ಅವರು 36 ಬಹುಮತ ಪಡೆದು ಮಹಾಪೌರರಾಗಿ ಆಗಿ ಆಯ್ಕೆಯಾದರು.ಪ್ರತಿ ಸ್ಪರ್ಧಿಯಾಗಿ ಸ್ಪರ್ಧಿಸಿದ ಬಿ.ಜೆ.ಪಿ ಅಭ್ಯರ್ಥಿ ಗಂಗಮ್ಮ ಗಂಡ ಬಸವರಾಜ ಮನ್ನೋಳಿ 27 ಮತಗಳನ್ನು ಪಡೆದುಕೊಂಡರು.
ತೃಪ್ತಿ ಶಿವಶಣರಪ್ಪ 33 ಮತಗಳನ್ನು ಪಡೆದು ಉಪ ಮಹಾಪೌರರಾಗಿ ಆಯ್ಕೆಯಾದರು. ಪ್ರತಿ ಸ್ಪರ್ದಿಯಾಗಿ ಬಿಜೆಪಿ ಅಭ್ಯರ್ಥಿಯಾಗಿ ಪಾರ್ವತಿ ಗಂಡ ರಾಜು 27 ಮತಗಳನ್ನು ಪಡೆದುಕೊಂಡರು,ಜೆಡಿಎಸ್ ಅಭ್ಯರ್ಥಿ ವಿಜಯಲಕ್ಷಿö್ಮÃ 03 ಮತಗಳನ್ನು ಪಡೆದುಕೊಂಡರು.
ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗಾಗಿ ನಡೆಯಬೇಕಿದ್ದ ಚುಣಾವಣೆಯನ್ನು ಮುಂದೂಡಲಾಗಿದೆ.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಹಾಗೂ ಶಾಸಕಿ ಖನೀಜ್ ಫಾತಿಮ್ ದಕ್ಷಿಣ ಮತಕೇತ್ರದ ಶಾಸಕ ಅಲ್ಲಮ್ ಪ್ರಭುಪಾಟೀಲ, ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ತು ಶಾಸಕರುಗಳಾದ ತಿಪ್ಪಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಶಶೀಲ ಜಿ ನಮೋಶಿ, ಡಾ. ಬಿ.ಜಿ. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್ ಸೇರಿದಂತೆ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಸಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿಯ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here