ಮಾನ್ಯಖೇಟ್ ಮರು ನಾಮಕರಣ ಸಾಧ್ಯತೆ: ತೇಲ್ಕೂರ್

0
804

ಕಲಬುರಗಿ, ಜ. 11: ಮಳಖೇಡ ರಾಷ್ಟçಕೂಟರ ರಾಜಧಾನಿಯಾಗಿದ್ದು, ಈ ಸಂಬAಧ ಮೊದಲಿನ ಹಾಗೆ ಮಾನ್ಯಖೇಟ ಎಂದು ಮರುನಾಮಕರಣ ಮಾಡುವ ಸಂಬAಧ ಈಗಾಗಲೇ ರಾಜ್ಯ ಸರ್ಕಾರದಲ್ಲಿ ಪ್ರಸ್ತಾವನೆ ಇದೆ. ಅಂದಿನ ಸಮಾವೇಶದಲ್ಲಿ ಮಳಖೇಡಕ್ಕೆ ಮಾನ್ಯಖೇಟ ಎಂದು ಮರುನಾಮಕರಣ ಮಾಡುವ ಸಾಧ್ಯತೆಯೂ ಇದೆ ಎಂದು ತೆಲ್ಕೂರ್ ಅವರು ಹೇಳಿದ್ದಾರೆ.
ಅವರು ಬುಧವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಮಳಖೇಡದ ಕೋಟೆಯನ್ನು ಸಹ ನವೀಕರಿಸುವ ಕಾರ್ಯಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರವು ಹತ್ತು ಕೋಟಿ ರೂ.ಗಳ ಅನುದಾನ ಒದಗಿಸಿದೆ. ಅಲ್ಲಿನ ಒತ್ತುವರಿದಾರರಿಗೆ ರ‍್ಯಾಯ ವ್ಯವಸ್ಥೆ ಕಲ್ಪಿಸುವ ಮೂಲಕ ಕೋಟೆಯಲ್ಲಿನ ಒತ್ತುವರಿ ತೆರವುಗೊಳಿಸಲಾಗುವುದು. ಅಲ್ಲದೇ ನವೀಕರಿಸಲ್ಪಟ್ಟ ಕೋಟೆಯೊಳಗೆ ಮಳಖೇಡದ ಉತ್ಸವ ಹಮ್ಮಿಕೊಳ್ಳಲಾಗುವುದು. ಈ ಸಂಬAಧ ಕನ್ನಡಪರ ಸಂಘಟನೆಗಳ ಮುಖಂಡರದೊAದಿಗೆ ಸಮಾಲೋಚಿಸಿ ಅರ್ಥಪೂರ್ಣವಾಗಿ ಉತ್ಸವ ಆಚರಿಸಲಾಗುತ್ತದೆ ಎಂಧು ಅವರು ಹೇಳಿದರು.
ಹಾಗೆ ನೋಡಿದರೆ ಆರಂಭದಲ್ಲಿ ಒಂದು ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲಿಲ್ಲ. ನಂತರ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೋವಿಡ್ ಸೋಂಕಿನಿAದಾಗಿ ಎರಡು ವರ್ಷಗಳವರೆಗೆ ಮಳಖೇಡ ಉತ್ಸವವನ್ನು ಆಚರಿಸಲು ಆಗಲಿಲ್ಲ. ಈಗ ಕೋವಿಡ್ ನಿಯಂತ್ರಣವಾಗಿದ್ದರಿAದ ಈ ಬಾರಿ ಅದ್ದೂರಿಯಿಂದ ಮಳಖೇಡ ಉತ್ಸವ ಆಚರಿಸಲಾಗುವುದು ಎಂದು ಅವರು ತಿಳಿಸಿದರು.
ಹೊಸ ಸೇತುವೆ ನೆನೆಗುದಿಗೆ: ಮಳಖೇಡದ ಬಳಿ ಇರುವ ಕಾಗಿಣಾ ನದಿಗೆ ಅಡ್ಡಲಾಗಿರುವ ಹೊಸ ಸೇತುವೆಯ ನಿರ್ಮಾಣ ಕಾರ್ಯವು ಕಳೆದ ಏಳು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಗುತ್ತಿಗೆದಾರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೂಡಲೇ ಆ ಕುರಿತು ಕ್ರಮ ಕೈಗೊಂಡು ತ್ವರಿತವಾಗಿ ಸೇತುವೆ ಕಾಮಗಾರಿ ಪೂರ್ತಿಗೊಳಿಸುವುದಾಗಿ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಶಾಸಕಸ ಬಸವರಾಜ್ ಮತ್ತಿಮೂಡ್, ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here