ಕಲಬುರಗಿ, ಸೆ. 26: ರಾಜ್ಯ ಸರಕಾರಕ್ಕೆ ಕಾವೇರಿ ಬಗ್ಗೆ ಕಾಳಜಿಯೆ ಇಲ್ಲದಂತಾಗಿದೆ, ನೀರು ಇಲ್ಲದೆ ಇದ್ರೆ ಕುಡಿಯಲು ನೀರು ಸಿಗುತ್ತಾ. ಅಂದ ಮೇಲೆ ರಾಜ್ಯದಲ್ಲಿ ಈ ಸರಕಾರ ಇರುತ್ತಾ ಎಂದು ಪ್ರಶ್ನಿಸಿದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ತಮ್ಮ ವಾದ ಮಂಡಿಸಲು ಸರಕಾರ ವಿಫಲವಾಗಿದೆ ಎಂದು ಆವರು ಆರೋಪಿಸಿದ್ದಾರೆ.
ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಈ ಮುಂಚೆ ರಾಜ್ಯದಲ್ಲಿ ಮಳೆಯ ಬಗ್ಗೆ ಹವಮಾನ ಇಲಾಖೆ ವರದಿ ನೀಡಿದಾಗಲೇ ಪ್ರಾಧಿಕಾರದ ಮುಂದೆ ಸರ್ಕಾರ ಹೋಗಿ, ಸಂಕಷ್ಟ ಸೂತ್ರ ರೂಪಿಸುವಂತೆ ಮನವಿ ಮಾಡಬೇಕಿತ್ತು ಎಂದರು.
ಮುAದುವರೆದು ಮಾತನಾಡಿದ ಜಿಟಿ ದೇವೇಗೌಡರು, ಯಾವ ಆದೇಶ ಇಲ್ಲದೇ ಇದ್ದಾಗಲೇ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ, ಸ್ಟಾಲೀನ್ ಜೊತೆ ಸೇರಿ ಇಂಡಿಯಾ ಅಧಿಕಾರಕ್ಕೆ ತರಲು ನೀರು ಬಿಟ್ಟು, ಕರ್ನಾಟಕದ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಕಾವೇರಿ ನೀರಾಗಿ ರೈತರ ಬದುಕು ಬೀದಿಗೆ ಬರುವ ಸೂಚನೆಯಿದ್ದರೂ ಕೂಡ ಅಧಿಕಾರದ ಅಮಲಿನಲ್ಲಿ ಕಾಂಗ್ರೆಸ್ ನವರು ತೇಲ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯವರು ವೈರಿಗಳಾಗಿಯೇ ಇರಬೇಕು ಅಂತ ಕಾಂಗ್ರೆಸ್ ಆಸೆಪಟ್ಟಿತ್ತು. ಆದ್ರೆ ಮೈತ್ರಿಯಿಂದ ಇದೀಗ ಅವರಿಗೆ ಆತಂಕ ಎದುರಾಗಿದೆ ಎಂದರು.
ಸಮರ್ಥ ಮುಖ್ಯಮಂತ್ರಿ ಅನಿಸಿಕೊಂಡಿದ್ದ ಸಿದ್ದರಾಮಯ್ಯ, ವಿಫಲ ಮುಖ್ಯಮಂತ್ರಿ ಅನಿಸಿಕೊಂಡಿದ್ದಾರೆ ಕಾವೇರಿ ವಿಚಾರವಾಗಿ ಬೆಂಗಳೂರು ಬಂದ್ ವಿಚಾರ ಸರ್ಕಾರದ ವಿರುದ್ಧ ಎಲ್ಲರು ಒಗ್ಗಟ್ಟಾಗಿ ಹೋರಾಡುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆ ಮಾಡಿದ್ರು ಕೂಡ ಸರಕಾರ 144 ಸೆಕ್ಷನ್ ಹಾಕಿದ್ದು ಇದೊಂದು ಅವೈಜ್ಞಾನಿಕ ಸರ್ಕಾರ ಎಂದು ತೆಗಳಿದ ಗೌಡರು, ಹೋರಾಟ ಮಾಡುತ್ತಿರೋ ಕನ್ನಡಿಗರನ್ನೇ ಬಂಧಿಸುತ್ತಿದ್ದಾರೆ. ಅಲ್ಲದೇ ದೇವೇಗೌಡರನ್ನು ಸಿದ್ದರಾಮಯ್ಯ ಬಂದು ಬೇಟಿಯಾಗಿಲ್ಲಾ. ಕಾವೇರಿ ವಿಚಾರವಾಗಿ ಬಂದು ಮಾತುಕತೆ ನಡೆಸಿಲ್ಲಾ ಎಂದು ಹೇಳಿದರು.