ಕಲಬುರಗಿ, ಸೆ. 26: ಮುಂಬರುವ ಲೋಕಸಭಾ ಚುನಾವಣೆ ಹಾಗೂ ಧೀರ್ಘಕಾಲದವರೆಗೆ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ಮಾಡಿಕೊಂಡ ಮೈತ್ರಿಗೆ ನಮ್ಮ ಪಕ್ಷದಲ್ಲಿ ಯಾರು ವಿರೋಧಿಸಿಲ್ಲ, ಆದರೆ ಕೆಲವರ ಸಣ್ಣಪುಟ್ಟ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಅವುಗಳನ್ನೆಲ್ಲವು ಬಗೆಹರಿಸುತ್ತೇವೆ ಎಂದು ಮಾಜಿ ಸಚಿವ ಜೆಡಿಎಸ್ ನಾಯಕ ಬಂಡೆಪ್ಪಾ ಖಾಶೆಂಪೂರ ಅವರು ಹೇಳಿದ್ದಾರೆ.
ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ನಮ್ಮ ಈ ಮೈತ್ರಿಯಿಂದ ಕಾಂಗ್ರೆಸ್‌ಗೆ ಭಯ ಆರಂಭವಾಗಿದ್ದು, ಅವರ ಓಟಕ್ಕೆ ಬ್ರೇಕ್ ಬೀಳುವ ಚಿಂತರ ಕಾಡುತ್ತಿದೆ ಎಂದರು.
ಯಾವುದೇ ಸರಕಾರ ಅಧಿಕಾರಕ್ಕೆ ಬರಲಿ ಅದರ ವಿರೋಧಿ ಅಲೆ ಪ್ರಾರಂಭವಾಗುವುದು ಒಂದು ವರ್ಷ ಆದ ಮೇಲೆ ಆದರೆ ರಾಜ್ಯದಲ್ಲಿ ಕಾಂಗೈಗೆ ಆಡಳಿತ ವಿರೋಧಿ ಅಲೆ ಮೂರೇ ತಿಂಗಳಲ್ಲಿ ಆರಂಭವಾಗಿದೆ ಎಂದು ನುಡಿದರು ಕಾಶೆಂಪೂರ.
ಒAದೆಡೆ ಗ್ಯಾರಂಟಿ ಕೊಟ್ಟು ಇನ್ನೊಂದೆ ಗ್ರಾಮ ಪಂಚಾಯತಿಗೊದು ಮದ್ಯದಂಗಡಿ ಕೊಡ್ತೇನೆ ಎನ್ನುವ ಸರಕಾರದ ನಿರ್ಧಾರ ಬಡವರಿಗೆ ತೊಂದರೆ ಕೊಡೋ ಉದ್ದೇಶವೇ ಹೊರತು, ಬಡವರ ಉದ್ದಾರಕ್ಕಾಗಿ ಅಲ್ಲ ಎಂದರು.
ಇನ್ನು ಕುಮಾರಸ್ವಾಮಿಯವರು ಬಿಜೆಪಿಯವರ ಕಾಲು ಬಿದ್ದು ಮೈತ್ರಿ ಮಾಡಿಕೊಂಡಿದ್ದಾರೆAಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡುವುದು ಸರಿಯಲ್ಲ, ಇಂತಹ ಮಾತುಗಳನ್ನು ಆಡುವ ಮೊದಲು ಯೋಚನೆ ಮಾಡಬೇಕೆಂದರು. ಇದು ಅವರ ಹತಾಶೆಯ ಮಾತುಗಳಾಗಿವೆ ಎಂದು ಟಾಂಗ್ ನೀಡಿದರು.
Home Featured Kalaburagi ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳ ಹೊರತು ಬಿಜೆಪಿ-ಜೆಡಿಎಸ್ಮೈತ್ರಿಗೆ ಯಾರು ವಿರೋಧಿಸಿಲ್ಲಾ : ಬಂಡೆಪ್ಪಾ ಖಾಶೆಂಪೂರ