ಕಠಿಣ ಪರಿಶ್ರಮ, ಛಲ ಇದ್ದರೆ ಯಶಸ್ಸು ಸಾಧ್ಯ: ಬಿ.ಫೌಜಿಯಾ ತರನ್ನುಮ್

0
242

ಕಲಬುರಗಿ,ಆ.29:ಜೀವನದಲ್ಲಿ ಕಠಿಣ ಪರಿಶ್ರಮ, ಸತತ ಅಭ್ಯಾಸ, ಸಾಧಿಸುವ ಛಲ ಇದ್ದಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಮಂಗಳವಾರ ಕಲಬುರಗಿ ನಗರದ ಬಿ.ಬಿ. ರಜಾ ಪದವಿ ಪೂರ್ವ ಕಾಲೇಜಿನಲ್ಲಿ “ಸ್ಫೂರ್ತಿ ಕಿರಣ” ಕಾರ್ಯಕ್ರಮದ ಅಂಗವಾಗಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ತಾವು ಸತತ ಅಧ್ಯಯನ, ಕಠಿಣ ಶ್ರಮದ ಫಲವಾಗಿಯೇ ನಿಮ್ಮ ಮುಂದೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನಿಂತಿದ್ದೇನೆ. ಮನಸ್ಸಿದ್ದರೆ ಮಾರ್ಗ ಎಂಬುದನ್ನು ಮರೆಯದಿರಿ ಎಂದು ಮಕ್ಕಳಲ್ಲಿ ಸ್ಫೂರ್ತಿಯ ಮಾತುಗಳನ್ನು ತುಂಬಿದರು.
ಇನ್ನು ಸಂವಾದದಲ್ಲಿ ಐ.ಎ.ಎಸ್. ಕೆಲಸ ತುಂಬಾ ಡೇಂಜರ್ ಅಂತೆ, ಇಂಡಿಯಾದಲ್ಲಿ ಎಲ್ಲಿಯಾದರು ವರ್ಗಾವಣೆ ಮಾಡ್ತಾರಂತೆ ಎಂದು ವಿದ್ಯಾರ್ಥಿನಿಯೊಬ್ಬಳು ಡಿ.ಸಿ. ಅವರನ್ನು ಪ್ರಶ್ನಿಸಿದಳು. ಕೆಲಸ ಮಾಡುವ ಛಲ ಇದ್ದರೆ ವರ್ಗಾವಣೆಗೆ ಏಕೆ ಅಂಜಬೇಕು ಎಂದ ಬಿ.ಫೌಜಿಯಾ ತರನ್ನುಮ್, ಐ.ಎ.ಎಸ್. ಪರೀಕ್ಷೆ ತೆಗೆದುಕೊಳ್ಳಬೇಕಾದರೆ ಕಲಾ, ವಾಣಿಜ್ಯ, ವಿಜ್ಞಾನ ಓದಿದವರೆ ತೆಗೆದುಕೊಳ್ಳಬೇಕೆಂದು ನಿಯಮವೇನಿಲ್ಲ. ಯಾವುದೇ ಪದವೀಧರರು ಪರೀಕ್ಷೆ ಬರೆಯಬಹುದು ಎಂದರು.
ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಕಾಲೇಜಿನ ಪ್ರಾಂಶುಪಾಲರಾದ ಮೀನಾಕ್ಷಿ, ಆಡಳಿತ ಮಂಡಳಿಯ ಗೇಸುದರಾಜ ಖಾದ್ರಿ ಸೇರಿದಂತೆ ಬೋಧಕ, ಬೋಧಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here