ಹೈಕೋರ್ಟ್ ಬಳಿ ಭೀಕರ ಅಪಘಾತಪ್ರಾಣಾಪಾಯದಿಂದ ಪಾರಾದ ದ್ವೀಚಕ್ರ ಸವಾರ

0
828

ಕಲಬುರಗಿ, ಫೆ. 09: ಹೈಕೋರ್ಟ್ ಸಮೀಪದ ಶಾಂತಾ ಆಸ್ಪತ್ರೆ ಎದುರು ಹಾರುಬೂದಿ ಟ್ಯಾಂಕರ್ ಡಿಕ್ಕಿ ಹೊಡೆದು ಎಂಸಿಎ.ದ ಭೀಮಸೇನ ಕುಲಕರ್ಣಿ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಾರಾಷ್ಟç ಮೂಲದ ಎಮ್.ಎಚ್. 12 ಡಬ್ಲೂಎಕ್ಸ್ 4582 ಸಂಖ್ಯೆಯ ಲಾರಿ ದ್ವೀಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ.
ಗಾಯಗೊಂಡÀ ಭೀಮಸೇನ ಕುಲಕರ್ಣಿ ಅವರು ಈ ಹಿಂದೆ ಸಂಯುಕ್ತ ಕರ್ನಾಟಕ ಮುದ್ರಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಪ್ರಸ್ತುತ ಅವರು ಎಂ.ಸಿ.ಎ.ದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಲಾರಿಗೆ ಬೈಕ್ ಡಿಕ್ಕಿಯಾದ ಸಮಯದಲ್ಲಿ ಅವರ ಸಮಯ ಪ್ರಜ್ಞೆಯಿಂದಾಗಿ ಬೈಕ್ ಬಿಟ್ಟು ಹಾರಿದ ಪರಿಣಾಮವಾಗಿ ಅವರ ಕಾಲಿಗೆ ಪೆಟ್ಟಾಗಿದ್ದು, ಜೀವಾಪಯದಿಂದಾಗಿ ಪಾರಾಗಿದ್ದಾರೆ.
ಗಾಯಗೊಂಡ ಅವರನ್ನು ಕಲಬುರಗಿ ನಗರದ ಹೊರ ವಲಯದ ಶಾಂತಾ ಆಸ್ಪತ್ರೆಯ ತೀವೃನಿಗಾ ಘಟಕದಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here