ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಶುದ್ಧ ಕುಡಿಯುವ ನೀರಿಲ್ಲದೇ, ಉಪಯೋಗಕ್ಕೆ ಬಳಸುವ ನೀರು ಕುಡಿಯುತ್ತಿರುವ ಮಕ್ಕಳು

0
404

ಕಲಬುರಗಿ, ಸೆ. 21: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ದಲ್ಲಿ ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರಿಲ್ಲದೇ ಉಪಯೋಕ್ಕಾಗಿ ಬಳಸುವ ನೀರನ್ನೆ ಮಕ್ಕಳು ಕುಡಿಯುತ್ತಿರುವ ಘಟನೆ ವರದಿಯಾಗಿದೆ.

ಕಳೆದ ಎರಡು ತಿಂಗಳಿAದ ಇಲ್ಲಿ 2024-25ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಆಶ್ರದಯಲ್ಲಿ ಈ ಕ್ರೀಡಾಕೂಡ ಏರ್ಪಡಿಸಲಾಗುತ್ತಿದೆ. ದಿನನಿತ್ಯ ನಡೆಯುವ ವಿವಿಧ ಸ್ಪರ್ಧೆ ಗಳಲ್ಲಿ ಭಾಗವಹಿಸಲು ಆಗಮಿಸುವ ಜಿಲ್ಲೆಯ ವಿವಿದ ಶಾಲೆಯ ಮಕ್ಕಳಿಗೆ ಮನೆಯಿಂದ ಬರುವಾಗ ಒಂದು ಬಾಟಲ್ ನೀರು ತರಬೇಕೆಂದು ಆಯೋಜಕರು ಆದೇಶಿಸಿದ್ದಾರೆ. ಆದರೆ ಒಂದು ಬಾಟಲ್ ನೀರು ಎಷ್ಟು ಬಾರಿ ಕುಡಿಯಬಹುದು. ಅಲ್ಲದೇ ಸುಮಾರು 4 ರಿಂದ 5 ಸಾವಿರ ಶಾಲಾ ಮಕ್ಕಳು ವಿವಿಧ ಆಟಗಳ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಅವರಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ದಿನನಿತ್ಯ 30 ರಿಂದ 40 ಫಿಲ್ಟರ್ ನೀರಿನ ಕ್ಯಾನ್‌ಗಳ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಆ ನೀರಿನ ಕ್ಯಾನ್‌ಗಳು ಕೂಡ ಮಧ್ಯಾಹ್ನದ ನಂತರ ಕ್ರೀಡಾಂಗಣಕ್ಕೆ ಪೂರೈಕೆ ಮಾಡಲಾಗುತ್ತಿದೆ.
ಈ ಕ್ರೀಡಾಂಗಣದಲ್ಲಿ ಸರಕಾರದ ವತಿಯಿಂದ ಒಂದು ಫೀಲ್ಟರ್ ವಾಟರ್ ಮಶೀನ್ ಹಾಕಲಾಗಿದ್ದು,ಇಲ್ಲಿ ನೀರು ಪಡೆಯಬೇಕಾದರೆ 5 ರೂ. ನಾಣ್ಯ ಹಾಕಿ ಪಡೆಯಬೇಕು. ಗ್ರಾಮಾಂತರ ಪ್ರದೇಶಗಳಿಂದ ಬರುವ ಬಡ ಶಾಲಾ ಮಕ್ಕಳಿಗೆ ಇದು ಹೊರೆಯಾಗಲಾರದೇ?

ಕನಿಷ್ಟ ಪಕ್ಷ ಕ್ರೀಡಾಂಗಣ ಸಮಿತಿ ಕುಡಿಯುವ ನೀರಾದರೂ ಕ್ರೀಡಾ ಕೂಟಕ್ಕೆ ಬಂದ ಮಕ್ಕಳಿಗೆ ಪೂರೈಸಬಾರದೇ ಎಂಬುದು ಸಾರ್ವಜನಿಕರ ಹಾಗೂ ಪೋಷಕರ ಪ್ರಶ್ನೆಯಾಗಿದೆ.
ಮಳೆಗಾಲವಾಗಿರುವುದರಿಂದ ಹಲವಾರು ಮಾರಕ ರೋಗಗಳು ಬರುವುದು ನೀರಿನಿಂದ ಎಂಬುದು ಎಲ್ಲರಗೂ ಗೊತ್ತಿರುವ ವಿಷಯ. ಆದರೆ ಕ್ರೀಡಾಂಗಣದ ಮುಖ್ಯದ್ವಾರದ ಎಡಗಡೆಯಲ್ಲಿ ಕುಡಿಯಲು ಯೋಗ್ಯವಲ್ಲದ ಪ್ಲಾಸ್ಟಿಕ್ ಟ್ಯಾಂಕ್ ಒಂದನ್ನು ಇಡಲಾಗಿದ್ದು, ಮಕ್ಕಳು ಸೇರಿದಂತೆ ಕ್ರೀಡಾಕೂಟ ನೋಡಲು ಬಂದ ಪೋಷಕರು ಸಹ ಇದೇ ನೀರನ್ನು ಕುಡಿಯುತ್ತಿದ್ದು, ಇದರಿಂದ ಡೇಂಗ್ಯೂ, ಮಲೇರಿಯಾ ಅಂತಹ ಇನ್ನಿತರ ಮಾರಕ ರೋಗಗಳು ಹರಡುವ ಭೀತ್ತಿಯಿದ್ದು, ಜಿಲ್ಲಾ ಆಡಳಿತ ಆಗಲೀ ಕ್ರೀಡಾಂಗಣ ಸಮಿತಿಯಾಗಲೀ ಇನ್ನು ಮುಂದೆಯಾದರೂ ಕುಡಿಯಲು ಶುದ್ಧವಾದ ನೀರನ್ನು ಉಚಿತವಾಗಿ ಪೂರೈಕೆಗಾಗಿ ಕ್ರಮತೆಗೆದುಕೊಳ್ಳುವರೇ ಎಂಬುದು ಕಾದುನೋಡಬೇಕಾಗಿದೆ.

LEAVE A REPLY

Please enter your comment!
Please enter your name here