ಸಚಿವದ್ವಯರ ಸಭೆಯ ಸಮಯದಲ್ಲಿಯೇ ಗಬ್ಬೆದು ನಾರಿದ ಒಳಚರಂಡಿ ವಾಸನೆ

0
312

ಕಲಬುರಗಿ, ಫೆ. 24:ಬರುವ ಬೆಸಿಗೆ ಹಿನ್ನೆಲೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸುವ ಕುರಿತು ಜಿಲ್ಲೆಯ ಇಬ್ಬರು ಸಚಿವದ್ವಯ ಸಭೆಯ ಸಮಯದಲ್ಲಿಯೇ ಕಲಬುರಗಿ ನಗರದ ಮುಖ್ಯರಸ್ತೆ ಚರಂಡಿ ಒಡೆದು ನಾಗರೀಕರು ಮೂಗಿಗೆ ಕರವಸ್ತç ಹಿಡಿದು ಓಡಾಡುತ್ತಿರುವುದು ಕಂಡು ಬಂದಿತು.
ಸಭೆ ನಡೆದಿದ್ದು ಒಳಚರಂಡಿ ಸೋರಿಕೆಯ ಸುಮಾರು 200 ಮೀಟರ್ ಒಳಗಡೆ ಅಷ್ಟೆ. ಇದು ಪಾಲಿಕೆಯ ಅಥವಾ ನಗರದ ನೀರು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ಮೂಗಿಗೆ ಸುವಾಸನೆ ಬರಲಿಲ್ಲವೇ?
ಇದು ಬೇರೇಲ್ಲುಲ್ಲ…! ಸೂಪರ್ ಮಾರ್ಕೆಟ್ ಮುಖ್ಯರಸ್ತೆಯ ಗತಿ. ಇದು ಇಂದಿನ ಸಮಸ್ಯೆಯಲ್ಲ, ಈ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿಯೂ ಕೂಡ ಒಳ ಚರಂಡಿ ಒಡೆದು ಅದರ ಹೊಲಸೆಲ್ಲ ರಸ್ತೆಯ ಮೇಲೆಲ್ಲ ಹರಿದಾಡಿ ಅದರನ್ನು ಅಧಿಕಾರಿಗಳು ಎಲ್ಲಿ ಸೋರಿಕೆಯಾಗಿದೆ ಎಂದು ಪತ್ತೆ ಹಚ್ಚದೆ ಒಡೆದ ಒಳಚರಂಡಿಯನ್ನು ರಸ್ತೆಯ ಬದಿಯಲ್ಲಿ ನಿರ್ಮಿಸಲಾದ ಕಾಲುವೆಗೆ ಜೋಡನೆ ಮಾಡಿ ಕೈತೊಳೆದುಕೊಂಡಿದ್ದು ಈಗಲೂ ಕಾಣಬಹುದಾಗಿದೆ.
ಇಂತಹ ಹಲವಾರು ಉದಾಹರಣೆಗಳಿದ್ದರೂ ಜಿಲ್ಲಾಡಳಿವಾಗಲೀ, ಪಾಲಿಕೆಯಾಗಲೀ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದಿರುವುದು ದುರದೃಷ್ಟಕರವಾಗಿದೆ. ಇಲ್ಲಿ ನಡೆದಿರುವುದು ನಾವು ಆಡಿದ್ದೆ ಆಟ, ಮಾಡಿದ್ದೇ ಪಾಠ ಎಂಬoತಾಗಿದೆ.
ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತು, ಕ್ರಮಕೈಗೊಳ್ಳುವರೇ ಎಂಬುದು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here