ಕಾರು ಅಪಘಾತ ಹಲ್ಲೆ ಎಂದು ಬಿಂಬಿಸಿದ ಪ್ರಕರಣ: ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಬಂಧನಸುದ್ದಿಗೋಷ್ಠಿಗೂ ಅವಕಾಶ ಕೊಡದೇ ಮನೆಯಲ್ಲಿ ವಶಕ್ಕೆ ಪಡೆದ ಪೋಲಿಸರು…!

0
734

ಕಲಬುರ್ಗಿ, ಡಿ.7- ಕಾರು ಅಪಘಾತವನ್ನೇ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಸುಳ್ಳು ಆರೋಪ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಪೋಲಿಸರು ಗುರುವಾರ ಬೆಳಿಗ್ಗೆ 11-30ರ ಸುಮಾರಿಗೆ ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಅವರನ್ನು ತಮ್ಮ ವಶಕ್ಕೆ ಪಡೆದರು.
ಬುಧವಾರವಷ್ಟೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಮಣಿಕಂಠ್ ರಾಠೋಡ್ ಅವರ ಮೇಲೆ ಹಲ್ಲೆಯಾಗಿಲ್ಲ. ಬದಲಾಗಿ ಅವರ ಕಾರು ಅಪಘಾತವಾಗಿದ್ದು, ಅದನ್ನೇ ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ತಮ್ಮ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ ಎಂದು ಆರೋಪಿಸಿದ್ದರು. ಈ ಕುರಿತು ತನಿಖೆ ಕೈಗೊಂಡಾಗ ಅವರ ಮೇಲೆ ಯಾವುದೇ ರೀತಿಯಲ್ಲಿ ಹಲ್ಲೆಯಾಗಿಲ್ಲ ಎಂದು ಹೇಳಿದರು.
ಇದರಿಂದಾಗಿ ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಅವರು ಪೋಲಿಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ ಎಂದು ಆರೋಪಿಸಿ, ಆ ಕುರಿತು ಮಾಧ್ಯಮದವರಿಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ಹೇಳಿ ಗುರುವಾರ ಡಿಸೆಂಬರ್ 9ರಂದು ಬೆಳಿಗ್ಗೆ 11-30ಕ್ಕೆ ಸುದ್ದಿಗೋಷ್ಠಿಯನ್ನು ಪತ್ರಿಕಾ ಭವನದಲ್ಲಿ ಕರೆದಿದ್ದರು.
ಆದಾಗ್ಯೂ, ಪತ್ರಿಕಾ ಭವನದಲ್ಲಿ ಮಣಿಕಂಠ್ ರಾಠೋಡ್ ಅವರ ಸುಳಿವು ಇರಲಿಲ್ಲ. ಬದಲಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರು ಸೇರಿದ್ದರು. ಅದೇ ಸಂದರ್ಭದಲ್ಲಿ ಮಣಿಕಂಠ್ ರಾಠೋಡ್ ಅವರು ಎಲ್ಲ ಮಾಧ್ಯಮದವರಿಗೆ ವಾಟ್ಸಪ್ ಮೂಲಕ ಮಾಹಿತಿಯನ್ನು ಹಾಕಿ, ಬೆಳಂಬೆಳಿಗ್ಗೆ ಪೋಲಿಸರು ನನ್ನ ರಕ್ಷಣೆಯ ನೆಪದಲ್ಲಿ ನನ್ನ ಮನೆಯ ಮುಂದೆ ಬಂದು ನಿಂತಿದ್ದಾರೆ. ನನಗೆ ಪತ್ರಿಕಾ ಭವನಕ್ಕೆ ಬಂದು ಸುದ್ದಿಗೋಷ್ಠಿ ಮಾಡಲೂ ಆಗುತ್ತಿಲ್ಲ. ನೀವು ನನ್ನ ಮನೆಗೆ ಬನ್ನಿ ಎಂದು ಕೋರಿ, ವಿಳಾಸವನ್ನೂ ಸಹ ನಮೂದಿಸಿದರು.
ಪತ್ರಿಕಾ ಭವನದಲ್ಲಿದ್ದವರೂ ಸೇರಿದಂತೆ ಬಹುತೇಕ ಪತ್ರಕರ್ತರು ಆ ಮಾಹಿತಿಯನ್ನು ಪಡೆದುಕೊಂಡು ತಕ್ಷಣವೇ ಅವರು ಕೊಟ್ಟ ವಿಳಾಸವಾದ ನೆಹರೂ ಗಂಜ್ ಪ್ರದೇಶದ ಲಾಹೋಟಿ ಶೋರೂಮ್ ಎದುರು ಇರುವ ಭಾರತ್ ಭಾರತ್ ಫ್ರೆöÊಡ್ ಅಪಾಟ್ಮೆಂಟ್‌ನಲ್ಲಿನ ಎಜಿ 10 ಪ್ಲಾö್ಯಟ್‌ಗೆ ತೆರಳಿದರು. ಕೆಲವು ಮಾಧ್ಯಮದವರು ತಕ್ಷಣವೇ ಹೋದರೂ ಸಹ ಅವರೊಂದಿಗೆ ಮಾತನಾಡಲು ಮಣಿಕಂಠ್ ರಾಠೋಡ್ ಅವರಿಗೆ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಪೋಲಿಸರು ತಕ್ಷಣವೇ ಅವರಿಗೆ ಬಲವಂತದಿAದ ಹಿಡಿದುಕೊಂಡು ಅಪಾರ್ಟ್ಮೆಂಟ್‌ನಿAದ ಪೋಲಿಸ್ ವಾಹನದವರೆಗೆ ತೆಗೆದುಕೊಂಡು ಬಂದು ಅವರನ್ನು ವಾಹನದೊಳಗೆ ಕುಳ್ಳಿರಿಸಿ ಕರೆದುಕೊಂಡು ಹೋದರು.
ಈ ಸಂದರ್ಭದಲ್ಲಿ ಮಣಿಕಂಠ್ ರಾಠೋಡ್ ಅವರು ನನಗೆ ಯಾವ ಕಾರಣಕ್ಕೆ ಬಂಧಿಸುತ್ತಿದ್ದೀರಿ. ನೋಟಿಸ್ ಕೊಡದೇ ಬಂಧಿಸುತ್ತಿದ್ದೀರಿ. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದರು. ಆದಾಗ್ಯೂ, ಪೋಲಿಸರು ಮಾತ್ರ ಅದಾವುದನ್ನೂ ಕೇಳದೇ ಮಣಿಕಂಠ್ ರಾಠೋಡ್ ಅವರನ್ನು ಪೋಲಿಸರು ಬಲವಂತದಿAದ ತಮ್ಮ ವಶಕ್ಕೆ ತೆಗೆದುಕೊಂಡರು.
ಮೂರನೇ ಬಾರಿ ವಶಕ್ಕೆ: ಈ ಹಿಂದೆ ಚಿತ್ತಾಪುರ ತಾಲ್ಲೂಕಿನ ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯುವಕ ದೇವಾನಂದ್ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ಬಿಜೆಪಿ ಯುವ ಮುಖಂಡ ಮಣಿಕಂಠ್ ರಾಠೋಡ್ ಅವರು ಹೋರಾಟದಲ್ಲಿ ಪಾಲ್ಗೊಳ್ಳಲು ಚಿತ್ತಾಪುರಕ್ಕೆ ಹೋಗುವಾಗಲೂ ಇದೇ ರೀತಿ ಪೋಲಿಸರು ಓಂನಗರದಲ್ಲಿರುವ ಅವರ ಮನೆಗೆ ತೆರಳಿ ಬಲವಂತದಿAದ ಅವರಿಗೆ ವಶಕ್ಕೆ ಪಡೆದುಕೊಂಡಿದ್ದರು. ನಂತರ ಬಿಡುಗಡೆಯಾದ ಮರುದಿನವೇ ನೆಹರೂ ಗಂಜ್ ಪ್ರದೇಶದ ಅವರ ಪ್ಲಾö್ಯಟ್‌ನಲ್ಲಿ ಮತ್ತೆ ಪೋಲಿಸರು ಮಣಿಕಂಠ್ ರಾಠೋಡ್ ಅವರಿಗೆ ಬಂಧಿಸಿದ್ದರು. ಈಗ ಮೂರನೇ ಬಾರಿ ಪೋಲಿಸರು ಬಂಧಿಸಿದ್ದಾರೆ.
ಬಿಜೆಪಿ ಮೌನ: ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಒಡ್ಡಿ ಪರಾಭವಗೊಂಡಿದ್ದ ಮಣಿಕಂಠ್ ರಾಠೋಡ್ ಅವರ ಮೇಲೆ ಹಲ್ಲೆಯಾಗಿಲ್ಲ. ಬದಲಾಗಿ ಅಪಘಾತ ಪ್ರಕರಣವನ್ನೇ ರಾಜಕೀಯಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆAಬ ತನಿಖೆಯನ್ನು ಪೋಲಿಸರು ಹೊರಹಾಕಿದ ನಂತರ ಬಿಜೆಪಿ ನಾಯಕರಲ್ಲಿ ಒಂದು ರೀತಿಯಲ್ಲಿ ಮುಜುಗುರಕ್ಕೆ ಒಳಗಾಗಿದ್ದಾರೆ. ಯಾರೂ ಸಹ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ.
ನೆಹರೂ ಗಂಜ್ ಪ್ರದೇಶದ ಪ್ಲಾö್ಯಟ್‌ನಲ್ಲಿ ಯುವ ಮುಖಂಡ ಮಣಿಕಂಠ್ ರಾಠೋಡ್ ಅವರನ್ನು ಪೋಲಿಸರು ವಶಕ್ಕೆ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಅವರು ತಮಗೂ ಆ ಪ್ರಕರಣಕ್ಕೂ ಯಾವುದೇ ಸಂಬAಧ ಇಲ್ಲ ಎನ್ನುವವರಂತೆ ನಿಂತಿದ್ದರು.
ಪತ್ರಕರ್ತರು, ಮಾಧ್ಯಮದವರು ಸಿದ್ದಾಜಿ ಪಾಟೀಲ್ ಅವರನ್ನು ಏನ್ರಿ ವಿಷಯ ಎಂದು ಕೇಳಿದಾಗ ತಮಗೇನೂ ಗೊತ್ತಿಲ್ಲ ಎನ್ನುವ ರೀತಿಯಲ್ಲಿ ನೀವೇ ಹೇಳಬೇಕು ಎಂದು ವಿಷಯವನ್ನು ಮರೆಮಾಚುವ ರೀತಿಯಲ್ಲಿ ಮಾತನಾಡಿದರು. ಮಣಿಕಂಠ್ ರಾಠೋಡ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಸಿದ್ದಾಜಿ ಪಾಟೀಲ್ ಅವರು ನೀಡದೇ ನುಣುಚಿಕೊಂಡರು.

LEAVE A REPLY

Please enter your comment!
Please enter your name here