ಕಲಬುರಗಿ ಪಾಲಿಕೆ ಕಾಂಗೈ ತೆಕ್ಕೆಗೆ ಮೇಯರ್ ಆಗಿ ಯಲ್ಲಪ್ಪ ನಾಯ್ಕೋಡಿಉಪಮೇಯರ್ ಆಗಿ ಹೀನಾ ಬೇಗಂ ಅವಿರೋಧ ಆಯ್ಕೆ

0
1512

ಕಲಬುರಗಿ, ಜು. 30: ಕಲಬುರಗಿ ಮಹಾನಗರಪಾಲಿಕೆಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳು ಅವಿರೋಧ ಆಯ್ಕೆ ನಡೆದು ಇತಿಹಾಸ ಸೃಷ್ಟಸಿದೆ.
ಮಹಾನಗರಪಾಲಿಕೆ ಆದ ನಂತರ 22 ವರ್ಷಗಳಲ್ಲಿ ಪ್ರಥಮ ಬಾರಿಗೆ ಮೆಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಇದೇ ಮೊದಲ ಬಾರಿಯಾಗಿದೆ.
ಈ ಬಾರಿಯ 22ನೇ ಪಾಲಿಕೆಯ ಮಹಾಪೌರ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿತ್ತು, ಮೀಸಲಾತಿ ಪ್ರಕಟವಾದಗಿನಿಂದಲ್ಲೇ ಕಾಂಗ್ರೆಸ್ ಪಕ್ಷದ ಎಸ್‌ಟಿಯ ಏಕೈಕ ಅಭ್ಯರ್ಥಿಯಾಗಿರುವ ಯಲ್ಲಪ್ಪ ನಾಯ್ಕೋಡಿ ಅವರ ಆಯ್ಕೆ ನಿಶ್ಚತವಾಗಿತ್ತು.
ಇಂದು ಮಧ್ಯಾಹ್ನ 12 ಗಂಟೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಮೆಯರ್ ಸ್ಥಾನಕ್ಕಾಗಿ ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಹಾಗೂ ಉಪ ಮಹಾಪೌರ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ನ ಅಲೀಮ ಪಟೇಲ್ ಅವರು ನಾಮಪತ್ರ ಸಲ್ಲಿಸಿದ್ದು. ಕೊನೆಯ ಹಂತದಲ್ಲಿ ಅವರು ತಮ್ಮ ನಾಮಪತ್ರ ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ಉಪ ಮೇಯರ್ ಆಯ್ಕೆ ಕೂಡ ಅವಿರೋಧವಾಗಿದೆ ಎಂದು ಚುನಾವಣಾಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು ಘೋಷಿಸಿದರು.
ಅಂತಿಮವಾಗಿ ಕಾಂಗ್ರೆಸ್ ಪಕ್ಷದ ವಾರ್ಡ ನಂ. 53ರ ಯಲ್ಲಪ್ಪ ನಾಯ್ಕೋಡಿ ಅವರು ಮಹಾಪೌರರಾಗಿ ಹಾಗೂ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆದು ವಿಜಯಿಯಾದ ವಾರ್ಡ ನಂ. 10ರ ಶ್ರೀಮತಿ ಹೀನಾ ಬೇಗಂ ಅಬ್ದುಲ್ ರಹೀಮ ಮುಲ್ಲಾ ಅವರು ಉಪ ಮಹಾಪೌರರಾಗಿ ಆಯ್ಕೆಯಾದರು.

ಮೇಯರ್ ಆಗಿ ಯಲ್ಲಪ್ಪ ನಾಯ್ಕೋಡಿ ಅವರು ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ನಾಯ್ಕೋಡಿ ಅಭಿಮಾನಿಗಳು ಟೌನ್ ಹಾಲ್ ಎದುರುಗಡೆ ರಸ್ತೆಯ ಮೇಲೆ ಪಟಾಕಿ ಸಿಡಿಸಿ, ಸಿಹಿ ಸಂಭ್ರಮಿಸಿದರು.
55 ಸದಸ್ಯ ಬಲದ ಕಲಬುರಗಿ ಮಹಾನಗರಪಾಲಿಕೆಯಲ್ಲಿ ಕಾಂಗ್ರೆಸ್ 27 ಸದಸ್ಯರನ್ನು ಹೊಂದಿದ್ದು, ಇನ್ನು 10 ಜನ ಜನಪ್ರತಿನಿಧಿಗಳ ಮತಗಳು ಒಳಗೊಂಡAತೆ ತನ್ನ ಬಲವನ್ನು 35ಕ್ಕೆ ಏರಿಸಿಕೊಂಡಿತ್ತು.
ಇAದು ನಡೆದ ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮ, ಸಂಸದ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರುಗಳು ಭಾಗವಹಿಸಿದ್ದರು.
ಇಂದು ನಡೆದ ಮಹಾನಗರಪಾಲಿಕೆಯ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಯಾವುದೇ ಗದ್ದಲವಿಲ್ಲದೇ ನಡೆದು, ಮೇಯರ್, ಉಪ ಮೇಯರ್ ಸ್ಥಾನಗಳು ಚಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ಸೇರಿದಂತೆ ಎಲ್ಲ ಸದಸ್ಯರುಗಳನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಅವರು ಅಭಿನಂದಿದರು.
ಸತ್ಯವಾದ ಮನೀಷ ಪತ್ರಿಕೆಯ ಭವಿಷ್ಯ:
ಇಂದು ಮಂಗಳವಾರ ನಡೆದ ಪಾಲಿಕೆಯ ಮೆಯರ್ ಅಂತು ಬೀಡಿ ಅದೂ ಆಗಲೇ ಫೈನಲ್ ಆಗಿತ್ತು ಆದರೆ ಉಪ ಮಹಾಪೌರ ಸ್ಥಾನಕ್ಕಾಗಿ ವಾರ್ಡ ನಂ. 10ರ ಅಭ್ಯರ್ಥಿಯೇ ಆಯ್ಕೆ ಆಗುತ್ತಾರೆಂದು ಮನೀಷ್ ಪತ್ರಿಕೆಯಲ್ಲಿ ಇಂದು ಮಂಗಳವಾರದ ಸಂಚಿಕೆಯಲ್ಲಿ ಪ್ರಕಟವಾದ ಭವಿಷ್ಯ ಸತ್ಯವಾಗಿದೆ.

LEAVE A REPLY

Please enter your comment!
Please enter your name here