21 ದಿನದ ಹಿಂದು ಮಹಾಗಣಪತಿಯ ಶೋಭಾಯಾತ್ರೆ ಮೆರವಣಿಗೆಯಲ್ಲಿ ಕಿಕ್ಕಿರಿದು ಸೇರಿದ ಹಿಂದೂ ಭಕ್ತಸಾಗರ

0
773

(ರಾಜು ದೇಶಮುಖ)
ಕಲಬುರಗಿ, ಸೆ. 27: ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸ್ಪಟ್ಟ ಹಿಂದೂ ಮಹಾ ಗಣಪತಿಯ ಭವ್ಯ ಶೋಭಾ ಯಾತ್ರೆ ಇಂದು (ಶುಕ್ರವಾರ) ನಡೆದು, ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಗಣೇಶನ ಭಕ್ತರು ಹರ್ಷೋಲ್ಲಾಸದಿಂದ ಪಾಲ್ಗೊಂಡು ಶ್ರೀ ಗಣೇಶನ ವಿಸರ್ಜನೆ ಮಾಡಿದರು.
ಇಲ್ಲಿನ ಕೋಟೆ ಎದುರುಗಡೆಯ ಭವ್ಯ ರಾಮಮಂದಿರದ ಶೈಲಿಯ ಮಂಟಪದಲ್ಲಿ ಶ್ರೀ ರಾಮನ ಅವತಾರದಲ್ಲಿ ಶ್ರೀ ಗಣೇಶನಿಗೆ 21 ದಿನಗಳ ಕಾಲ ಪೂಜೆ ಸಲ್ಲಿಸಿ, ಇಂದು ವಿಸರ್ಜಿಲಾಯಿತು.
ಬೆಳಿಗ್ಗೆ 11 ಗಂಟೆಗೆ ಆರಂಭವಾದ ಈ ಶೋಭಾ ಯಾತ್ರೆಯಲ್ಲಿ ಡಿಜೆ, ಡೊಳ್ಳು, ಸೇರಿದಂತೆ ಅನೇಕ ವಾದ್ಯ ವೃಂದಗಳೊAದಿಗೆ ಮೆರವಣಿಗೆಯು ಪ್ರಕಾಶ ಮಾಲ್‌ದಿಂದ ಲೋಹಾರಗಲ್ಲಿ ಮಾರ್ಗ, ಹುಮನಾಬಾದ ಬೇಸ್, ಕಿರಾಣಾ ಬಜಾರ, ಕಪಡಾ ಬಜರಾ, ಚಪ್ಪಲ ಬಜಾರ, ಹೂವಿನ ಮಾರುಕಟ್ಟೆ, ಹಳೆ ಮಾರುಕಟ್ಟೆ ಮಾರ್ಗವಾಗಿ ಸೂಪರ ಮಾರ್ಕೇಟ್, ತಹಸೀಲ ಕಛೇರಿ, ಗಾಜೀಪೂರ ಮುಖ್ಯರಸ್ತೆ, ಜಗತ್ ಮಾರ್ಗವಾಗಿ ಅಪ್ಪನ ಕೇರೆಯ ವಿಸರ್ಜನಾ ಭಾವಿಯವರೆಗೆ ಮರೆವಣಿಗೆ ನಡೆದು, ನಂತರ ವಿಸರ್ಜಿಸಲಾಯಿತು.
ಸಂಜೆ ಆರು ಗಂಟೆಯಾಗುತ್ತಲೇ ಪೋಲಿಸರು ನೀಡಿದ ಅನುಮತಿ ಸಮಯ ಮುಕ್ತಾಯದ ನಂತರ ಎಲ್ಲ ವಾದ್ಯಗಳನ್ನು ಬಂದ್ ಮಾಡಿಸಿ, ಶ್ರೀ ಗಣೇಶನ ವಿಗ್ರಹದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು, ಮೂಕರಂತೆ ಮೆರವಣಿಗೆಯಲ್ಲಿ ಮುನ್ನಡೆಯುತ್ತಿದ್ದು ಎಲ್ಲರ ಗಮನ ಸೆಳೆಯಿತು.

ಕನಿಷ್ಟ ಪಕ್ಷ ಸಂಜೆ 7 ಗಂಟೆಯವರೆಗೆ ಆದರೂ ಸರಕಾರದ ಅಧಿಕಾರಿಗಳು, ಶಾಂತಿಯುತವಾಗಿ ನಡೆದ ಮೆರವಣಿಗೆಗೆ ಅನುಮತಿ ನೀಡಬೇಕಾಗಿತ್ತು ಎಂಬುದು ಸಾರ್ವಜನಿಕ ಪ್ರಶ್ನೆಯಾಗಿತ್ತು.
ಅತ್ಯಂತ ಶಾಂತಿಯುತವಾಗಿ ಮೆರವಣಿಗೆ ನಡೆಯಲು ಉತ್ತಮ ಪೋಲಿಸ್ ಬಂದೋಬಸ್ತ ಮಾಡಲಾಗಿತ್ತು, ಈ ಸಂದರ್ಭದಲ್ಲಿ ಶಾಂತಿಪ್ರೀಯರೆAದೆ ಹೆಸರಾದ ಇಲ್ಲಿನ ನೂತನ ಪೋಲಿಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರಿಗೂ ಮತ್ತು ಎಲ್ಲ ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ಹಿಂದೂ ಮಹಾಗಣಪತಿ ಸಮಿತಿಯು ಅಭಿನಂದಿಸಿದೆ.
ಮರವಣಿಗೆ ನಡೆಯುತ್ತಿದ್ದ ರಸ್ತೆಯಲ್ಲಿ ಸಂಚಾರಿ ಪೋಲಿಸರು ಉತ್ತಮ ಕಾರ್ಯನಿರ್ವಹಿಸಿ, ಎಲ್ಲಡೆ ಬ್ಯಾರಿಕೆಡ್ ಹಾಕಿ ರಸ್ತೆಯನ್ನು ಬಂದ್ ಮಾಡಿ, ಬೇರೆಡೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಎಲ್ಲಡೆ ಕಾಣುತ್ತಿತ್ತು.
ಮೆರವಣಿಗೆಯಲ್ಲಿ ಹಿಂದು ಮಹಾಗಣಪತಿ ಸಮಿತಿ ಅಧ್ಯಕ್ಷ ನಾಗೇಂದ್ರ ತಾಬಡೆ, ಸಮಿತಿಯ ಸದಸ್ಯರುಗಳಾದ ಸಿದ್ಧರಾಜ ಬಿರಾದಾರ, ಸುರೇಶ ಟೇಂಗಳಿ, ಸಂಜಯ ರೇವಣಕರ್ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರುಗಳು, ಪದಾಧಿಕಾರಿಗಳು, ಅಭಿಮಾನಿಗಳು ಭಾಗವಹಿಸಿದ್ದರು.
ಈ ಶೋಭಾ ಯಾತ್ರೆ ಅತ್ಯಂತ ಶಾಂತಿಯುತವಾಗಿ ಹಾಗೂ ಅತ್ಯಂತ ಯಶ್ವಸಿಯಾಗಿ ನೆರವೇರಿದ್ದಕ್ಕಾಗಿ ಇಡಿ ಜಿಲ್ಲೆಯ ಹಿಂದು ಬಾಂಧವರನ್ನು ಶ್ಲಾಘಿಸಲಾಯಿತು.

LEAVE A REPLY

Please enter your comment!
Please enter your name here