ಕಲಬುರಗಿ,ಜ.7:ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಭಾಗವಾಗಿ ಕಳೆದ ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 21,71,211 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯಚರಣೆ ದಿ.09-11-2022 ರಿಂದ ದಿ.08-12-2022ರ ವರೆಗೆ ಜಿಲ್ಲೆಯಾದ್ಯಂತ ನಡೆಸಿ ಈ ಅವಧಿಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ಕೈಬಿಡುವ ಹಾಗೂ ವರ್ಗಾವಣೆ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಿ ಕಳೆದ ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ.
ಅಂತಿಮ ಮತದಾರರ ಪಟ್ಟಿ ಪ್ರಕಟಣೆಯಂತೆ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ 10,98,549 ಪುರುಷರು ಮತ್ತು 10,72,662 ಮಹಿಳೆಯರು ಸೇರಿದಂತೆ 21,71,211 ಮತದಾರರಿದ್ದಾರೆ. ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು 3,00,493 ಮತ್ತು ಚಿಂಚೋಳಿಯಲ್ಲಿ ಕಡಿಮೆ 1,99,154 ಜನ ಮತದಾರರಿದ್ದಾರೆ.
ಇನ್ನು ವಿಧಾನಸಭಾ ಕ್ಷೇತ್ರವಾರು ನೋಡಿದಾಗ ಅಫಜಲಪೂರ ಕ್ಷೇತ್ರದಲ್ಲಿ 1,15,002 ಪುರುಷರು ಮತ್ತು 1,08,801 ಮಹಿಳೆಯರು ಸೇರಿ 2,23,803, ಜೇವರ್ಗಿ ಕ್ಷೇತ್ರದಲ್ಲಿ 1,19,248 ಪುರುಷರು ಮತ್ತು 1,15,790 ಮಹಿಳೆಯರು ಸೇರಿ 2,35,038, ಚಿತ್ತಾಪುರ ಕ್ಷೇತ್ರದಲ್ಲಿ 1,15,798 ಪುರುಷರು ಮತ್ತು 1,15,388 ಮಹಿಳೆಯರು ಸೇರಿ 2,31,186, ಸೇಡಂ ಕ್ಷೇತ್ರದಲ್ಲಿ 1,08,006 ಪುರುಷರು ಮತ್ತು 1,10,692 ಮಹಿಳೆಯರು ಸೇರಿ 2,18,698, ಚಿಂಚೋಳಿ ಕ್ಷೇತ್ರದಲ್ಲಿ 1,01,639 ಪುರುಷರು ಮತ್ತು 97,515 ಮಹಿಳೆಯರು ಸೇರಿ 1,99,154, ಗುಲಬರ್ಗಾ ಗ್ರಾಮೀಣ ಕ್ಷೇತ್ರದಲ್ಲಿ 1,30,508 ಪುರುಷರು ಮತ್ತು 1,23,347 ಮಹಿಳೆಯರು ಸೇರಿ 2,53,855, ಗುಲಬರ್ಗಾ ದಕ್ಷಿಣ ಕ್ಷೇತ್ರದಲ್ಲಿ 1,35,393 ಪುರುಷರು ಮತ್ತು 1,37,427 ಮಹಿಳೆಯರು ಸೇರಿ 2,72,820, ಗುಲಬರ್ಗಾ ಉತ್ತರ ಕ್ಷೇತ್ರದಲ್ಲಿ 1,49,840 ಪುರುಷರು ಮತ್ತು 1,50,653 ಮಹಿಳೆಯರು ಸೇರಿ 3,00,493 ಹಾಗೂ ಆಳಂದ ಕ್ಷೇತ್ರದಲ್ಲಿ 1,23,115 ಪುರುಷರು ಮತ್ತು 1,13,049 ಮಹಿಳೆಯರು ಸೇರಿ 236164 ಮತದಾರರಿದ್ದಾರೆ.
18-19 ವಯಸ್ಸಿನ 25,697 ಮತದಾರರು:
ಅಂತಿಮ ಮತದಾರರ ಪಟ್ಟಿಯಂತೆ 15,316 ಪುರುಷರು ಮತ್ತು 10,381 ಮಹಿಳೆಯರು ಸೇರಿದಂತೆ 18-19 ವಯಸ್ಸಿನ 25,697 ಯುವ ಮತದಾರರಿದ್ದಾರೆ. ಕರಡು ಮತಪಟ್ಟಿಯಲ್ಲಿ ಈ ಸಂಖ್ಯೆ 9,203 ಇತ್ತು, ಪರಿಷ್ಕರಣೆಯಲ್ಲಿ ಹೊಸದಾಗಿ 16,494 ಯುವ ಮತದಾರರ ತಮ್ಮ ಹೆಸರು ನೊಂದಾಯಿಸಿಕೊAಡಿದ್ದಾರೆ.
50,644 ಹೆಸರು ಡಿಲಿಟ್:
ಮತದಾರರ ಪರಿಷ್ಕರಣೆಯ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ನಿಧನ ಪ್ರಕರಣಗಳಲ್ಲಿ 33,187, ವರ್ಗಾವಣೆಯಿಂದ 16,080 ಹಾಗೂ ರಿಪೀಟ್ ಎಂಟ್ರಿ ಕಾರಣದಿಂದ 1,377 ಸೇರಿದಂತೆ ಒಟ್ಟಾರೆ 50,644 ಮತದಾರರ ಹೆಸರನ್ನು ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆ. ಕರಡು ಮತದಾರರ ಪಟ್ಟಿ ಪ್ರಕಟ (ನವೆಂಬರ್-9) ಮುನ್ನ ಸಿಮಿಲರ್ ಪೋಟೋ ಎಂಟ್ರಿ ಕಾರಣದಿಂದ ಜಿಲ್ಲೆಯಲ್ಲಿ 91,003 ಮತದಾರರ ಹೆಸರನ್ನು ಮತ ಪಟ್ಟಿಯಿಂದ ಕೈಬಿಡಲಾಗಿತ್ತು.
Home Featured Kalaburagi ಅಂತಿಮ ಮತದಾರರ ಪಟ್ಟಿ ಪ್ರಕಟ:ಜಿಲ್ಲೆಯಲ್ಲಿ 21.71 ಲಕ್ಷ ಮತದಾರರುಉತ್ತರದಲ್ಲಿ ಅತೀ ಹೆಚ್ಚು ಮತದಾರರು