ಕಲಬುರಗಿಯಲ್ಲಿ ಮೋದಿಜೀಯವರ ಧಾಖಲೆಯ ರೋಡ ಶೋ

0
768

ಕಲಬುರಗಿ, ಮೇ. 02: ತೊಗರಿ ನಾಡು ಕಲಬುರಗಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರಮೋದಿ ಅವರು ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಭಾರೀ ರಣತಂತ್ರ ರೂಪಸಿದ್ದಾರೆ.
ನಗರದ ಕೆಎಂಎಫ್ ಹಾಲಿನ ಡೇರಿಯಿಂದ ಸಂಜೆ 6 ಗಂಟೆಗೆ ಆರಂಭವಾದ ಭವ್ಯ ರೋಡ ಶೋ ನಗರೇಶ್ವರ ಶಾಲೆ, ಗಂಜ ಪ್ರದೇಶ, ಹುಮನಾಬಾದ ಬೇಸ್, ಕಿರಾಣಾ ಬಜಾರ, ಭಾಂಡೆ ಬಜಾರ, ಸೂಪರ್ ಮಾರ್ಕೇಟ್, ಜಗತ್ ವೃತ್ತ, ಸ್ಟೇಷನ್ ರಸ್ತೆ ಮಾರ್ಗವಾಗಿ ಲಕ್ಷಾಂತರ ಬಿಜೆಪಿ ಕಾರ್ಯಕರ್ತರ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಎಲ್ಲರ ಕಡೆ ಕೈಬಿಸುತ್ತ ಮುಗುಳನಗೆ ತೋರುತ್ತ ಮೋದಿಜೀಯವರ ಭರ್ಜರಿ ರ‍್ಯಾಲಿಗೆ ಕಲಬುರಗಿ ಜನ ಫೀದಾ ಆದರು.

ಶ್ರೀ ಶರಣಬಸವೇಶ್ವರ ಜಾತ್ರೆಗೆ ಎಷ್ಟು ಜನ ಸೇರುತ್ತಿದ್ದರೂ ಅಂತಹದೇ ರೀತಿಯಲ್ಲಿ ಡಬಲ್, ಟ್ರೀಬಲ್ ಜನ ಮೋದಿ ಮೋಡಿಗೆ ಮರುಳಾಗಿ ರೋಡ ಶೋ ನೋಡಲು ಸೇರಿದ್ದರು.
ಮಹಿಳೆಯರು, ಮಕ್ಕಳು ಅಲ್ಲದೇ ಹಿರಿಯ ನಾಗರಿಕರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ಮೋದಿಜೀಯವರನ್ನು ನೋಡಲು ರಸ್ತೆಯ ಅಕ್ಕ ಪಕ್ಕ ನಿಂತು ಜೈ ಮೋದಿ ಜೀ ಎಂದು ಕೂಗುತ್ತಿದ್ದರು.

ಇಡೀ ಸುಮಾರು 5 ಕೀಮೀ. ರಸ್ತೆಯ ಉದ್ದಕ್ಕೂ ಹೂವಿನ ಹಾಸಿಗೆಯೇ ಹಾಸಿದಂತೆ ಅಭಿಮಾನಿಗಳು ಅಭಿಮಾನದಿಂದ ಮೋದಿಜಿಯವರಿಗೆ ಹೂಗಳ ಸ್ವಾಗತ ಕೋರುತ್ತಿದ್ದ ದೃಶ್ಯ ಎಲ್ಲಡೆ ಕಾಣಿಸುತ್ತಿತ್ತು.
ಖರ್ಗೆಯವರ ತವರು ಜಿಲ್ಲೆಯಲ್ಲಿ ಮೋದಿಜೀಯವರ ಈ ರೋಡ ಶೋದಿಂದ ಬಿಜೆಪಿ ಅಭ್ಯರ್ಥಿಗಳಲ್ಲಿ ಆತ್ಮಸ್ಥೆರ್ಯವಷ್ಠೆ ಅಲ್ಲ ಕಾಂಗ್ರೆಸ್ ಭದ್ರಕೋಟೆ ಭೇದಿಸಲು ಮೋದಿಜಿಯವರ ತಂತ್ರ ಹಣೆದಿದ್ದು ಈ ರೋಡ ಶೋ ದಿಂದ.
ಪ್ರಧಾನಿಗಳೊAದಿಗೆ ಈ ರೋಡಶೋದಲ್ಲಿ ಕಲಬುರಗಿ ಸಂಸದ ಡಾ. ಉಮೇಶ ಜಾಧವ, ಬೀದರ ಸಂಸದ ಭಗವಂತ ಖೂಬಾ ಜೊತೆಗಿದ್ದರು.
ಈ ರೋಡ ಶೋ ಸಮಯದಲ್ಲಿ ಬಂಜಾರಾ ಸಮುದಾಯ ಹೆಣ್ಣು ಮಕ್ಕಳು ತಲೆಯ ಮಲೆ ಕಳಸಗಳನಿಟ್ಟು ಪ್ರಧಾನಿಗಳಿಗೆ ಭವ್ಯ ಸ್ವಾಗತ ಕೋರುತ್ತ ನೃತ್ತ ಪ್ರದರ್ಶಿಸಿದರು. ಜೈನ ಸಮುಯಾದಯ ಹೆಣ್ಣು ಮಕ್ಕಳು ಡೊಳ್ಳು ಬಾರಿಸುತ್ತ ಜೈ ಮೋದಿ, ಹರ ಘರ ಮೋದಿ ಎಂಬ ಘೋಷಣೆಗಳೊಂದಿಗೆ ಕುಣಿಯುತ್ತ ತಮ್ಮ ಸಂತಸವ ವ್ಯಕ್ತಪಡಿಸುವ ಮೂಲಕ ಮೋದಿಜೀಯವರಿಗೆ ಕಲಬುರಗಿ ಭವ್ಯ ಸ್ವಾಗತ ಕೋರಿದರು.
ದಾಖಲೆಯ ರೋಡ ಶೋ:
ಇಡೀ ರಾಜ್ಯದಲ್ಲಿಯೆ ಮಂಗಳವಾರ ನಡೆದ ಕಲಬುರಗಿಯಲ್ಲಿನ ರೋಡ ಶೋ ದಾಖಲೆಯ ರೋಡ ಶೋ ಆಗಿದೆ. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಈ ರೋಡ ಶೋಗೆ ಸಾಕ್ಷಿಯಾದರು.

LEAVE A REPLY

Please enter your comment!
Please enter your name here