ಪತ್ರಕರ್ತ ಸುರೇಶ್ ಹಳ್ಳಿಕೇಡ್ ಇನ್ನಿಲ್ಲ

0
1200

ಕಲಬುರ್ಗಿ, ಸೆ.29- ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೇಗವಾಹಿನಿ ಕನ್ನಡ ದಿನಪತ್ರಿಕೆಯ ಸಂಪಾದಕ ಸುರೇಶ್ ಹಳ್ಳಿಖೇಡ್ ಅವರು ಗುರುವಾರ ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು, ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಗರದಲ್ಲಿ ಶುಕ್ರವಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ. ಸುರೇಶ್ ಹಳ್ಳಿಖೇಡ್ ಅವರು ಮೂಲತ: ಪತ್ರಿಕಾ ಛಾಯಾಗ್ರಾಹಕರು. ಪ್ರಸಿದ್ಧ ಕ್ರಾಂತಿ ಕನ್ನಡ ದಿನಪತ್ರಿಕೆಯಲ್ಲಿ ಛಾಯಾಗ್ರಾಹಕರಾಗಿ ಚಿರಪರಿಚಿತರಾಗಿ ಬೆಳೆದರು. ಮುಂದೆ ಯಾದಗಿರಿಯಲ್ಲಿ ವೇಗವಾಹಿನಿ ಪತ್ರಿಕೆಯನ್ನು ಆರಂಭಿಸಿದ್ದರು.
ಕಳೆದ 2010ರಲ್ಲಿ ನಗರದ ಶ್ರೀ ಶರಣಬಸವೇಶ್ವರರ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾದಾಗ ಜೀವದ ಹಂಗು ತೊರೆದು ಮೊಸಳೆ ಭಾವಚಿತ್ರವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಹಸ ಮೆರೆದಿದ್ದರು. ಸುರೇಶ್ ಹಳ್ಳಿಖೇಡ್ ಅವರ ನಿಧನಕ್ಕೆ ಹಲವಾರು ಪತ್ರಕರ್ತರು ಹಾಗೂ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here