ಕಲಬುರಗಿ, ಆಗಸ್ಟ್. 07:ಜೈನ ಸಮುದಾಯದ ಯುವತಿಯೋರ್ವಳ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬAಧಿಸಿದAತೆ ಹಿಂದು ಸಂಘಟನೆಗಳು ಇದೊಂದು ಲವ್ ಜಿಹಾದ್ ಪ್ರಕಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ, ಯುವತಿ ಪತ್ತೆಗೆ ಯುವತಿ ಪೋಷಕರು ವಿವಿ ಠಾಣೆಗೆ ದೂರು ಕೊಟ್ಟು ಒತ್ತಾಯಿಸಿದ್ದು ಒಂದೇಡೆ ಆದರೆ, ಇನ್ನೊಂದೆಡೆ ಕಾಣೆಯಾದ ಯುವತಿ ಮಿಸ್ಸಿಂಗ್ ಕೇಸ್‌ಗೆ ಕೌಂಟರ್ ಕೊಟ್ಟು ನಾನು ಕಾಣಿಯಾಗಿಲ್ಲ, ಪ್ರೀತಿಸಿದ ಹುಡುಗನೊಂದಿಗೆ ಜೊತೆಯಲ್ಲೇ ಇದಿದ್ದೇನೆ, ನಾನು ಪ್ರಿತಿಸಿದ ಹುಡುಗನ ಮನೆಯವರಿಗೆ, ಅವನ ಸ್ನೇಹಿತರಿಗೆ ತೊಂದರೆ ಕೊಡ್ತಿದ್ದಾರೆ, ಯಾರು ಕೂಡ ಅವರಿಗೆ ತೊಂದರೆ ಕೊಡಬಾರದೆಂದು ಹಾಗೆ ನಾನು ಪ್ರೀತಿಸುವ ವಿಷಯ ನಮ್ಮ ಮನೆಯವರೆಲ್ಲರಿಗೂ ಗೊತ್ತಿತ್ತು. ನಾನು ನನ್ನ ಸ್ವ-ಇಚ್ಚೇಯಿಂದ ಬಂದು ಪ್ರೀತಿಸಿದ ಹುಡಗನೊಂದಿಗೆ ಮದುವೆಯಾಗಿ ಅರಾಮವಾಗಿದ್ದೇ ಎಂದು ತನ್ನ ಪ್ರಿಯಕರ ಮಶಾಕ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ವೈರಲ್ ಆಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಗೊಬ್ಬುರ (ಬಿ) ಗ್ರಾಮದ ಯುವತಿ ಪಲ್ಲವಿ ಅದೇ ಗ್ರಾಮದ ಮಶಾಕ್ ಎಂಬ ಯುವಕ ಜೊತೆ ಓಡಿ ಹೋದ ಯುವತಿಯೇ ಈ ಹೇಳಿಕೆ ಬಿಡುಗಡೆ ಮಾಡಿದ್ದಾಳೆ.
ಅಲ್ಲದೇ ಹಿಂದು ಸಂಘಟನೆಗಳು ಇದೊಂದು ಲವ್ ಜಿಹಾದ್ ಅಂತಾ ಫೇಕ್ ನ್ಯೂಜ್ ಕ್ರಿಯೆಟ್ ಮಾಡ್ತಿದ್ದಾರೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ.
ಅಲ್ಲದೇ ನಮಗೆ ಏನಾದರೂ ತೊಂದರೆ ಆದರೆ ಹಿಂದು ಸಂಘಟನೆಗಳು ಹಾಗೂ ನಮ್ಮ ಪೋಷಕರೇ ನೇರ ಹೊಣೆ ಎಂದು ಜರಿದಿದ್ದಾಳೆ.