ಕಲಬುರಗಿ, ಸೆ. 10: ನಾನು ಯಾವುದೇ ಧರ್ಮದ ವಿರುದ್ಧ ಅಲ್ಲ, ನಾವು ಧರ್ಮದ ಬಗ್ಗೆ ಮಾತನಾಡುತ್ತಿಲ್ಲ, ನಾನು ಜನರನ್ನು ಪ್ರೀತಿಸುವ ಮನುಷ್ಯ ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಹಿಂದೂ ವಿರೋಧಿ ಅನ್ನೋ ವಿಚಾರ ಸರಿಯಲ್ಲ, ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲೀನ್ ಹೇಳಿಕೆ ತಿರುಚಲಾಗಿದೆ. ಅವರು ಮಾತನಾಡಿದ್ದರಲ್ಲ ತಪ್ಪೇನಿದೆ ಎಂದು ರೈ ಅಸ್ಪçö್ಯಶ್ಯತೆ ಹೋಗಬೇಕು ಇಲ್ಲವೋ ಎಂದು ಪ್ರಶ್ನಿಸಿದ ಅವರು ಜಾತಿ ವಿವಾದ ಹುಟ್ಟು ಹಾಕ್ತಿರೋರಿಗೆ ಕೆಲಸ ಇಲ್ವಲ್ಲ ಅದಕ್ಕೆ ಈ ರೀತಿ ಮಾಡ್ತಿದ್ದಾರೆ ಎಂದರು ರೈ.
ಅಸ್ಪೃಶ್ಯತೆ ಹೋಗಬೇಕು ಇಲ್ಲವೊ? ನಾನು ಜನಪರ, ವ್ಯಕ್ತಿಯಾಗಿದ್ದು ರಾಜಕೀಯ ವ್ಯಕ್ತಿ ಅಲ್ಲ ಎಂದ ರೈ ನಾನು ಪ್ರತಿಭೆಯಿಂದ ಬೆಳೆದಿಲ್ಲ, ಜನರ ಪ್ರೀತಿಯಿಂದ ಬೆಳೆದಿದ್ದೇನೆ. ಜನರಿಗಾಗಿ ನಾನು ಧ್ವನಿ ಎತ್ತಲೇಬೇಕಲ್ವಾ ಎಂದರು.
ಜೈ ಶ್ರೀರಾಮ ಅಂತಾ ಮೆರವಣಿಗೆಯಲ್ಲಿ ಯುವಕರು ಕೈಯಲ್ಲಿ ಕತ್ತಿ ಹಿಡಿದುಕೊಂಡು ಓಡಾಡ್ತಾರೆ ಅಂದ್ರೆ ಏನೂ, ಅವರವರ ಧರ್ಮ, ಅವರವರ ನಂಬಿಕೆ ಅವರಿಗೆ ಬಿಟ್ಟಿದೆ, ಆದ್ರೆ ಎಲ್ಲರೂ ಚೆನ್ನಾಗಿರಬೇಕು, ಬಸವಣ್ಣ, ಅಂಬೇಡ್ಕರ್ ಅವರು ಹೇಳಿದ್ದು ಬರೀ ಭಾಷಣಕ್ಕಾಗಿ ಅಲ್ಲ ಅವುಗಳನ್ನು ಜೀವನಲ್ಲಿ ಅಳವಡಿಸಿಕೊಳ್ಳೋಕು ಎಂದ ಪ್ರಕಾಶ ರೈ ಕೋಮು ಗಲಭೆಯಿಂದ ಹಾನಿ ಆಗ್ತಿರೋದು ಯಾರಿಗೆ ಹೆಣ್ಣು ಮಕ್ಕಳಿಗೆ, ನಾವೇ ಸಮಸ್ಯೆ ಅನುಭವಿಸಬೇಕು ಎಂದರು.
ಅವರು ವಿಶ್ವಗುರು ಆಗಲಿ, ನಾವು ವಿಶ್ವ ಮಾನವ ಆಗೋಣ ಎಂದ ರೈ ಸ್ಟಾಲೀನ್ ಹೇಳಿಕೆಗೆ ಬೆಂಬಲ ಸೂಚಿಸಿದರು.