ಕಲಬುರ್ಗಿ ಚಿನ್ನದಂಗಡಿ ದರೋಡೆ ಪ್ರಕರಣ: ಮೂವರು ಅಂರ‍್ರಾಜ್ಯ ಕುಖ್ಯಾತ ಆರೋಪಿಗಳ ಸೆರೆ

0
818

ಕಲಬುರ್ಗಿ, ಜು.21- ನಗರದ ಸೂಪರ್ ಮಾರ್ಕೆಟ್‌ನ ಸರಾಫ್ ಬಜಾರ್‌ನಲ್ಲಿ ಕಳೆದ 11ರಂದು ಹಾಡಹಗಲೇ ಮಹ್ಮದ್ ಸಬ್ಕಾತುಲ್ಲಾ ಮಲ್ಲಿಕ್ ತಂದೆ ಮಹ್ಮ ಕಿಬಾರಿಯಾ ಮುಲ್ಲಿಕ್ ಅವರ ಒಡೆತನಕ್ಕೆ ಸೇರಿದ ಚಿನ್ನದ ಅಂಗಡಿಯಲ್ಲಿ ಮೂರು ಕೋಟಿ ರೂ.ಗಳಿಗಿಂತಲೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರು ಕುಖ್ಯಾತ ಅಂತರರಾಜ್ಯ ಆರೋಪಿಗಳನ್ನು ಬಂಧಿಸಿ, ಸುಮಾರು 2.10 ಕೋಟಿ ರೂ.ಗಳ ಮೌಲ್ಯದ ಚಿನ್ನಾಭರಣಗಳು ಹಾಗೂ ಅವರಿಂದ ಸುಮಾರು 4.80 ಲಕ್ಷ ರೂ.ಗಳ ನಗದು ಸೇರಿ ಒಟ್ಟು 2,14,80,000ರೂ.ಗಳ ಮೌಲ್ಯದ ಸ್ವತು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಅವರು ಹೇಳಿದರು.
ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬAಧಿಸಿದAತೆ ಮೂಲತ: ಪಶ್ಚಿಮಬಂಗಾಳದ ಪರಗಣ ಜಿಲ್ಲೆಯ ಕನಸೋನಾ ಗ್ರಾಮದ, ಹಾಲಿ ವಸ್ತಿ ಮುಂಬಯಿಯ ಮನಕುರ್ದ ವೆಸ್ಟ್ನ ಪಿಎಂಜಿ ಕಾಲೋನಿ ನಿವಾಸಿ ಹಾಗೂ ಬಟ್ಟೆ ವ್ಯಾಪಾರಿ ಅಯೋದ್ಯಾ ಪ್ರಸಾದ್ ಚವ್ಹಾಣ್ ತಂದೆ ಸೀತಾರಾಮ್ ಚವ್ಹಾಣ್ (48), ಪಶ್ವಿಮಬಂಗಾಳ್ ಜಿಲ್ಲೆಯ ಹೂಗ್ಲಿ ಜಿಲ್ಲೆಯ ಶಥಿತನ ಗ್ರಾಮದ ಚಿನ್ನದ ವ್ಯಾಪಾರಿ ಫಾರೂಕ್ ಅಹೆಮದ್ ಮುಲ್ಲಿಕ್ ತಂದೆ ಅಬ್ದುಲ್ ವಾಹಬ್ ಮುಲ್ಲಿಕ್ (40) ಮತ್ತು ಮಹಾರಾಷ್ಟçದ ಮುಂಬಯಿ ನಗರದ ಪತ್ರಾಚಾಳ ಮಾನ್ ಕೂರ್ದನ ಟೇಲರ್ ಸೋಹೆಲ್ ಶೇಕ್ ಅಲಿಯಾಸ್ ಬಾದಶಾ ತಂದೆ ಮೊಹ್ಮದ್ ಇಸ್ಮಾಯಿಲ್ ಶೇಕ್ (30) ಅವರನ್ನು ಬಂಧಿಸಲಾಗಿದೆ ಎಂದರು.
ಪ್ರಕರಣದಲ್ಲಿ ಇನ್ನಿಬ್ಬರು ಪರಾರಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ. ಬಂಧಿತರಿAದ ಸುಮಾರು 2.10 ಕೋಟಿ ರೂ.ಗಳ ಮೌಲ್ಯದ ಚಿನ್ನಾಭರಣಗಳು ಜಾಗೂ ನಗದು 4.80 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ದರೋಡೆಕೋರರ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಹೀಗಾಗಿ ಆ ತಂಡಗಳು ಕರ್ನಾಟಕ, ಮಹಾರಾಷ್ಟç, ಉತ್ತರ ಪ್ರದೇಶ, ಪಶ್ಚಿಮಬಂಗಾಳ್, ತೆಲಂಗಾಣ್ ರಾಜ್ಯಗಳಲ್ಲಿ ಕಾರ್ಯಾಚರಣೆ ಕೈಗೊಂಡಿತು ಎಂದು ಅವರು ಹೇಳಿದರು.

ಪ್ರಕರಣಕ್ಕೆ ಸಂಬAಧಿಸಿದAತೆ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಅಂಶಗಳ ಮೂಲಕ ಮೂವರು ದರೋಡೆಕೋರರನ್ನು ಸೆರೆ ಹಿಡಿಯಲಾಗಿದೆ. ಆರೋಪಿಗಳು ದರೋಡೆ ಮಾಡಿದ ನಂತರ ನಗರದಿಂದ ಬಸ್‌ನಲ್ಲಿ ಮುಂಬಯಿಗೆ ಪ್ರಯಾಣ ಬೆಳೆಸಿದ್ದಾರೆ. ನಂತರ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡಿದ್ದಾರೆ. ಪೋಲಿಸ್ ವಿಶೇಷ ತಂಡವು ಆರೋಪಿಗಳ ಬೆನ್ನು ಬಿದ್ದಿದ್ದರಿಂದ ತಾವು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಎಲ್ಲಿಯೂ ಮಾರಾಟ ಮಾಡಲು ಆಗಿಲ್ಲ. ಎಲ್ಲವನ್ನೂ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಅವರು ತಿಳಿಸಿದರು.
ಪ್ರಕರಣದಲ್ಲಿ ಫಾರೂಕ್ ಅಹೆಮದ್ ಮುಲ್ಲಿಕ್ ತಂದೆ ಅಬ್ದುಲ್ ವಾಹಬ್ ಮುಲ್ಲಿಕ್ ಪ್ರಮುಖ ಆರೋಪಿಯಾಗಿದ್ದಾನೆ. ಈತ ನಗರದ ಮೋಮಿನಪುರದಲ್ಲಿ ಕಳೆದ ಮೂರು ವರ್ಷಗಳಿಂದ ಚಿನ್ನದಂಗಡಿಯನ್ನು ಹಾಕಿಕೊಂಡಿದ್ದ. ವ್ಯಾಪಾರ ಸರಿಯಾಗಿ ಆಗದೇ ಇದ್ದುದರಿಂದ ನಷ್ಟದಲ್ಲಿದ್ದ. ಸುಮಾರು 37ರಿಂದ 40 ಲಕ್ಷ ರೂ.ಗಳಷ್ಟು ಸಾಲ ಮಾಡಿಕೊಂಡಿದ್ದ. ಹೀಗಾಗಿ ಪರಿಚಿತ ಅಂಗಡಿಯ ಮಹ್ಮದ್ ಸಬ್ಕಾತುಲ್ಲಾ ಮಲ್ಲಿಕ್ ಅಂಗಡಿಯ ದರೋಡೆ ಕುರಿತು ಸಂಚು ರೂಪಿಸಿದ. ಹಾಗಾಗಿ ಆತ ಪಶ್ಚಿಮಬಂಗಾಳದ ಪರಗಣ ಜಿಲ್ಲೆಯ ಕನಸೋನಾ ಗ್ರಾಮದ, ಹಾಲಿ ವಸ್ತಿ ಮುಂಬಯಿಯ ಮನಕುರ್ದ ವೆಸ್ಟ್ನ ಪಿಎಂಜಿ ಕಾಲೋನಿ ನಿವಾಸಿ ಹಾಗೂ ಬಟ್ಟೆ ವ್ಯಾಪಾರಿ ಅಯೋದ್ಯಾ ಪ್ರಸಾದ್ ಚವ್ಹಾಣ್ ತಂದೆ ಸೀತಾರಾಮ್ ಚವ್ಹಾಣ್‌ನಿಗೆ ಸಂಪರ್ಕಿಸಿದ. ಆತನ ಪತ್ನಿಗೆ ಹೃದಯ ಕಾಯಿಲೆ ಇದ್ದುದರಿಂದ ಆತನೊಂದಿಗೆ ಅತನ ಪತ್ನಿಯನ್ನು ನಗರಕ್ಕೆ ಕರೆತರಿಸಿದ್ದು, ಖ್ವಾಜಾ ಬಂದೇ ನವಾಜ್ ದರ್ಗಾದಲ್ಲಿ ಆ ಕುರಿತು ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದ್ದರು. ನಂತರ ಮೂರನೇ ಆರೋಪಿ ಪಶ್ವಿಮಬಂಗಾಳ್ ಜಿಲ್ಲೆಯ ಹೂಗ್ಲಿ ಜಿಲ್ಲೆಯ ಶಥಿತನ ಗ್ರಾಮದ ಚಿನ್ನದ ವ್ಯಾಪಾರಿ ಫಾರೂಕ್ ಅಹೆಮದ್ ಮುಲ್ಲಿಕ್ ತಂದೆ ಅಬ್ದುಲ್ ವಾಹಬ್ ಮುಲ್ಲಿಕ್ ಅಲ್ಲದೇ ಇನ್ನಿಬ್ಬರು ಆರೋಪಿಗಳು ಸೇರಿ ಒಟ್ಟು ಐವರು ದರೋಡೆ ಪ್ರಕರಣದಲ್ಲಿ ತೊಡಗಿಸಿಕೊಂಡರು ಎಂದು ಅವರು ವಿವರಿಸಿದರು.

ಬಂಧಿತ ಆರೋಪಿ ಅಯೋದ್ಯಾಪ್ರಸಾದ್ ಮೇಲೆ ಮುಂಬಯಿಯಲ್ಲಿ 12 ಬಟ್ಟೆ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ ಅವರು, ಪ್ರಮುಖ ಆರೋಪಿಯ ಮೇಲೆ ಪ್ರಕರಣಗಳು ಕಂಡುಬAದಿಲ್ಲ. ಕಲಬುರ್ಗಿಯಲ್ಲಿ ಚಿನ್ನದ ಅಂಗಡಿಯನ್ನು ಆರಂಭಿಸುವ ಮೊದಲು ದುಬೈದಲ್ಲಿ ಕೆಲಸ ಮಾಡುತ್ತಿದ್ದ. ಟರ್ಕಿ ಗೋಲ್ಡ್ ವ್ಯಾಪಾರದಲ್ಲಿಯೂ ತೊಡಗಿಸಿಕೊಂಡಿದ್ದ. ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಚಿನ್ನಾಭರಣ ತಯಾರಿಸುವ ಕಾರ್ಯಾಗಾರವನ್ನು ಹೊಂದಿದ್ದ ಎಂದು ಅವರು ಹೇಳಿದರು.
ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ತಾವು ಚಿನ್ನದಂಗಡಿಯ ಮಾಲಿಕನಿಗೆ ಚಾಕು ಹಾಗೂ ಲೈಟರ್ ಗನ್‌ನಿಂದ ಹೆದರಿಸಿ ಚಿನ್ನಾಭರಣದ ದೋಚಿದ್ದಾಗಿ ಒಪ್ಪಿಕೊಂಡರು. ಈಗಾಗಲೇ ದರೋಡೆಗೆ ಒಳಗಾಗಿರುವ ಮಾಲಿಕನು ದೂರು ಕೊಟ್ಟಿದ್ದು, ಬೇರೆಯವರ ಚಿನ್ನಾಭರಣಗಳನ್ನೂ ಸಹ ತನ್ನ ಅಂಗಡಿಯಲ್ಲಿ ಇಟ್ಟುಕೊಂಡಿದ್ದು, ಆ ಚಿನ್ನಾಭರಣಗಳ ಕುರಿತು ಮಾಹಿತಿ ಕಲೆಹಾಕಲಾಗುವುದು. ಹೆಚ್ಚಿನ ಚಿನ್ನಾಭರಣ ಪತ್ತೆಯಾಗಿರುವುದರ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ಆಗಿರುವ ಕುರಿತು ಸಹ ಪರಿಶೀಲನೆ ನಡೆಯಲಿದೆ ಎಂದು ಅವರು ತಿಳಿಸಿದರು.
ಪಶ್ಚಿಮಬಂಗಾಳ ಮತ್ತು ಉತ್ತರ ಪ್ರದೇಶ ತಂಡದಲ್ಲಿ ಪಿಐಗಳಾದ ರಾಘವೇಂದ್ರ, ಸೋಮಲಿಂಗ ಕಿರದಳ್ಳಿ, ಶಿವಾನಂದ್ ವಾಲಿಕಾರ್, ಸಿಬ್ಬಂದಿಗಳಾದ ಬಂದೇನವಾಜ್, ಕೇಸುರಾಯ್, ಗುರುನಾಥ, ಮುಂಬಯಿ ತಂಡದಲ್ಲಿ ಪಿಐ ಅರುಣಕುಮಾರ್, ಸಿಬ್ಬಂದಿಗಳಾದ ವೈಜನಾಥ, ಶಿವಲಿಂಗ, ನೀಲಕಂಠ, ಹೈದ್ರಾಬಾದ್ ತಂಡದಲ್ಲಿ ಪ್ರಬಾರ ಪಿಐ ದಿಲೀಪ್ ಸಾಗರ್, ಸಿಬ್ಬಂದಿಗಳಾದ ಮಲ್ಲನಗೌಡ, ಆತ್ಮಕುಮಾರ್, ಜಾವಿದ್, ಸಂಗಣ್ಣ, ಮಲ್ಲಣ್ಣ, ಚಂದ್ರಶೇಖರ್, ತಾಂತ್ರಿಕ ತಂಡದಲ್ಲಿ ಪಿಐಗಳಾದ ಸಂತೋಷ ತಟ್ಟೆಪಳ್ಳಿ, ಶಕೀಲ್ ಅಹ್ಮದ್ ಅಂಗಡಿ, ಸುಶೀಲಕುಮಾರ್, ಸಿಬ್ಬಂದಿಗಳಾದ ಚನ್ನವೀರೇಶ್, ಪ್ರಭಾಕರ್, ಸುಮೀತ್, ಶಶಿಕಾಂತ್ ಅವರು ಕಾರ್ಯಾಚರಣೆ ಕೈಗೊಂಡರು ಎಂದು ಅವರು ಹೇಳಿದರು.
ಕಲಬುರ್ಗಿ ನಗರ ತಂಡದಲ್ಲಿ ದಕ್ಷಿಣ ಸಹಾಯಕ ಪೋಲಿಸ್ ಆಯುಕ್ತ ಶರಣಬಸಪ್ಪ ಸುಬೇದಾರ್, ಮಡೋಳಪ್ಪ ಪಿಎಸ್., ಚಂದ್ರಶೇಕರ್, ಇಸ್ಮಾಯಿಲ್ ಶರೀಫ್, ಪಿಐ ಅನೀಸ್ ಅಹ್ಮದ್ ಮುಜಾವರ್, ಪಿಎಸ್‌ಐಗಳಾದ ಬಸವರಾಜ್, ಶ್ರೀಮತಿ ವಂದನಾ, ಎಎಸ್‌ಐ ಮಲ್ಲಿಕಾರ್ಜುನ್ ಗೌರಾ, ತಿಪ್ಪಣ್ಣ, ಸಿಬ್ಬಂದಿಗಳಾದ ಅಶೋಕ್ ಹಳಗೋದಿ, ಶಿವಪ್ರಕಾಶ್, ಶಶಿಕಾಂತ್, ದೇವಿಂದ್ರಪ್ಪ, ಸಂತೋಷ, ದೇವರಾಜ್ ಅರು ಕಾರ್ಯಾಚರಣೆ ಕೈಗೊಂಡರು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಶಂಸನಾ ಪತ್ರವನ್ನು ಶರಣಪ್ಪ ಎಸ್.ಡಿ., ಅವರು ನೀಡಿದರು. ಸುದ್ದಿಗೋಷ್ಠಿಯಲ್ಲಿ ಉಪ ಪೋಲಿಸ್ ಆಯುಕ್ತರಾದ ಶ್ರೀಮತಿ ಕನಿಕಾ ಸಿಕ್ರಿವಾಲ್, ಪ್ರೀಣ್ ಹೆಚ್. ನಾಯಕ್, ಸಹಾಯಕ ಪೋಲಿಸ್ ಆಯುಕ್ತರಾದ ಶರಣಬಸಪ್ಪ ಸುಬೇದಾರ್, ಮಡೊಳಪ್ಪ ಪಿಎಸ್., ಚಂದ್ರಶೇಖರ್, ಇಸ್ಮಾಯಿಲ್ ಶರೀಫ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here