ವಾರ್ಷಿಕ ಪೋಲಿಸ್ ಕ್ರೀಡಾಕೂಟ-23ಪ್ರೆಸ್ ತಂಡಕ್ಕೆ ಭರ್ಜರಿ ಗೆಲುವು9 ವಿಕಟ್‌ಗಳಿಂದ ಪೋಲಿಸ್ ತಂಡಕ್ಕೆ ಸೋಲು

0
641

ಕಲಬುರಗಿ, ನ. 29: 2023ರ ವಾರ್ಷಿಕ ಪೋಲಿಸ್ ಕ್ರೀಡಾಕೂಟದ ಅಂಗವಾಗಿ ಇಂದು ನಡೆದ ಕ್ರಿಕೆಟ್ ಪಂದ್ಯದಲ್ಲಿ ಪೋಲಿಸ್ ತಂಡ ವಿರುದ್ಧ ಬರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದ ಪೋಲಿಸ್ ಆಯುಕ್ತ ಚೇನತಕುಮಾರ ಅವರ ನೇತೃತ್ವದ ಪೋಲಿಸ್ ತಂಡ ಮೊದಲ ಬ್ಯಾಟ್ ಮಾಡಿ ನಿಗದಿತ 10 ಓವರ್‌ಗಳಲ್ಲಿ ಮಹಾದೇವ ಪಾಟೀಲ್ ಅವರ ಬಿರುಸಿನ ಔಟಾಗದೆ 41 ರನ್‌ಗಳ ನೆರವನಿನಿಂದ 5 ವಿಕೆಟ್ ಕಳೆದುಕೊಂಡು 97 ರನ್ ಮಾಡಿತು.
ನಂತರ ಬ್ಯಾಟ್ ಮಾಡಲು ಇಳಿದ ಪ್ರೆಸ್ ತಂಡವು ಆರಂಭದ ಓವರ್‌ನಲ್ಲಿ ಸಂಜು ರಾಠೋಡ ಅವರ ಬಿರುಸಿನ 2 ಸಿಕ್ಸರ್, 2 ನಾಲ್ಕು ರನ್‌ಗಳು ಸೇರಿ 21 ರನ್‌ಗಳಿಸಿ ಗೆಲುವಿಗೆ ಒಳ್ಳಯ ಅಡಿಪಾಯದೊಂದಿಗೆ ಬ್ಯಾಟ್ ಮಾಡಿದ ಪ್ರೆಸ್ ತಂಡ ನಿಗದಿತ 5.4 ಓವರ್‌ಗಳಲ್ಲಿ ಕೇವಲ ಒಂದು ವಿಕಟ್ ಕಳೆದುಕೊಂಡು ಗೆಲುವಿಗೆ ಬೇಕಾದ 98 ರನ್ ಸೇರಿಸಿ ಅಂತಿಮವಾಗಿ ಪೋಲಿಸ್ ತಂಡವನ್ನು 9 ವಿಕಟ್‌ಗಳಿಂದ ಸೋಲಿಸಿ, ಗೆಲುವು ತನ್ನ ಮುಡಿಗೆರಿಸಿಕೊಂಡಿತು.
ಪೋಲಿಸ್ ತಂಡದ ಪರವಾಗಿ ಬ್ಯಾಟ್ ಮಾಡಿದ ಪೋಲಿಸ್ ಆಯುಕ್ತ ಚೇನತಕುಮಾರ 1 ರನ್‌ಗೆ ಔಟಾದರು. ನಂತರ ಬಂದ ಎ.ಸಿ.ಪಿ. ಭುತೇಗೌಡ ಅವರು ಸೊನ್ನೆ ರನ್‌ನೊಂದಿಗೆ ಪೇವಿಲಿಯನ್ ತೆರಳಿದರು. ಭುತೆಗೌಡ ಅವರು ಅರುಣ ಕದಮ್ ಅವರ ಬೌಲ್‌ನಲ್ಲಿ ಕ್ಯಾಚ್ ಔಟಾದರು. ಚೇತನಕುಮಾರ ಅವರ ವಿಕೆಟ್ ಪುರುಷೋತ್ತಮ ಪಡೆದರು.
ಸಂತೋಷ ತಟ್ಟೆಪಲ್ಲಿ (22) ಅರುಣ ಕದಮ್ ಅವರ ಬೌಲ್‌ನಲ್ಲಿ ಕ್ಯಾಚ್ ಔಟದರು. ಮತ್ತು ಸುಶೀಲಕುಮಾರ 15 ರನ್ ಮಾಡಿದಾಗ ಅರುಣ ಕದಮ್ ಅವರ ಉತ್ತಮ ಕ್ಷೇತ್ರ ರಕ್ಷಣೆಯಿಂದ ರನ್ ಔಟ್ ಆದರು. ಬಸವರಾಜ ಪಿಎಸ್‌ಐ ಸಿಸಿಬಿ ಅವರು ಸೊನ್ನೆ ರನ್ ಮಾಡಿ ಪೆವಿಲಿಯನ್‌ಗೆ ತೆರಳಿದರು. ಪಿಐ ಶಿವಾನಂದ ವಾಲಿಕರ್ ಅವರು ಕೇವಲ 1 ರನ್ ಮಾಡಿ ಔಟಾಗದೆ ಉಳಿದರು.
ಈ ಪಂದ್ಯದಲ್ಲಿ ಪೋಲಿಸ್ ತಂಡಕ್ಕೆ 21 ಅಧಿಕ ರನ್‌ಗಳೆ ತಂಡದ ಎರಡನೇ ಅಧಿಕ ರನ್‌ಗಳಿಕೆಯ ಸ್ಥಾನ ಪಡೆಯಿತು.
ಪ್ರೆಸ್ ತಂಡದ ಪರವಾಗಿ ಸಂಜು ರಾಠೋಡ 22 ಎಸೆತಗಳಲ್ಲಿ 6 ಸಿಕ್ಸ್ರ್ ಮತ್ತು 10 ಬೌಂಡರಿಗಳ ನೆರವನಿಂದ 78 ರನ್ ಹಾಗೂ ಅಮಜದ್ ಅಲಿ ಅವರು 17 ರನ್ ಮಾಡಿ ಅವರುಗಳು ಅಜಯರಾಗಿ ಉಳಿದರು. ಪ್ರೆಸ್ ತಂಡ ಪರವಾಗಿ ಬ್ಯಾಟ್ ಮಾಡಿ ನ್ಯಾಯಕ ಪ್ರವೀಣ ರೆಡ್ಡಿ ಅವರು ಸೊನ್ನೆ ರನ್ ಮಾಡಿ ಔಟಾದರು. ಅಂತಿಮವಾಗಿ ಪ್ರೆಸ್ ತಂಡ ನಿಗದಿತ 5.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 98 ರನ್ ಮಾಡಿ, ಗೆಲುವು ಸಾಧಿಸಿತು.
ಪ್ರೆಸ್ ತಂಡ ಪರವಾಗಿ ಬೌಲ ಮಾಡಿದ ಪುರುಷೋತ್ತಮ 3 ಓವರ್‌ಗಳಲಿ 24 ರನ್ ನೀಡಿ 2 ವಿಕೆಟ್, ಸಂಜು ರಾಠೋಡ ಎರಡು ಓವರ್‌ಗಳಲಿ 26 ರನ್ ನೀಡಿ 1 ವಿಕಟ್, ಅರುಣ ಕದಮ್ ಅವರು 2 ಓವರ್‌ಗಳಲ್ಲಿ 18 ರನ್ ನೀಡಿ, 2 ವಿಕಟ್ ಪಡೆದರೆ, ಶಾಲಿವಾಹನ ಅವರು 2 ಓವರ್‌ಗಳಲಿ 17 ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ.
ಪೋಲಿಸ್ ತಂಡ ಪರವಾಗಿ ಬೌಲ್ ಮಾಡಿದ ಮಹಾದೇವ ಪಾಟೀಲ್ ಅವರು 3 ಓವರ್ ಗಳಲ್ಲಿ 31 ರನ್ ಮಾಡಿ ಒಂದು ವಿಕೆಟ್ ಪಡದರೆ, ಉಳಿದ ಸುಶೀಲ್‌ಕುಮಾರ 1 ಓವರ್ 21 ರನ್ ಯಾವುದೇ ವಿಕೆಟ್ ಇಲ್ಲ, ಶಕೀಲ್ ಅಂಗಡಿ ಒಂದು ಓವರ್ 19 ರನ್, ಶಿವಾನಂದ ವಾಲಿಕರ್ ನಾಲ್ಕು ಬೌಲ್‌ಗಳಲ್ಲಿ 14 ರನ್ ನೀಡದರು.
ಮನೀಷ ಪತ್ರಿಕೆಯ ರಾಜು ದೇಶಮುಖ ಟಾಸ್ ಮಾಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು. ಕಾಮೆಂಟೆಟರ್ ಆಗಿ ಪ್ರಜಾ ಟಿವಿ ಗೋಪಾಲರಾವ ಕುಲಕರ್ಣಿ ಅವರು ಕಾರ್ಯ ನಿರ್ವಹಿಸಿದರು.
ಪ್ರೆಸ್ ತಂಡ: ಪ್ರವೀಣ ರೆಡ್ಡಿ (ನಾಯಕ), ಅರುಣ ಕದಮ (ಉಪನಾಯಕ), ಪುರುಷೋತ್ತಮ, ಮನೀಷ ದೇಶಮುಖ, ರಾಚಪ್ಪ, ಸಂಜು ರಾಠೋಡ, ಶಾಲಿವಾಹನ, ಅಮಜದ್ ಅಲಿ, ಆಕಾಶ, ಅನೀಲ ಸ್ವಾಮಿ ಮತ್ತು ದತ್ತು ಪಾಟೀಲ್ ಅವರುಗಳಿದ್ದರು.
ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಸಿಇಎನ್ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಸೋಮಲಿಂಗ ಕಿರದಳ್ಳಿ, ಚೌಕ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಭಜಂತ್ರಿ, ಪಿಸಿಆರ್‌ಬಿ ಇನ್ಸ್ಪೆಕ್ಟರ್ ರಮೇಶ ಕಾಂಬಳೆ, ಸಬ್ ಅರ್ಬನ್ ಎಸಿಪಿ ರಾಜಣ್ಣ, ಎಸಿಪಿ ಸುಧಾ ಆದಿ, ಸಂಚಾರಿ ಎಸಿಪಿ ಇಸ್ಮಾಯಿಲ್, ಸಂಚಾರಿ-1 ಇನ್ಸ್ಪೆಕ್ಟರ್ ಮಹಾಂತೇಶ ಪಾಟೀಲ್, ಅಶೋಕ ನಗರ ಇನ್ಸ್ಪೆಕ್ಟರ್ ಅರುಣ. ವಿಶ್ವವಾಣಿಯ ಪತ್ರಕರ್ತ ದೇವೀಂದ್ರ ಜಾಡಿ ಸುದ್ದಿಮೂಲ ಪತ್ರಿಕೆಯ ಸೋಮಶೇಖರ ಅವರುಗಳು ಸೇರಿದಂತೆ ಇನ್ನಿತರ ಪತ್ರಕರ್ತರು, ಪೋಲಿಸ್ ಇಲಾಖೆಯ ಸಿಬ್ಬಂದಿಗಳಿದ್ದರು.

LEAVE A REPLY

Please enter your comment!
Please enter your name here