ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಎರಡನೇ ಬಾರಿ ಗೆಲುವು ಸಾಧಿಸಿದ ಕಾಂಗೈ ಅಭ್ಯರ್ಥಿ

0
765

ಕಲಬುರಗಿ, ಜೂ. 06: ಎರಡನೇ ಪ್ರಾಶಸ್ತ್ಯ ಮತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಅವರು 4,651 ಮತಗಳ ಅಂತರದಿAದ ಗೆಲುವು ಕಂಡಿದ್ದಾರೆ.
ಜೂನ್ 3ರಂದು ನಡೆದ ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಮೊದಲ ಪ್ರಾಶಸ್ತçದ ಮತ ಏಣಿಕೆಯಲ್ಲಿ ಯಾವುದೇ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಎರಡನೇ ಪ್ರಾಶಸ್ತ್çದ ಮತ ಏಣಿಕೆ ನಡೆದು ಕಾಂಗ್ರೆಸ್ ಅಭ್ಯರ್ಥಿ ಅಂತಿಮವಾಗಿ ಜಯಗಳಿಸಿದರು.
ಎರಡನೇ ಪ್ರಾಶಸ್ತ್ಯ ಮತ ಎಣಿಕೆ ನಂತರ ಒಟ್ಟಾರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ 43,484 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ಬಿ.ಜೆ.ಪಿ. ಅಭ್ಯರ್ಥಿ ಅಮರನಾಥ ಪಾಟೀಲ ಅವರು 38,833 ಮತಗಳು ಪಡೆದು, ಸುಮಾರು 4650ಕ್ಕೂ ಅಧಿಕ ಮತಗಳ ಅಂತರದಿAದ ಸೋಲುನುಭವಿಸಿದರು.
ಪ್ರಭುದ್ಧ ಮತದಾರರು ಎಂದು ಹೇಳಲಾಗುವ ಪದವೀಧರರ ಮತದಾರರೆ ಅತ್ಯಂತ ಅನಕ್ಷರಸ್ಥ ಮತದಾರರಂತೆ ಈ ಚುನಾವಣೆಯಿಂದ ಕಂಡುಬAದಿದೆ.
ಒಟ್ಟಾರೆಯಾಗಿ ಚಲಾವಣೆಯಾದ 1,09,031 ಮತಗಳ ಪೈಕಿ 96519 ಮತಗಳು ಪುರಸ್ಕೃತವಾದರೆ, 12513 ಮತಗಳು ತಿರಸ್ಕೃತಗೊಂಡವು.
ಜೂನ್ 6ರಂದು ಆರಂಭವಾದ ಮತ ಏಣಿಕೆ ಕಾರ್ಯ ಇಂದು ಶುಕ್ರವಾರ ಸುಮಾರು 12.45ರ ವರೆಗೆ ನಡೆದು ಅಂತಿಮವಾಗಿ ಚುನಾವಣಾ ಫಲಿತಾಂಶ ಹೊರಬಿದ್ದಿತು.
ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಅವರು ಡಾ. ಚಂದ್ರಶೇಖರ ಪಾಟೀಲ ಅವರಿಗೆ ಗೆಲುವಿನ ಪ್ರಮಾಣ ಪತ್ರ ವಿತರಿಸಿದರು.

LEAVE A REPLY

Please enter your comment!
Please enter your name here