ಕಲಬುರಗಿ, ಜು. 22:ಯುವಕನೋರ್ವನ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟ ಗ್ರಾಮದ ಬಳಿಯಿರೋ ಬ್ರೀಡ್ಜ್ನಲ್ಲಿ ಈ ಘಟನೆ ನಡೆದಿದ್ದನ್ನಲಾಗಿದೆ.
ಸಾಕ್ಷಿ ಉಪ್ಪಾರ್ (22) ಎಂಬ ಯುವತಿಯೇ ಬೆಣ್ಣೇತೋರಾ ಡ್ಯಾಂ ಹಿನ್ನಿರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡ ಯುವತಿ ಕಮಲಾಪುರ ತಾಲೂಕಿನ ಭೂಸಣಗಿ ಗ್ರಾಮದ ಯುವತಿಗಿದ್ದಾಳೆ.
ಅಭಿಷೇಕ ಮಾಳಗೆ ಎಂಬ ಯುವಕನಿಂದ ಇಬ್ಬರು ಜೊತೆಗಿರೋ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರಿಂದ ಬೇಸತ್ತು ಯುವತಿ ಸೂಸೈಡ್ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅತ್ಮಹತ್ಯೆಮಾಡಿಕೊಂಡ ಯುವತಿಯ ಮೃತದೇಹ ಹುಟುಕಾಟದಲ್ಲಿ ಅಗ್ನಿಶಾಮಕದ ದಳದ ಸಿಬ್ಬಂದಿ ನಿರತರಾಗಿದ್ದಾರೆ.