ಇನ್ನು ಮಳೆಗಾಲ ಆರಂಭದ ಕಾಲ. ಇನ್ನು ದೊಡ್ಡ ದೊಡ್ಡ ಮಳೆಗಳೇ ಬಂದಿಲ್ಲ. ಕೇವಲ ಮೃಗಾಶೀರ ನಕ್ಷತ್ರವೊಂದೆ ಪ್ರವೇಶದಿಂದಾಗಿ ಆರಂಭವಾದ ಮಳೆಗಾಲದ ಮೊದಲ ಮಳೆಯಲ್ಲೆ ನಗರದ ಮುಖ್ಯರಸ್ತೆ ಹಿಡದು, ಗಲ್ಲಿ ಗಲ್ಲಿಯ ರಸ್ತೆಗಳು ಕಿತ್ತೋಗಿವೇ. ಇದು ನಗರದ ರಸ್ತೆ ಪಾಡಾದರೆ ಹಳ್ಳಿಗರ ಕತಿಯೇನು?
ನಗರದ ಸೂಪರ್ ಮಾರ್ಕೆಟ್ ರಸ್ತೆಯಿಂದ ಹಿಡಿದು ಗಂಜ್‌ವರೆಗೆ ಪ್ರಯಾಣಿಸಬೇಕಾದರೆ ರಸ್ತೆಗಳಲ್ಲಿ ಬ್ರೇಕ್‌ಡ್ಯಾನ್ಸ್ ಮಾಡುತ್ತಿರುವ ಬಗ್ಗೆ ಅನುಭವವಾಗುತ್ತದೆ. ಅದರಲ್ಲೂ ಸುಪರ್ ಮಾರ್ಕೇಟ್‌ನಲ್ಲಿರುವ ಮಹಿಬಸ್ ಮಜೀದ ಹತ್ತಿರದ ರಸ್ತೆ ಸಂಪೂರ್ಣ ಕಿತ್ತೊಗಿ, ಗುಂಡಿಗಳು ಸುಮಾರು 1 ಫೀಟ್ ಇಷ್ಟು ಬಿದ್ದಿದ್ದು, ಅದರಲ್ಲೂ ನಗರದಕ್ಕೆ ನಿರಂತರ ನೀರು ಪೂರೈಕೆಗಾಗಿ ಎಲ್&ಟಿ ಕಂಪನಿಯವರು ಪೈಪ್ ಲೈನ್ ಹಾಕಲು ತೋಡಿದ ರಸ್ತೆಗಳು ಗುಂಡಿಗೆಯಾಗಿ ಪರಿವರ್ತನೆಗೊಂಡಿವೆ. ಎಲ್ಲಂದರಲ್ಲಿ ತಗ್ಗು ಒಂದು ಹಂತದಲ್ಲಿ ಕೆಲವಡೆ ರಸ್ತೆಯಲ್ಲಿ ತೆಗ್ಗುಗಳಿವೆಯೇ? ಅಥವಾ ತೆಗ್ಗಿನಲ್ಲಿ ರಸ್ತೆಯಿದೆಯೋ? ಎಂಬುವAತಾಗಿದೆ.
ಇಕ್ಕಟ್ಟಿನ ರಸ್ತೆಗಳು, ಅದರಲ್ಲೂ ತೆಗ್ಗು, ಗುಂಡಿ ಅಂತಹರದಲ್ಲಿ ರಸ್ತೆಯ ಎರಡು ಬದಿಯಲ್ಲಿ ದ್ವೀಚಕ್ರ ಹಿಡದು ಕಾರುಮ ಜೀಪು ಆಟೋಗಳು ಎಲ್ಲೆಂದರಲ್ಲಿ ಪಾರ್ಕ್ ಮಾಡಿ, ಇದ್ದಷ್ಟು ರಸ್ತೆಗಳು ಕಬಳಿಸಿದರೆ, ಇನ್ನುಳಿದ ರಸ್ತೆಗಳಲ್ಲಿ ಬೀದಿ ವ್ಯಾಪಾರಿಗಳ ಹಾವಳಿ, ಎಲ್ಲಂದರಲ್ಲಿ ಬಂಡಿ ಹಚ್ಚಿ ವ್ಯಾಪಾರ ಮಾಡುವುದು, ವ್ಯಾಪಾರ ಮಾಡಲು ಬಂದ ಗ್ರಾಹಕರು ಬಂಡಿ ಸುತ್ತಲೂ ನಿಂತು ಅವರಿಷ್ಟು ರಸ್ತೆ ಅಕ್ರಮಿಸುವುದು ನೋಡಿದರೆ ನಮಗೆ ಮಾರುಕಟ್ಟೆಯಲ್ಲಿ ಇದ್ದೆವೋ ಅಥವಾ ರಸ್ತೆಗಳಲ್ಲಿ ಇದ್ದವೋ ಎಂಬುದು ಒಂದು ಕ್ಷಣ ಗೊತ್ತಾಗಂತಾಗುತ್ತದೆ.
ಇನ್ನು ಸರಕಾರ ತನ್ನ ಪಂಚ ಗ್ಯಾರಂಟಿಗಳ ನಿರಂತರ ಚಾಲ್ತಿಯಲ್ಲಿಡುವ ಉದ್ದೇಶದಿಂದ ಪೆಟ್ರೋಲ್ ಮತ್ತು ಡಿಜೆಲ್ ಬೆಲೆಗಳಲ್ಲಿ 3 ರೂ. 3.50 ವರೆಗೂ ಏರಿಕೆ ಮಾಡಿದ್ದು ಮತ್ತಷ್ಟು ವಾಹನ ಚಾಲಕರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ.
ಇಕ್ಕಟ್ಟಿನ ತಗ್ಗು, ಗುಂಡಿಯ ರಸ್ತೆಯಲ್ಲಿ ಹಾಳಾಗುವ ಇಂಧನ ಮತ್ತಷ್ಟು ಏರಿಕೆ ಮಾಡಿ ಜನರ ಜೀವನ ದುಸ್ತರವಾಗಿದೆ. ಮಾತ್ತಿದೇರೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಜಿಲ್ಲಾ ಉಸ್ತುವಾರ ಸಚಿವರು ಇಂತಹ ಕಡೆ ಏಕೆ ಗಮನಹರಿಸುವುದಿಲ್ಲ. ಇಂತಹ ರಸ್ತೆಗಳಲ್ಲಿ ಅವರು ನಡೆದರೆ ತಾನೇ ಗೋತ್ತಾಗುವುದು. ಕೇಂದ್ರ ಸರಕಾರ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಮಾಡಿದಾಗ 100 ನಾಟ್‌ಔಟ್ ಎಂಬ ದೊಡ್ಡ ದೊಡ್ಡ ಬ್ಯಾನರ ಹಿಡಿದು ಬೀದಿಗಿಳಿದು ಪ್ರತಿಭಟಿಸಿದ ಕಾಂಗ್ರೆಸ್ ಸರಕಾರ ಇಗೇಕೆ ಇಂಧನ ದರ ಏರಿಕೆ ಮಾಡಿದೆ. 100 ರೂ.ಗೂ ಕಡಿಮೆ ಇದ್ದ ಪೆಟ್ರೋಲ್ ಬೆಲೆ ಈಗ ಮತ್ತೇ ನೂರರ ಗಡಿ ದಾಟಲು ಕಾರಣರಾಗಿದ್ದು ರಾಜ್ಯ ಸರಕಾರ. ಈಗ ಇವರಿಗೆ ಏನನ್ನ ಬೇಕು…!