ಹಳ್ಳಿ-ಹಳ್ಳಿಗಳಲ್ಲಿ ಬಿಂದಾಸ್ ಅಕ್ರಮ ಮದ್ಯ ಮಾರಾಟಕಣ್ಮಚ್ಚಿಕುಳಿತಂತಿರುವ ಪೋಲಿಸ್, ಅಬಕಾರಿ ಇಲಾಖೆಗಳು..!

0
690

(ರಾಜು ದೇಶಮುಖ)
ಕಲಬುರಗಿ, ಡಿ. 08:ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದAಗಿನಿAದ ಗ್ರಾಮೀಣ ಪ್ರದೇಶದ ಹಳ್ಳಿ-ಹಳ್ಳಿಗಳಲ್ಲಿ ಮದ್ಯ ಮರಾಟ ಜೋರಾಗಿ ನಡೆದಿದೆ.
ಆಳಂದ ತಾಲೂಕಿನಾದ್ಯಂತ ಮದ್ಯ ಮಾರಾಟ ಗ್ರಾಮದ ಪ್ರತಿ ಹಳ್ಳಿಗಳ ಕಿರಾಣಾ ಅಂಗಡಿಗಳಲ್ಲಿ ಹಾಗೂ ಹೊಟೇಲ್‌ಗಳಲ್ಲಿ ಹಾಲು ಮಾರಾಟದಂತೆ ನಡೆದಿದ್ದು, ಈ ಬಗ್ಗೆ ಹಲವಾರು ಹೋಬಳಿ ಮಟ್ಟದ ಪೋಲಿಸ್ ಇಲಾಖೆಯ ಗಮನಕ್ಕೂ ತಂದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ.
ಅದರಲ್ಲೂ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲದೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರಿಗೆ ಹಳ್ಳಿಗಳಲ್ಲಿ ಮದ್ಯ ಮಾರಾಟದ ಬಗ್ಗೆ ಗಮನಕ್ಕೆ ಬಂದಾಗ ಒಂದಿಷ್ಟು ಕ್ರಮ ತೆಗೆದುಕೊಂಡಿದ್ದು, ಪೋಲಿಸರು ಗ್ರಾಮಗಳಿಗೆ ಹೋಗಿ ಅಂಗಡಿಗಳ ಮೇಲೆ ದಾಳಿ ನಡೆಸಿ ಒಂದೋ ಎರಡೋ ಎಫ್‌ಐಆರ್ ದಾಖಲಿದ್ದಾರೆ.
ಪೋಲಿಸರು ದಾಳಿ ಮಾಡಿದ ನಂತರ ಮದ್ಯ ಮಾರಾಟ ಬೆಲೆ ಬಾಟಲೊಂದಕ್ಕೆ 10-20 ರೂ. ಏರಿಕೆ ಮಾಡಿ, ಮುಗ್ಗ ಹಳ್ಳಿಗರಿಗೆ ಮಾರಾಟ ಮಾಡುತ್ತಿದ್ದು, ಕೇಳಿದರೆ ಪೋಲಿಸರು ಬಂದು ದಾಳಿ ಮಾಡಿದಾಗ ಠಾಣೆಗೆ ಕೊಡುವ ಹಣ ಎಲ್ಲಿಂದ ತರಬೇಕೆಂಬ ತಿರುಗಿ ಪ್ರಶ್ನೆ ಕೇಳುತ್ತಾರೆ.
ಈ ಬಗ್ಗೆ ಆಳಂದ ಶಾಸಕರಾದ ಬಿ. ಆರ್. ಪಾಟೀಲ್ ಅವರಿಗೆ ಮದ್ಯ ಮಾರಾಟದ ಬಗ್ಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಹೌದು ನನಗೆ ಗೊತ್ತು? ಪ್ರತಿ ಗ್ರಾಮಗಳಲ್ಲಿ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ, ನಾನೂ ಕೂಡ ಶಾಸಕನಾಗಿ ಅಲ್ಲ ಮೊದಲಿನಿಂದಲೂ ಇದರ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇನೆ, ಆದರೆ ಏನು ಮಾಡುವುದು ಎಂದು ತಮ್ಮ ಅಸಹಾಯಕತೆ ತೊಡಿಕೊಂಡರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರುವ ಮುಂಚೆ ಮತದಾರರಿಗೆ ನೀಡಿದ ಪಂಚ್ ಗ್ಯಾರಂಟಿಗಳ ಈಡೇರಿಕೆಗೆ ಹಣ ಎಲ್ಲಿಂದ ಬರಬೇಕು, ಹೊಸ ಸರಕಾರ ಬಂದ ಮೇಲೆ ಮದ್ಯದ ಮೇಲೆ ಶೇ. 20 ರಷ್ಟು ತೆರೆಗೆ ಹೆಚ್ಚಿಗೆ ಮಾಡಿದ್ದು, ಅಲ್ಲದೇ ಸರಕಾರದ ಬೊಕ್ಕಸ ತುಂಬುವುದು ಒಂದೇ ಮಾರ್ಗ ಎಂದರೆ ಮದ್ಯ ಮಾರಾಟ.
ಕೆಲ ತಿಂಗಳ ಹಿಂದೆಯಷ್ಟೆ ಮತ್ತೆ ರಾಜ್ಯದಲ್ಲಿ ಹೊಸ ಮದ್ಯಮಾರಾಟ ಅಂಗಡಿಗಾಗಿ ಲೈಸೆನ್ಸ್ ಕೊಡುವುದಾಗಿ ಪ್ರಕಟಿಸಿದ ಸರಕಾರ, ವಿರೋಧ ಪಕ್ಷಗಳ ಕೆಂಗೆಣ್ಣಿಗೆ ಗುರಿಯಾಗಿದ್ದರಿಂದ ನಿನ್ನೆಯಷ್ಟೆ ಅಬಕಾರಿ ಸಚಿವರೊಬ್ಬರು ರಾಜ್ಯದಲ್ಲಿ ಮದ್ಯ ಮಾರಾಟದ ಹೊಸ ಲೈಸೆನ್ಸ್ ಇಲ್ಲ ಎಂದು ಬೆಳಗಾವಿ ವಿಧಾನಸಭೆಯ ಅಧಿವೇಶನದಲ್ಲಿ ಪ್ರಕಟಿಸಿದ್ದು, ನಾರಿಯರು ಕೊಂಚ ನಿರಾಳರಾದ್ದಂತಾಗಿದೆ.
ಹಳ್ಳಿಗಳಲ್ಲಿ ಬೆಳಿಗ್ಗೆ ಎದ್ದು ಹೊಲ-ಗದ್ದೆಗಳಲ್ಲಿ ಕೂಲಿ ಕೆಲಸ ಮಾಡಲು ಹೋಗುವ ಮುಂಚೆ ಕಿರಾಣಾ ಅಂಗಡಿಗೆ ದಿನಸಿ, ಹಾಲು, ಬ್ರೆಡ್ಡು ಖರೀದಿಸುವಂತೆ ಒಂದು ನೈಂಟಿ ಮದ್ಯ ಖರೀದಿಸಿ ಕುಡಿದು, ಮತ್ತೆ ಸಂಜೆ ಆಗುತ್ತಲೇ ಮತ್ತೊಂದು ನೈಂಟಿ ಎಣ್ಣೆ ಹಾಕುವುದು ಹಳ್ಳಗಳಲ್ಲಿ ಕಂಡು ಬರುವ ದೃಶ್ಯಗಳಾಗಿವೆ.
ಈ ಬಗ್ಗೆ ಗ್ರಾಮದ ಮಹಿಳೆಯರು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಎಷ್ಟೇ ಹೋರಾಟ ಮಾಡಿದರೂ ಕೂಡ, ಸರಕಾರಕ್ಕಾಗಲೀ, ಪೋಲಿಸ್ ಇಲಾಖೆಗೆ, ಅಬಕಾರಿ ಇಲಾಖೆ ಇದರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ.
ಸರಕಾರ ಮದ್ಯ ಹೆಚ್ಚಿಗೆ ಮಾರಾಟ ಮಾಡುವ ಗುರಿ ನೀಡಿದ್ದರಿಂದ ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಂತಾಗಿದೆ.

LEAVE A REPLY

Please enter your comment!
Please enter your name here