ಬೆಂಗಳೂರು, ಫೆ. 21:ಕರ್ನಾಟಕ ಕಾರ್ಯನಿರತ ಪ್ರತಕರ್ತರ ಸಂಘದ 2023-24ನೇ ಸಾಲಿನ 91ನೇ ಸರ್ವ ಸದಸ್ಯರ ಮಹಾಸಭೆಯು ಬರುವ ಮಾರ್ಚ 9ರಂದು ಕೊಪ್ಪಳದಲ್ಲಿ ನಡೆಯಲಿದೆ ಎಂದು ಕೆಯುಡಬ್ಲೂö್ಯಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಅವರು ತಿಳಿಸಿದ್ದಾರೆ.
ಮಾರ್ಚ 9ರಂದು ಬೆಳಿಗ್ಗೆ 11 ಗಂಟೆಗೆ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಕೊಪ್ಪಳದ ಕೇಂದ್ರ ಬಸ್ ನಿಲ್ದಾಣದ ಬಳಿಯ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ನಡೆಯುವ ಮಹಾಸಭೆಯಲ್ಲಿ ರಾಜ್ಯದ ಎಲ್ಲ ಸಂಘದ ಸರ್ವ ಸದಸ್ಯರು ಭಾಗವಹಿಸಬಹುದಾಗಿದೆ.
ಸಭೆಯ ತಿಳುವಳಿಕೆ ಪತ್ರವನ್ನು ಓದಿ ದಾಖಲು ಮಾಡಲಾಗುವುದು. ಹಿಂದಿನ ಸಭೆಯ ನಡಾವಳಿಯನ್ನು ಓದಿ ಅನುಮೋದಿಸಲಾಗುವುದು. 2023-24ನೇ ಸಾಲಿನ ವಾರ್ಷಿಕ ವರದಿ ಮಂಡನೆ ಹಾಗೂ ಅನುಮೋದನೆ ಮಾಡುವುದು. 2023-24ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿ ಮಂಡನೆ ಮತ್ತು ಅನುಮೋದನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಸರ್ವ ಸದಸ್ಯರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಇಚ್ಚಿಸಿದ್ದಲ್ಲಿ ಫೆ. 28ರೊಳಗೆ ಲಿಖಿತವಾಗಿ ರಾಜ್ಯ ಸಂಘಕ್ಕೆ ಕಳುಹಿಸಬೇಕು. ಭಾಗವಹಿಸುವವರು 2024-25ನೇ ಸಾಲಿನ ಗುರುತಿನ ಚೀಟಿ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಅವರು ವಿವರಿಸಿದ್ದಾರೆ.