ಕಲಬುರಗಿ ನಗರದಲ್ಲಿ ಪರವಾನಿಗೆಯಿಲ್ಲದೇ ರಸ್ತೆಯಲ್ಲಿ ಓಡಾಡುತ್ತಿರುವ 7 ಸಾವಿರ ಆಟೋಗಳು

0
535

ಕಲಬುರಗಿ ನಗರದಲ್ಲಿ ಪರವಾನಿಗೆಯಿಲ್ಲದೇ
ರಸ್ತೆಯಲ್ಲಿ ಓಡಾಡುತ್ತಿರುವ 7 ಸಾವಿರ ಆಟೋಗಳು

ಕಲಬುರಗಿ, ಡಿ. 10:ಕಲಬುರಗಿ ನಗರದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಪರವಾನಿಗೆ ಇಲ್ಲದೇ ತಾಲೂಕ ಕೇಂದ್ರಗಳಲ್ಲಿ ಪರವಾನಿಗೆ ಪಡೆದು ನಗರದಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಆಟೋ ರೀಕ್ಷಾ ಗಳು ಓಡಾಡುತ್ತಿದ್ದು, ಇದಕ್ಕೆ ಯಾವುದೆ ಕಡಿವಾಣ ಹಾಕದೇ ಸಾರಿಗೆ ಇಲಾಖೆ ಹಾಗೂ ಪೋಲಿಸ್ ಇಲಾಖೆ ಕೈಚೆಲ್ಲಿ ಕುಳಿತಿದೆ.
ಆದರೆ ಇಂದು ನಗರ ಪೋಲಿಸ್ ಹಾಗೂ ಪ್ರಾದೇಶಿಕ ಸಾರಿಗೆ ಕಛೇರಿ ವತಿಯಿಂದ ನಾಮಕಾವಾಸ್ತೆ ಎಂಬAತೆ ಜಂಟಿಯಾಗಿ ಕಾರ್ಯಾಚರಣೆ ಮಾಡಿ 15 ಆಟೋಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಮೊದಲು ಹಲವಾರು ಬಾರಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಪೋಲಿಸ್ ಇಲಾಖೆಗೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಗಳಿಗೆ ಮನವಿ ಸಲ್ಲಿಸಿ, ತಾಲೂಕ ಕೇಂದ್ರಗಳಲ್ಲಿ ಪರವಾನಿಗೆ ಪಡೆದು ನಗರ ಪ್ರದೇಶದಲ್ಲಿ ಓಡಿಸುತ್ತಿರುವ ಆಟೋಗಳ ಬಗ್ಗೆ ಮಾಹಿತಿ ನೀಡಿದರೂ ಕೂಡ ಯಾವುದೇ ಒಂದು ಸಬೂಬು ಹೇಳಿ ಅಧಿಕಾರಿಗಳು ಸುಮ್ಮನಾಗಿದ್ದಾರೆ.
ಸಂಚಾರಿ ಪೋಲಿಸ್ ಅಧಿಕಾರಿಗಳು ಈ ಬಗ್ಗೆ ನಾವು ನಗರ ಪ್ರದೇಶದಲ್ಲಿ ಪರವಾನಿಗೆ ಇಲ್ಲದೇ ಆಟೋಗಳನ್ನು ಜಪ್ತಿ ಮಾಡಿ ಸಾರಿಗೆ ಇಲಾಖೆಗೆ ಹಸ್ತಾಂತರಿಸುತ್ತೇವೆ. ಮುಂದು ಅವರು ಕ್ರಮಕೈಗೊಳ್ಳುತ್ತಾರೆ ಎಂಬುದು ಅವರ ಹೇಳಿಕೆಯಾಗಿದೆ.
ಸಾರಿಗೆ ಇಲಾಖೆ ಅಧಿಕಾರಿಗಳು ಪರವಾನಿಗೆ ಇಲ್ಲದೇ ಆಟೋ ಮಾಲೀಕರುಗಳಿಗೆ ದಂಡ ಹಾಕಿ ಬಿಟ್ಟುಬಿಡುತ್ತಾರೆ. ಮತ್ತೇ ಅದೇ ಆಟೋಗಳು ಎಂದಿನAತೆ ರಸ್ತೆಗಿಳಿಯುತ್ತಿದ್ದು, ಇದಕ್ಕೆ ಶಾಶ್ವತವಾಗಿ ಪರವಾನಿಗೆ ಇಲ್ಲದ ಆಟೋಗಳನ್ನು ಜಪ್ತಿ ಮಾಡಬೇಕೆಂಬುದು ನಗರ ಆಟೋ ಚಾಲಕರ ಸಂಘದ ಬೇಡಿಕೆಯಾಗಿದೆ.

ತಾಲೂಕು ಕೇಂದ್ರಗಳ ಆಟೋಗಳು 8 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಚಾಲನೆ ಮಾಡಬಹುದು. ನಗರ ಪ್ರದೇಶಗಳಲ್ಲಿ ಪರವಾನಿಗೆ ಪಡೆದ ಆಟೋಗಳು 16 ಕೀಮೀ ವ್ಯಾಪ್ತಿ ನಿಗದಿಪಡಿಸಲಾಗಿದೆ.
ಇತ್ತೀಚಗಷ್ಟೆ ತಾಲೂಕ ಕೇಂದ್ರಗಳಲ್ಲಿನ ಆಧಾರ ಕಾರ್ಡನೊಂದಿಗೆ ಕಲಬುರಗಿ ಶೋರೂಂನಿAದ ಖರೀದಿಸಲ್ಪಟ್ಟ ಹೊಸ ಕೆಎ 32 ಎಬಿ ಸಿರಿಜನ್ 30 ಆಟೋಗಳು ಸಿಎನ್‌ಜಿ ಮತ್ತು ಪೇಟ್ರೊಲ್ ಎರಡನ್ನು ಹೊಂದಿದ್ದು, ಆದರೆ ಅವುಗಳು ಪ್ರಸ್ತುತ ನಗರ ಪ್ರದೇಶದಲ್ಲಿಯೇ ಬಾಡಿಗೆಗಾಗಿ ಚಾಲನೆ ನಡೆಸುತ್ತಿವೆ.
ಇತ್ತೀಚೆಗಟ್ಟೆ ತಾವರಗೇರಾ ಕ್ರಾಸ್ ಬಳಿ ಆಟೋವೊಂದು ಅಪಘಾತಕ್ಕಿಡಾಗಿ, ಆಟೋದಲ್ಲಿದ್ದ ಪ್ರಯಾಣಿಕರಿಗೆ ಗಂಭೀರಗಾಯಗಳಾಗಿದ್ದವು, ಈ ಆಟೋ ಗುಜ್ಜರಿ ಆಟೋ ಆಗಿದ್ದು, ಇಂತಹ ಆಟೋಗಳು ನಗರದ ಪ್ರದೇಶದ ಹೊರವಲಯ ಹಿಡಿದು ಹಲವಾರು ಬಡವಾಣೆಗಳಲ್ಲಿ ಪ್ರಯಾಣಿಕರನ್ನು ಹೊತ್ತು ಓಡಾಡುತ್ತಿವೆ. ಆದರೆ ಅಪಘಾತ ಸಂಭವಿಸಿ ಪ್ರಯಾಣಿಕರ ಜೀವಕ್ಕೆ ಆಪಾಯವಾದರೆ ಇದಕ್ಕೆ ಯಾರು ಹೊಣೆ?
ಈ ನಿಟ್ಟಿನಲ್ಲಿ ಪೋಲಿಸ್ ಅಧಿಕಾರಿಗಳು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಪರವಾನಿಗೆ ಇಲ್ಲದೇ ಆಟೋಗಳಿಗೆ ಬ್ರೇಕ್ ಹಾಕುವರೆ ಎಂಬುದು ಕಾದು ನೋಡಬೇಕಾಗಿದೆ.
ಅನಧಿಕೃತವಾಗಿ ನಗರದಲ್ಲಿ ಪರವಾನಿಗೆ ಇಲ್ಲದೇ ಓಡಾಡುತ್ತಿರುವ ಆಟೋಗಳ ಒಂದು ಲಿಸ್ಟ್ ಇಲ್ಲಿದೆ ನೋಡಿ.

LEAVE A REPLY

Please enter your comment!
Please enter your name here