ಮಧ್ಯಮ ವರ್ಗದವರ ಲೂಟಿಗಿಳಿದ ರಾಜ್ಯ ಸರಕಾರ

0
789

ಕೊಟ್ಟು, ಕಸಿದುಕೊಳ್ಳುವ ಕೆಟ್ಟ ನೀತಿಯ ಸಿದ್ರಾಮಯ್ಯ ನೇತೃತ್ವದ ರಾಜ್ಯ ಸರಕಾರ ಮಧ್ಯಮ ವರ್ಗದವರ ಲೂಟಿಗಿಳಿದಂತಿದೆ.
ಹಿAದಿನ ಸರಕಾರಗಳು ಭ್ರಷ್ಟವೆಂದು ಸಾರುತ್ತ, ಮೋಸದ ಪುಕ್ಕಟೆ ಯೋಜನೆಗಳ ಜಾರಿಯ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಸರಕಾರ ರಚನೆಯ ದಿನಂದಿದಲೇ ಕರೆಂಟ್ ಬಿಲ್ ಏರಿಕೆಯಿಂದಲೇ ಲೂಟಿಗಿಳಿಯಿತು.
ಮುಂಚೆ ವಿದ್ಯುತ್ ಬಿಲ್ ಪಾವತಿಗಾಗಿ ಸ್ಲಾö್ಯಬ್ ಪದ್ಧತಿಯಿತ್ತು. 1 ರಿಂದ 30 ಯುನಿಟ್ ವರೆಗೆ, 31 ರಿಂದ 50 ರವರೆಗೆ, 51ರಿಂದ 100 ಯುನಿಟ್ ವರೆಗೆ ಪ್ರತಿ ಯುನಿಟ್‌ಗೆ ಇಂತಿಷ್ಟು ರೂ. ದರ ನಿಗದಿಯಿರುತ್ತಿತ್ತು. ಆದರೆ ಸಿದ್ರಾಮಯ್ಯ ಸರಕಾರ ಬಂದ ಮೇಲೆ ಸ್ಲಾö್ಯಬ್ ಪದ್ಧತಿ ತೆಗೆದು ಹಾಕುವುದರೊಂದಿರಿಗೆ ವಿದ್ಯುತ್ ದರವು ಕೂಡ ಏರಿಕೆ ಮಾಡಿ ಮಧ್ಯಮ ವರ್ಗದವರಿಗೆ ಭಾರಿ ಹೊಡೆತ ನೀಡಿದೆ.
ಗೃಹಜ್ಯೋತಿ ಯೋಜನೆಯ ಪುಕ್ಕಟ್ಟೆ 200 ಯುನಿಟ್‌ವರೆಗೆ ವಿದ್ಯುತ್ ನೀಡುವ ವಿದ್ಯುತ್ ಮಂಡಳಿ ಸರಾಸರಿ ಒಂದು ವರ್ಷದ ಲೆಕ್ಕಾಚಾರದ ಮೇಲೆ ಕರೆಂಟ್ ಬಿಲ್ ನಿಗದಿ ಮಾಡಿದ್ದು, ಉದಾಹರಣೆಗೆ ಕಳೆದ ಆಗಸ್ಟ್ 2022 ರಿಂದ 1 ಆಗಸ್ಟ 2023ರ ವರೆಗೆ 12 ತಿಂಗಳಲ್ಲಿ ಗೃಹಬಳಕೆಯ ವಿದ್ಯುತ್ ಸರಾಸರಿ 200 ಯುನಿಟ್ ಮೀರಿರಬಾರದು ಎಂಬ ನೀತಿಯೊಂದಿಗೆ ಮಧ್ಯಮ ವರ್ಗದವರಿಗೆ ಹಳೆಯ ವಿದ್ಯುತ್ ದರದಿಂದ ಶೇ. 20ರಷ್ಟು ಏರಿಕೆ ಮಾಡಿದೆ.

ಇನ್ನು ಸರಾಸರಿ ಒಂದು ಮನೆಯಲ್ಲಿ ತಿಂಗಳಿಗೆ 50 ಯುನಿಟ್ ಬಳಕೆ ಮಾಡುತ್ತಿದ್ದರೆ, ಅಂತಹ ಬಳಕೆದಾರರು ಈ ಗೃಹಜ್ಯೋತಿ ಯೋಜನೆಯಿಂದ ಲಾಭ ಪಡೆಯಲು ಅಡುಗಾಗಿ, ನೀರು ಕಾಸುವುದಕ್ಕಾಗಿ ವಿದ್ಯುತ್ ಸಲಕರಣೆಗಳು ಉಪಯೋಗಿಸುವಂತಿಲ್ಲ, ಕಾರಣ ಹಿಂದಿನ ಬಳಕೆಯ ಶೇ. 10ಷ್ಟು ಮಾತ್ರ ಇವರಿಗೆ ರಿಯಾಯಿತಿ ನೀಡುತ್ತಿದ್ದು, ಅಂದರೆ ಉದಾಹರಣೆಗೆ 60 ಯುನಿಟ್ ಮಾತ್ರ ಬಳಸಬಹುದಾಗಿದೆ, ಉಳಿದ ಹೆಚ್ಚಿನ ಯುನಿಟ್ ಪೂರ್ತಿ ಹಣ ಪಾವತಿಸುವ ಲೆಕ್ಕವಾಗಿದೆ.
ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ನನಗೂ ಫ್ರೀ… ನಿಗೂ ಫ್ರೀ… ಏನಾಯಿತು. ಸಿದ್ರಾಮಯ್ಯವರೇ, ಡಿಕೆ ಶಿವಕುಮಾರ ಅವರೆ ನಿಮಗೆ ಈ ಗೃಹಜ್ಯೋತಿ ಅನ್ವಯಿಸುತ್ತದೆಯೋ….! ಇಲ್ಲ ತಾನೆ…! ಹಾಗಾದರೆ ನಿಮ್ಮ ಘೋಷನೆಗಳು ಸುಳ್ಳಲ್ಲವೇ?
ಇನ್ನು ಗೃಹಲಕ್ಷಿö್ಮÃ ಯೋಜನೆಯಡಿಯಲ್ಲಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ಭತ್ಯೆ ನೀಡುವುದಾಗಿ ಘೋಷಣೆ ಮಾಡಲಾಗಿತ್ತು, ಅದನ್ನು ಅನುಷ್ಠಾನಕ್ಕೂ ತರಲಾಗಿದೆ, ಆದರೆ ಮುಂಚೆ ಘೋಷಣೆಯೊಂದಿಗೆ ಕರಾರುಗಳನ್ನು ಸಹ ಪ್ರಕಟಿಸಿಬೇಕಾಗಿತ್ತು, ಮನೆಯ ಯಜನಾಮಿ, ಯಜಮಾನ ಅಥವಾ ಅವರ ಮಕ್ಕಳು ಯಾರಾದರೂ ಜಿಎಸ್‌ಟಿ, ತೆರೆಗೆ ಪಾವತಿಸುತ್ತಿದ್ದರೆ ಅಂತಹವರು ಈ ಯೋಜನೆಗೆ ಒಳಪಡುವಂತಿಲ್ಲ ಎಂದು. ಆದರೆ ಹಾಗೆ ಹೇಳದೇ ಬರೀ ನಮ್ಮ ನಾಡಿನ ತಾಯಿಂದರಿಗೆ ಮನೆಯ ಯಜಮಾನಿಗೆ ಮಾಸಿಕ 2000 ರೂ. ಅಂತ ಹೇಳಿ ಈಗ ಅದು ಕೂಡಾ ಮೋಸದ ಯೋಜನೆಯಾಗಿದೆ.
ಮನೆಯ ಯಜಮಾನಿ ಜಿಎಸ್‌ಟಿ, ತೆರಿಗೆ ಪಾವತಿಸುತ್ತಿಲ್ಲವದರೂ ಅವರ ಮನೆಯ ಯಾವುದೇ ಸದಸ್ಯರು ಜಿಎಸ್‌ಟಿ, ತೆರಿಗೆ ಪಾವತಿಸುತ್ತಿದ್ದರೇ ಅವರುಗಳಿಗೆ ಗೃಹಲಕ್ಷಿö್ಮÃ ಅನ್ವಯಾಗುವುದಿಲ್ಲ ಕರಾರು ಹಾಕಿದ್ದು ನೋಡಿದರೆ ಪ್ರಸ್ತುತ ಮಾರುಕಟ್ಟೆಯಲ್ಲಾಗಿ, ಮನೆಯಲ್ಲಾಗಿ ಸಣ್ಣ ವ್ಯಾಪಾರದ ಮಳಿಗೆ ಹಾಕುವುದಾದರೇ ಅವರುಗಳಿಗೆ ಕಡ್ಡಾಯವಾಗಿ ಮಹಾನಗರಪಾಲಿಕೆ, ಪುರಸಭೆ, ಪಟ್ಟಣಪಂಚಾಯಿತಿ ಅಥವಾ ಗ್ರಾಮ ಪಂಚಾಯತಿಗಳೊಪಟ್ಟರೆ ವ್ಯಾಪರ ಪರವಾನಿಗೆ ಪಡೆಯಬೇಕು, ವ್ಯಾಪಾರ ಪರವಾನಿಗೆ ಯೊಂದಿಗೆ ಬ್ಯಾಂಕ್‌ಗಳಲ್ಲಿ ಸಣ್ಣ ಪ್ರಮಾಣ ಸಾಲ ಪಡೆಯಬೇಕಾದರೂ ಜಿಎಸ್‌ಟಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಇದರಿಂದ ಸರಕಾರದ ದ್ವಂದ ನಿಲುವಿನಿಂದಾಗಿ ಹೆಚ್ಚಿನ ಫಲಾನುಭವಿಗಳಿಗೆ ಈ ಯೋಜನೆಯಿಂದ ವಂಚಿತರನ್ನಾಸುವ ಸರಕಾರದ ಸ್ಪಷ್ಟ ಹುನ್ನಾರವಾಗಿದೆ.
ಬಸ್ ಪ್ರಯಾಣ ದರ, ಹಾಲಿನ ದರ, ವಿದ್ಯುತ್ ದರ, ಕಟ್ಟಡ ಪರವಾನಿಗೆ ತೆರಿಗೆ ದರ ಏರಿಕೆ ಮಾಡಿದ್ದರಿಂದ ಹೆಚ್ಚಿನ ಹಾನಿ ಅನುಭವಿಸುವುದು ಮಧ್ಯಮ ವರ್ಗದ ಜನರು ಮಾತ್ರ.
ಅಲ್ಲದೇ ಮದ್ಯದ ಬೆಲೆ ನೂರಕ್ಕೆ ಶೇ. 20ರಷ್ಟು ಏರಿಕೆ ಮಾಡಿದ್ದು, ರಾಜ್ಯದಲ್ಲಿ ಕುಡಕರ ಸಂಖ್ಯೆ ಕಡೆಮೆಯಾಗಲೀ ಎಂಬ ಸದುದ್ದೇಶದಿಂದಲ್ಲ. ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ನಿಧಿ ಸೇರಿಸುವ ಏಕೈಕ ಉದ್ದೇಶವಾಗಿದೆ.
ಮನೆ ತೆರಿಗೆ ದರ ಶೇ. 15 ರಿಂದ 20ಕ್ಕೆ ಏರಿಕೆಯಾಗಿದು, ಬಹಳಷ್ಟು ಮಧ್ಯಮ ವರ್ಗದ ಜನ ಸಾಲ, ಸುಲ ಮಾಡಿ, ಪುಟ್ಟ ಮನೆ ಕಟ್ಟಿ ನೆಮ್ಮದಿಯ ಜೀವನ ಸಾಗಿಸುವುದಕ್ಕೆ ಸರಕಾರ ತೆರಿಗೆ ಏರಿಕೆ ಮಾಡಿ, ಪೆಟ್ಟು ನೀಡಿದೆ.

LEAVE A REPLY

Please enter your comment!
Please enter your name here