ಕಲಬುರಗಿ, ಆ. 10:ಕಪನೂರ ಹಜರತ್ ಸೈಯದ್ ಶಹಾ ಫೈಜಾನ್ ಖಾದ್ರಿ ದರ್ಗಾದ ಶ್ರೀಗಳಾದ ಮನ್ಸೂರ ಅಲಿ ಬಾಬಾ ಅವರಿಗೆ ಜರ್ಮನಿಯ ಅಂತರಾಷ್ಟಿçÃಯ ಪೀಸ್ ವಿಶ್ವವಿದ್ಯಾಲಯವು 2024ನೇ ಸಾಲಿನ ಸಾಮಾಜಿಕ ಸೇವೆಗಾಗಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ.
ಪ್ರಶಸ್ತಿ ಹಾಗೂ ಪದವಿಯೊಂದಿಗೆ ಬಾಬಾ ಅವರಿಗೆ ಗೌರವಿಸಿ ಗ್ಲೋಬಲ್ ಆಕರ್‌ಡೇಶನ್ ಕಮೀಟಿಯ ಮುಖ್ಯಸ್ಥರು, ಸದಸ್ಯರು ಸೇರಿದಂತೆ ಇನ್ನು ಹಲವಾರು ಗಣ್ಯರ ಸಮ್ಮುಖದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.
ಇಂದು ಶನಿವಾರ ಪಾಂಡಿಚೇರಿಯ ಖಾಸಗಿ ಸೆಹನಬಾಗ್ ಹೋಟೆಲ್ ಮತ್ತು ಕನ್ವೇನಷ್ ಸೆಂಟರ್‌ನಲ್ಲಿ ಜರುಗಿದ ಸಮಾರಂಭದಲ್ಲಿ ಈ ಪದವಿಯನ್ನು ಪ್ರದಾನ ಮಾಡಲಾಗಿದೆ.


ಸುಮಾರು ನಾಲ್ಕು ದಶಕಗಳಿಂದ ಹಜರತ್ ಸೈಯದ್ ಶಹಾ ಫೈಜಾನ್ ಖಾದ್ರಿ ದರ್ಗಾದ ಶ್ರೀಗಳಾಗಿ ಹಲವಾರು ಸಾಮಾಜಿಕ, ಧಾರ್ಮಿಕ ಅಲ್ಲದೆ ದರ್ಗಾ ಅಡಿಯಲ್ಲಿ ಉಚಿತವಾಗಿ ಬಡಮಕ್ಕಳಿಗೆ ಶಿಕ್ಷಣ ನೀಡಲು ಕಲಬುರಗಿಯ ಕಪನೂರ ಹಾಗೂ ಬಂದರವಾಡಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಸಹ ಪ್ರಾರಂಭಿಸಿ, ಶಿಕ್ಷಣ ಕ್ಷೇತ್ರಕ್ಕೂ ತಮ್ಮ ಅಳಿಲು ಸೇವೆ ಸಲ್ಲಿಸುವ ಮೂಲಕ ಸಾಮಾಜಿಕ ಕಾರ್ಯಯಲ್ಲಿ ತೊಡಗಿದ್ದ ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಜರ್ಮನ್‌ನ ಅಂತರಾಷ್ಟಿçÃಯ ಪೀಸ್ ವಿಶ್ವವಿದ್ಯಾಲಯವು ಈ ಡಾಕ್ಟರೆಟ್ ಪದವಿಯನ್ನು ನೀಡುವ ಮೂಲಕ ಇವರು ಇನ್ನು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಮಾಡಲು ಒತ್ತು ನೀಡಿದಂತಾಗಿದೆ.
ಲೋಕಕಲ್ಯಾಣಕ್ಕಾಗಿ ಬಾಬಾ ಅವರು ಹಲವಾರು ಊಟ, ನೀರಿಲ್ಲದೇ ಅನುಷ್ಠಾನ ಸಹ ಮಾಡಿದ್ದು, ಒಂದು ಬಾರಿಯಂತು ಅನುಷ್ಠಾನ ಕುಳಿತ ಸ್ಥಳವನ್ನು ನಾಲ್ಕು ದಿಕ್ಕುಗಳಿಂದ ಮುಚ್ಚಿ ಅಂದರೆ ಗೋಡೆ ಕಟ್ಟಿ ಅದರ ಮಧ್ಯ ಅನುಷ್ಠಾನಗೈದಂತಹ ಈ ಶ್ರೀಗಳು ಆಂದ್ರ ಪ್ರದೇಶದ ಶ್ರೀಶೈಲಂನಲ್ಲಿಯೂ ಕೂಡ ಅನುಷ್ಠಾನಗೈದಿದ್ದಾರೆ.


ಈ ಹಿಂದೆ ಹಾರಕೂಡ ಶ್ರೀಗಳು ಸೇರಿದಂತೆ ಹಲವಾರು ಸಂಘ-ಸAಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗನ್ನು ನೀಡಿದ್ದು ಇಲ್ಲ ಸ್ಮರಿಸಬಹುದಾಗಿದೆ.