ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಪೋಲಿಸ್ ಎನ್‌ಕೌಂಟರ್ ಹುನ್ನಾರ: ಆಂದೋಲಾ ಶ್ರೀಗಳ ಗಂಭೀರ ಆರೋಪ

0
868

ಚಿತ್ತಾಪುರ, ಆ.28- .ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪರ ಇರುವ ವ್ಯಕ್ತಿಗೆ ಸುಳ್ಳು ಪ್ರಕರಣ ಹಾಕಿಸಿ ಒಳಗೆ ಇಡುತ್ತಾರೆ. ಬಿಜೆಪಿ ಪಕ್ಷದ ಮುಖಂಡ ಮಣಿಕಂಠ್ ರಾಠೋಡ್ ಅವರಿಗೆ ಪೊಲೀಸರು ಎನ್‌ಕೌಂಟರ್ ಮಾಡುವ ಹುನ್ನಾರವಿದೆ ಎಂದು ಶ್ರೀರಾಮ್ ಸೇನೆಯ ರಾಜ್ಯಾಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಅವರು ಗಂಭೀರ ಆರೋಪ ಮಾಡಿದರು.

ತಾಲ್ಲೂಕಿನ ಕಲಗುರ್ತಿ ಗ್ರಾಮದ ದೇವಾನಂದ್ ರಾಮಚಂದ್ರ ಕೋರಬಾ ಅವರ ಆತ್ಮಹತ್ಯೆ ಪ್ರಕರಣ ಸಂಬAಧಿಸಿದAತೆ ಧ್ವನಿ ಎತ್ತಿ,ಪೊಲೀಸರ ವಿರುದ್ಧ ಸುಳ್ಳು ಮಾಹಿತಿ ಹಬ್ಬಿರುವ ಆರೋಪದ ಮೇಲೆ ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಅವರ ಬಂಧನ ಖಂಡಿಸಿ ಬಿಜೆಪಿ ಮಂಡಲ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎನ್‌ಕೌಂಟರ್ ಮಾಡುವ ಕುರಿತು ಸ್ವತಃ ಮಣಿಕಂಠ್ ರಾಠೋಡ್ ಅವರು ನನ್ನೊಂದಿಗೆ ಚರ್ಚೆ ಮಾಡಿದ್ದರು. ಆದ್ದರಿಂದ ಮಣಿಕಂಠ್ ರಾಠೋಡ್ ಅವರಿಗೆ ಕೇಂದ್ರ ಸರ್ಕಾರದ ಭದ್ರತೆ ನೀಡಬೇಕು. ಹಿಂದೂ ಯುವಕರನ್ನು ಉದ್ದೇಶಪೂರ್ವಕವಾಗಿ ಬಂಧನ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಲಬುರ್ಗಿ ಜಿಲ್ಲೆಯಲ್ಲಿ ಅಘೋಷಿತ ಯುವರಾಜನ ಹಾಗೇ ವರ್ತನೆ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧರ್ಮ ರಾಜಕೀಯ ನಡೆದಿದೆ. ದುಷ್ಟ ಶಕ್ತಿಗಳ ಮಟ್ಟ ಹಾಕಬೇಕಿದೆ ಎಂದು ಹೇಳಿದ ಅವರು, ಮಣಿಕಂಠ್ ರಾಠೋಡ್ ಅವರಂತೆ ನಾನು ಸಹ ಪ್ರಿಯಾಂಕ್ ಖರ್ಗೆ ಅವರ ಶೋಷಣೆಗೆ ಒಳಗಾಗಿದ್ದೇನೆ. ಅವರ ವಿರುದ್ಧ ಮಾತನಾಡಿದ್ದಕ್ಕೆ 10 ಲಕ್ಷ ರೂ.ಗಳ ಮಾನನಷ್ಟ ಮೊಕದಮ್ಮೆ ಹಾಕಿದ್ದರು ಎಂದು ತಿಳಿಸಿದರು.
ಖರ್ಗೆ ಅವರ ಕುಟುಂಬದ ಬಗ್ಗೆ ಮಾತನಾಡಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ರಾಜಕೀಯ ಜೀವನದಲ್ಲಿ ಪರ, ವಿರುದ್ಧ ಮಾತನಾಡುವುದು ಸಾಮಾನ್ಯ ಅದರ ಪರಿಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇಲ್ಲ. ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಸೂಪರ್ ಸಿಎಂ ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚಿ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವಂತಹ ಕೆಲಸ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ಡಾ. ಬಾಬಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಹೇಳುವ ಅವರ ಸಂವಿಧಾನ ಕೇವಲ ಒಂದು ಸಮುದಾಯದಕ್ಕೆ ಮಾತ್ರ ತೋರಿಸುವುದು ಅಲ್ಲ. ನಿಮ್ಮ ಎಡಗೈ ಮತ್ತು ಬಲಗೈ ಅವರಿಗೂ ಸಂವಿಧಾನವನ್ನು ತೋರಿಸಿ ಎಂದು ಟೀಕಿಸಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಖರ್ಗೆ ಅವರ ಕೈಗೊಂಬೆಯAತೆ ಕೆಲಸ ಮಾಡುತ್ತಿದ್ದಾರೆ. ಅವರು 3 ವರ್ಷ ಕಳೆದರೂ ವರ್ಗಾವಣೆ ಆಗುತ್ತಿಲ್ಲ ಅಂದರೆ ಅವರಿಗೆ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ ಎಂದು ಕಿಡಿಕಾರಿದರು.

LEAVE A REPLY

Please enter your comment!
Please enter your name here