ಹೃದಯಾಘಾತದಿಂದ ಪೋಲಿಸ್ ಪೇದೆ ರಮೇಶ ವಸ್ತದ ನಿಧನ

0
2146

ಕಲಬುರಗಿ, ಮಾ. 15: ನಗರದ ಚೌಕ್ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಪೇದೆಯಾಗಿ ಸೇವೆಸಲ್ಲಿಸುತ್ತಿದ್ದ ರಮೇಶ ತಂದೆ ಬಂಡಯ್ಯ ವಸ್ತçದ (38) ಇಂದು ಬೆಳಗಿನ ಜಾವ ನಿಧನ ಹೊಂದಿದ್ದಾರೆ.
ಕಳೆದ 6 ತಿಂಗಳಿAದ ಚೌಕ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಇಂದು ಬುಧವಾರ ಬೆಳಿಗ್ಗೆ 7.30ಕ್ಕೆ ಮನೆಯಲ್ಲಿ ಹೃದಯಾಪಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ದಿವಂಗತರು ಇಬ್ಬರು ಗಂಡು ಮಕ್ಕಳು, ಮಡದಿ, ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಗರದ ನೆಹರು ಗಂಜ ಪ್ರದೇಶದಲ್ಲಿರುವ ರುದ್ರಭೂಮಿಯಲ್ಲಿ ಸಂಜೆ 4.00 ಗಂಟೆಗೆ ನೆರವೇರಿಸಲಾಗುವುದು ಎಂದು ಅವರ ಕುಟುಂಬ ಮೂಲಗಳಿಂದ ತಿಳಿದುಬಂದಿದೆ.
ಮೃತರು ನಗರದ ಮಕ್ತಂಪುರದ ನಿವಾಸಿಯಾಗಿದ್ದು, ಅವರು ಪ್ರಸ್ತುತ ಆದರ್ಶ ನಗರದ ಘಾಣದೇವತೆ ಗುಡಿ ಹತ್ತಿರದ ಮನೆಯಲ್ಲಿ ವಾಸವಾಗಿದ್ದರು.

LEAVE A REPLY

Please enter your comment!
Please enter your name here