ಪಾಲಿಕೆ ಉಪ ಆಯುಕ್ತ ಆರ್.ಪಿ. ಜಾಧವ ಮನೆ ಮೇಲೆ ಲೋಕಾ ದಾಳಿ: 3 ಕೋಟಿಗೂ ಅಧಿಕ ಆಸ್ತಿ ಪತ್ತೆ

0
1071

ಕಲಬುರಗಿ, ಡಿ. 10:ಕಲಬುರಗಿ ಮಹಾನಗರಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ ಮನೆ, ಫಾರ್ಮ್ ಹೌಸ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೋಲಿಸರು ಸುಮಾರು 3.5 ಕೋಟಿ ರೂ. ಗೂ ಅಧಿಕ ಆಸ್ತಿ-ಪಾಸ್ತಿ ಕಂಡುಬoದಿದೆ.

ಆರ್.ಪಿ. ಜಾಧವ ಅವು ಕಳೆದ ಕೆಲವು ವರ್ಷಗಳಿಂದ ಕಲಬುರಗಿ ಪಾಲಿಕೆಯಲ್ಲಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆರ್.ಪಿ. ಜಾಧವ ಸರಕಾರಿ ನೌಕರಿಗೆ ಸೇರಿದ ಮೂರು ಕಡೆಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೋಲಿಸರು ಒಟ್ಟು 2,37,00,000 ಮೌಲ್ಯದ 4 ನಿವೇಶನಗಳು, 2 ವಾಸದ ಮನೆಗಳು ಹಾಗೂ 7 ಎಕರೆ ಕೃಷಿ ಜಮೀನು ಪತ್ತೆ ಮಾಡಿದ್ದಾರೆ.

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ ರೂ. 1,50,000, ನಗದು ರೂ. 18,00,000 ಬೆಲೆ ಬಾಳುವ ಚಿನ್ನಾಭರಣಗಳ 15,50,000, ಬೆಲೆ ಬಾಳುವ ವಾಹನಗಳು ರೂ. 50,00,000 ಆಗಿವೆ.
ಅಲ್ಲದೇ ಮೆಡಿಕಲ್ ಕಾಲೇಜು ಸೀಟು ಮತ್ತು ಫೀ ರೂ. 36 ಲಕ್ಷ 46 ಸಾವಿರ ಅಲ್ಲದೇ ಬೆಲೆಬಾಳುವ ಷೇರು ಬಾಂಡ್ ಎಲ್ಲಾ ಸೇರಿ ಒಟ್ಟು ರೂ. 1,21,46,000. ಒಟ್ಟು ಆಸ್ತಿ ಮೌಲ್ಯ 3 ಕೋಟಿ 58 ಲಕ್ಷ 46 ಸಾವಿರ ರೂ.

ಮಂಗಳವಾರ ಬೆಳಿಗ್ಗೆ ಲೋಕಾಯುಕ್ತ ಪೋಲಿಸ್ ವರಿಷ್ಠಾಧಿಕಾರಿ ಬಿ.ಕೆ. ಉಮೇಶ ನೇತೃತ್ವದಲ್ಲಿ ಮೂರು ತಂಡಗಳಲ್ಲಿ ಲೋಕಾಯುಕ್ತ ಪೋಲಿಸರು ಎನ್‌ಜಿಓ ಕಾಲೋನಿಯ ನಿವಾಸ, ಫರಹತಾಬಾದ ಸಮೀಪದ ಫಾರ್ಮ್ ಹೌಸ್ ಮೇಲೆ ದಾಳಿ ದಾಳಿ ನಡೆಸಿದ್ದರು.
ಈ ಬಗ್ಗೆ ಲೋಕಾಯುಕ್ತ ಕಲಬುರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here