24ರ ಬೆಳಿಗ್ಗೆ 6ರಿಂದ 25ರ ವರೆಗೆ ಹೋಳಿ ಹಬ್ಬಕ್ಕಾಗಿ ಮದ್ಯ ಮಾರಾಟ ನಿಷೇಧ

0
717

ಕಲಬುರಗಿ,ಮಾ.23:ಕಲಬುರಗಿ ಜಿಲ್ಲೆಯಾದ್ಯಂತ ಇದೇ ಮಾರ್ಚ್ 24 ಹಾಗೂ 25ರಂದು ಆಚರಿಸಲಾಗುವ ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 24ರ ಬೆಳಿಗ್ಗೆ 6 ಗಂಟೆಯಿAದ ಮಾರ್ಚ್ 25ರ ರಾತ್ರಿ 12 ಗಂಟೆಯವರೆಗೆ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯ ತಯಾರಿಕಾ ಘಟಕಗಳನ್ನು, ಮದ್ಯದ ಡಿಪೋ, ಮದ್ಯಪಾನ, ಸಾರಾಯಿ, ಶೇಂದಿ, ಸ್ವದೇಶಿ ಮತ್ತು ವಿದೇಶಿ ಮದ್ಯ ಮತ್ತಿತರ ಮಾದಕ ವಸ್ತುಗಳ ಮಾರಾಟವನ್ನು ನಿಷೇಧಿಸಿ ಹಾಗೂ ಬಾರ್ ಹಾಗೂ ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಕಲಬುರಗಿ ಜಿಲ್ಲಾ ದಂಡಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ.
ಹೋಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 1965ರ ಕರ್ನಾಟಕ ಅಬಕಾರಿ ಕಲಂ 21ರ ಅನ್ವಯ ಈ ಆದೇಶ ಹೊರಡಿಸಲಾಗಿದೆ.

LEAVE A REPLY

Please enter your comment!
Please enter your name here