ಕಲಬುರಗಿ, ಮಾ. 18:ಕಲಬುರಗಿ ನಗರದ ರಾಜಾಪೂರ ಬಡಾವಣೆಯ ಹೊಟೇಲ್ ಮುಂಭಾಗದಲ್ಲಿ ನಡೆದ ಯುವಕನೋರ್ವನ ಕೊಲೆ ಪ್ರಕರಣದ ಮೂರು ಆರೋಪಿಗಳನ್ನು ಪೋಲಿಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರೇವಣಸಿದದಪ್ಪ ಪಾಳೆಕಾರ (33) ಎಂಬ ಯುವಕನನ್ನು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ್‌ವಾಗಿ ಹತ್ಯೆ ಮಾಡಿದ ಆರೋಪಿಗಳು ತಲೆ ಮರೆಸಿಕೊಂಡಿದ್ದರು.
ಕೊಲೆಯಾದ ವ್ಯಕ್ತಿ ಹಾಗೂ ಕೊಲೆ ಮಾಡಿದ ಈ ಮೂರು ಜನ ಆರೋಪಿಗಳು ಸ್ನೇಹಿತರಾಗಿದ್ದರು ಎನ್ನಲಾಗಿದ್ದು, ಮೇಲ್ನೋಟಕ್ಕೆ ಕ್ಷÄಲಕ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದ್ದು, ಕೊಲೆಗೆ ಇನ್ನು ನಿಖರವಾಗಿ ತಿಳಿದುಬಂದಿಲ್ಲ ಎನ್ನಲಾಗಿದೆ.
ನಿನ್ನೆ ಮುಂಜಾನೆ ಕಲಬುರಗಿ ರೈಲು ನಿಲ್ದಾಣದಲ್ಲಿ ಹುಸೇನ್‌ಸಾಗರ್ ಎಕ್ಸಪ್ರೇಸ್ ಮೂಲಕ ಪರಾರಿಯಾಗಲು ಯತ್ನಿಸಿದ ಈ ಘಟನೆಯ ಮುಖ್ಯ ಆರೋಪಿ ಕೃಷ್ಣಾ, ನವೀನ ಮತ್ತು ಅವಿನಾಶ ಎಂಬ ಮೂರು ಜನ ಆರೋಪಿಗಳನ್ನು ಬಂಧಿಸಿದ ಪೋಲಿಸರು ಬಂಧಿತರನ್ನು ಕಲಬುರಗಿ ತಾಲೂಕ ಜೆಎಂಎಫ್‌ಸಿ ನ್ಯಾಯಾಧೀಶರÀ ಮುಂದೆ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತೊಗರಿನಾಡು, ಬಿಸಿಲುನಾಡು, ಶರಣನಾಡು ಎಂಬ ಖ್ಯಾತಿಯೊಂದಿಗೆ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾಗಿರುವ ಕಲಬುರಗಿ ನಗರ ಇತ್ತಿತ್ತಲಾಗಿ ಕೊಲೆಗಡುಕರ ನಗರವಾಗುತ್ತಿರುವುದು ತುಂಬಾ ಖೇದನೀಯವಾಗಿದ್ದು, ಇಂತಹ ಘಟನೆಗಳಿಂದ ನಗರದ ಜನತೆ ಬೆಚ್ಚಿಬಿಳುವಂತಾಗಿದೆ.
ಇAತಹ ಘಟನೆಗಳು ಮರುಕಳಿಸದಿರಲು ಪೋಲಿಸ್ ಇಲಾಖೆ ದಿಟ್ಟ ಕ್ರಮತೆಗೆದುಕೊಳ್ಳಬೇಕಾಗಿದೆ.