ಕಲಬುರ್ಗಿ, ಡಿ. 11: ವಕೀಲರ ಸಂರಕ್ಷಣೆಗಾಗಿ ದುಷ್ಕರ್ಮಿಗಳಿಗೆ ಶಿಕ್ಷೆವಿಧಿಸಲು ಕಾಯ್ದೆ ಕಟ್ಟುನಿಟ್ಟಾಗಿ ಕೂಡಲೇ ಜಾರಿ ಮಾಡಬೇಕೆಂದು ಹಿರಿಯ ನ್ಯಾಯವದಿ ಮಲ್ಲಿಕಾರ್ಜುನ ಬೃಂಗೀಮಠ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇಂದು ಸೋಮವಾರ ಬೆಳಿಗ್ಗೆ ಜಿಲ್ಲಾ ನ್ಯಾಯಾಲಯದ ಮುಖ್ಯ ದ್ವಾರದ ಬಳಿ ಅನಿರ್ಧಿಷ್ಠ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದ ಅವರು ದೇಶದ ಸ್ವಾತಂತ್ರö್ಯ ಸಂಗ್ರಾಮದಿAದ ಹಿಡಿದು ಸಂವಿಧಾನ ರಚನೆ ಅದರ ಜಾರಿಯವರೆಗೂ ದೇಶದ ಅಭಿವೃದ್ಧಿಗಾಗಿ ಶೃಮಿಸಿದವರಲ್ಲಿ ಹೆಚ್ಚಿನವರು ವಕೀಲರಾಗಿದ್ದರು ಅಂತಹ ಮಹತ್ವದ ವಕೀಲರ ಸಮೂಹವನ್ನು ಪ್ರತಿನಿಧಿಸುವ ವಕೀಲರ ಜೀವ ರಕ್ಷಣೆಗಾಗಿ ರಾಜ್ಯದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಶೀಘ್ರವೇ ಜಾರಿಯಾಗಬೇಕಾಗಿದೆ. ಆದರೆ ಸರ್ಕಾರಗಳು ಈ ಬಗ್ಗೆ ಆಸಕ್ತಿ ತೋರಿಸಬೇಕು, ತಡಮಾಡದೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಮಾಡಬೇಕೆಂದು ಭೃಂಗಿಮಠ ಹೇಳಿದರು.
ವಕೀಲರ ಸಂಘದ ಅಧ್ಯಕ್ಷರಾದ ಗುಪ್ತಲಿಂಗ ಬಿರಾದಾರ ಅವರು ಮಾತನಾಡಿ, ಬೆಳಗಾವಿಯಲ್ಲಿ ನಡೆಯುತ್ತಿರುವ ಅದೀವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಯಾಗದಿದ್ದರೆ ಕರ್ನಾಟಕ ರಾಜ್ಯದ ವಕೀಲರೆಲ್ಲರೂ ಸೇರಿ ವಿಧಾನಸೌಧ ಮುತ್ತಿಗೆ ಹಾಕುವುದು ಅನಿವಾರ್ಯವಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಮಾಜಿ ಅಧ್ಯಕ್ಷ ಬಿ.ಆರ್.ಪಾಟೀಲ್ ಮಾತನಾಡಿ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿ ಮಾಡಲೇಬೇಕು ಈ ಮೂಲಕ ವಕೀಲರನ್ನು ಸಂರಕ್ಷಿಸಬೇಕು, ಸಮಾಜಕ್ಕೆ ನ್ಯಾಯ ಕೊಡಿಸುವ ವಕೀಲರಿಗೇ ಭದ್ರತೆ ಇಲ್ಲದಂತಾಗಿದೆ, ಇದರಿಂದಾಗಿ ಸಮಾಜದಲ್ಲಿ ಭಯದ ವಾತಾವರಣ ಶೃಷ್ಠಿಯಾಗಿದೆ ಎಂದು ಹೇಳಿದರು.
ಮಾಜಿ ಅಧ್ಯಕ್ಷ ರಾಜಕುಮಾರ ಕಡಗಂಚಿ ಅವರು ಮಾತನಾಡಿ, ವಕೀಲರ ಸಂರಕ್ಷಣೆಗೆ ಹೋರಾಟಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ಹೇಳಿದರು.
ವಕೀಲರಾದ ಚೂಡಾಮಣಿ ಪಾಟೀಲ್, ಫತ್ರೂಬಿ ಶಹಾ, ಧರ್ಮಣ್ಣ ಜೈನಾಪೂರ, ಲ್ಷಿö್ಮÃಕಾಂತ ವಾಘೆ, ದತ್ತಾತ್ರೇಯ ಕುಲಕರ್ಣಿ, ಜಬ್ಬಾರ್ ಅಹ್ಮದ್, ಶ್ರೀಮತಿ ಬೋದಲೆ, ವಿನೋದಕುಮಾರ ಜನವರಿ, ನಿರ್ಮಲಾ ಪಾಟೀಲ್, ಕಾರ್ಯದರ್ಶಿಗಳಾದ ಬಸವರಾಜ ನಾಸಿ, ಶ್ರೀಮಂತ, ಸಿದ್ದಮ್ಮ ಪಾಟೀಲ್, ಮಹೇಶ್ ಕೋಣಿನ್, ಸುರೇಖಾ, ಎಸ್.ಕೆ.ಚಿಕ್ಕಳ್ಳಿ, ಸಂತೋಟ್ ದಂಡೋತಿ ಮುಂತಾದವರು ಮಾತನಾಡಿದರು.
ಬೆಳಿಗ್ಗೆ 10-30 ಯಿಂದ ಆರಂಭವಾರ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹದಲ್ಲಿ ವಕೀಲರ ಸಂರಕ್ಷಣೆಗಾಗಿ ಕಾಯ್ದೆ ಜಾರಿ ಮಾಡುವಂತೆ ಘೋಷಣೆಗಳು ಉಗಿಲು ಮುಟ್ಟಿದವು. ಸಾವಿರಾರು ಮಂದಿ ವಕೀಲರು ಬೆಳಿಗ್ಗೆ ತಮ್ಮ ಕಾರ್ಯ ಕಲಾಪಗಳಿಂದ ದೂರ ಉಳಿದು ತಮ್ಮ ಎಡ ರಟೆಗೆ ಕೆಂಪು ರಿಬ್ಬನ್ ಕಟ್ಟಿಕೊಂಡು ಕಲಬುರ್ಗಿಯಲ್ಲಿ ನಡೆದ ವಕೀಲರ ಕೊಲೆ ಘಟನೆಯನ್ನು ಖಂಡಿಸಿ ಪ್ರತಿಭಟಿಸಿದರು.
ವಕೀಲರ ಮೇಲೆ ಹಲ್ಲೆ ಆದಾಗ ಅಥವಾ ಕೊಲೆಯಾದಾಗ ಮಾತ್ರ ಸರಕಾರ ಮೀಡಿಯಾಗಳಲ್ಲಿ ಮಾತನಾಡದೇ ಶೀಘ್ರವಾಗಿ ವಕೀಲರ ಸಂರಕ್ಷಾಣಾ ಕಾಯ್ದೆ ಜಾರಿ ಮಾಡಬೇಕೆಂದು ಧರಣಿ ನಿರತ ವಕೀಲರು ಆಗ್ರಹಿಸಿ ಘೋಷನೆ ಕೂಗಿದರು.
ಈ ಧರಣಿ ಸತ್ಯಾಗ್ರಹ ನಾಳೆಯೂ ಕೂಡ ಮುಂದುವರೆಯಲಿದ್ದು, ಇಂದು ಮತ್ತು ನಾಳೆ ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗುಳಿಯಲಿದ್ದಾರೆ.