ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ಮಾಡಲು ಜಿಲ್ಲಾಧಿಕಾರಿಗಳ ಸೂಚನೆ

0
899

ಕಲಬುರಗಿ,ಆ.2:ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ 30,05,090 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 7,74,644 ಜನರ ಆಧಾರ್ ಗೆ ಮೋಬೈಲ್ ಲಿಂಕ್ ಮಾಡಿಲ್ಲ. ಸರ್ಕಾರದ ಹಲವಾರು ಯೋಜನೆಗಳು ಆಧಾರ್, ಡಿ.ಬಿ.ಟಿ ಮೂಲಕ ಜಾರಿಗೆ ತರಲಾಗುತ್ತಿರುವುದರಿಂದ ಆಧಾರ್ ಗೆ ಮೋಬೈಲ್ ಲಿಂಕ್ ಅನಿವಾರ್ಯವಾಗಿದೆ. ಆಧಾರ್ ಗೆ ಇದೂವರೆಗೆ ಮೋಬೈಲ್ ಲಿಂಕ್ ಮಾಡಿಸದವರು ಕೂಡಲೇ ಲಿಂಕ್ ಮಾಡಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಮಂಗಳವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಆಧಾರ್ ನೋಂದಣಿ ಮೇಲುಸ್ತುವಾರಿ ಸಮಿತಿ ಸಭೆ ನಡೆಸಿ ಅವರು ಮಾತನಾಡಿದ್ದರು.
ಇದಲ್ಲದೆ 5 ವರ್ಷ ಮತ್ತು ಮೇಲ್ಪಟ್ಟ 1,66,849 ಜನರು ಮತ್ತು 15 ವರ್ಷ ಮತ್ತು ಮೇಲ್ಪಟ್ಟ 6,03,331 ಜನರ ಆಧಾರ್ ಕಾರ್ಡ್ ಗೆ ಬಯೋಮೆಟ್ರಿಕ್ ಅಪ್ಲೋಡ್ ಆಗಿಲ್ಲ. ಕೂಡಲೆ ಇವರೆಲ್ಲರು ಬಯೋಮೆಟ್ರಿಕ್ ನೀಡಬೇಕು. ಅದೇ ರೀತಿ 9,80,037 ಜನರು ಗುರುತಿನ ಚೀಟಿ ಮತ್ತು ವಾಸಸ್ಥಳ ಕುರಿತು ಡಾಕೂಮೆಂಟ್ ಅಪಲೋಡ್ ಮಾಡಬೇಕಿದೆ ಎಂದರು.
199 ಆಧಾರ್ ನೋಂದಣಿ ಕೇಂದ್ರಗಳು:
ಕಲಬುರಗಿ-40, ಅಫಜಲಪೂರ-38, ಆಳಂದ-29, ಚಿಂಚೋಳಿ-19, ಚಿತ್ತಾಪೂರ-29, ಜೇವರ್ಗಿ-18 ಹಾಗೂ ಸೇಡಂ-26 ಸೇರಿದಂತೆ ಜಿಲ್ಲೆಯಾದ್ಯಂತ 199 ಆಧಾರ್ ನೋಂದಣಿ ಕೆಂದ್ರಗಳನ್ನು ತೆರಯಲಾಗಿದೆ. ಬಿ.ಎಸ್.ಎನ್.ಎಲ್, ಬ್ಯಾಂಕ್, ಅಂಚೆ ಕಚೇರಿ, ನಾಡ ತಹಶೀಲ ಕಚೇರಿ, ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಗಳು ಆಧಾರ್ ನೋಂದಣಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸಮೀಪದ ಕೇಂದ್ರಕ್ಕೆ ಹೋಗಿ ಡಾಕೂಮೆಂಟ್, ಬಯೋಮೆಟ್ರಿಕ್ ಅಪಲೋಡ್ ಮತ್ತು ಮೋಬೈಲ್ ಲಿಂಕ್ ಮಾಡಿಸಬಹುದಾಗಿದೆ ಎಂದು ಡಿ.ಸಿ. ತಿಳಿಸಿದರು.

LEAVE A REPLY

Please enter your comment!
Please enter your name here