ಕಲಬುರ್ಗಿ, ಡಿ.13- ಅಪ್ರಾಪ್ತ ಬಾಲಕಿ ಸೇರಿದಂತೆ ಪ್ರೇಮಿಗಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಚೌಕಿ ತಾಂಡಾ ಬಳಿ ಸಂಭವಿಸಿದೆ. ಮೃತರನ್ನು ಆಕಾಶ್ (18) ಮತ್ತು ರಾಧಿಕಾ (15) ಎಂದು ಗುರುತಿಸಲಾಗಿದೆ.
ಕೊಲ್ಲೂರ್ ಗ್ರಾಮದ ನಿವಾಸಿ ಆಕಾಶ್ ಮತ್ತು ರಾಂಪೂರಹಳ್ಳಿ ನಿವಾಸಿ ರಾಧಿಕಾ ಅವರು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಕಳೆದ ಮಂಗಳವಾರ ತಡರಾತ್ರಿ ಅವರಿಬ್ಬರೂ ವಿಷ ಕುಡಿದಿದ್ದಾರೆ. ನಂತರ ಆಕಾರ್ಶ ತನ್ನ ತಾಯಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಅವರಿಬ್ಬರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದಾಗ್ಯೂ, ಮಾರ್ಗ ಮಧ್ಯೆ ಇಬ್ಬರೂ ಕೊನೆಯುಸಿರೆಳೆದರು. ಈ ಕುರಿತು ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದ್ದು, ತನಿಖೆ ಮುಂದುವರೆದಿದೆ.