ಕಲಬುರಗಿ, ಸೆ. 26: ಕಲಬುರಗಿ ಗ್ರಾಮೀಣ ಠಾಣೆಯ ಸಿಪಿಐ ಶ್ರೀಮಂತ ಇಲ್ಲಾಳ್ ಅವರು ಗಾಂಜಾಕೋರರ ಹಲ್ಲೆಯಿಂದ ಇಲ್ಲಿನ ಯುನೈಟೆಡ್ ಆಸ್ಪತ್ರೆಯಿಂದ ಐಸಿಯೂ ಅಂಬ್ಯೂಲೆನ್ಸ್ನಲ್ಲಿ ಗ್ರೀನ್ ಕಾರೀಡಾರ್ ನಲ್ಲಿ ಪೋಲೀಸ್ ಎಸ್ಕಾರ್ಟ್ ನೊಂದಿಗೆ ಏರ್‌ಪೋರ್ಟ್ಗೆ ವಿಶೇಷ ಏರ್ ಅಂಬ್ಯೂಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಸೋಮವಾರ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಿಂದ ಕಲಬುರಗಿ ಏರ್‌ಪೋರ್ಟಗೆ ಝಿರೋ ಟ್ರಾಫಿಕ್ ನಲ್ಲಿ ಕರೆದ್ಯೋಯ್ಯಲಾಯಿತು. ಸೋಮವಾರ ಮಧ್ಯಾಹ್ನ 1 ಗಂಟೆ 30 ನಿಮಿಷಕ್ಕೆ ಏರ್ ಅಂಬ್ಯೂಲೆನ್ಸ್ ತಲುಪಿತು.
ಕಲಬುರಗಿಯಿಂದ 15 ಕಿಲೋ ಮೀಟರ್ ದೂರದ ಶ್ರೀನಿವಾಸ್ ಸರಡಗಿ ಬಳಿ ಇರುವ ಏರ್ ಪೋರ್ಟ ಝಿರೋ ಟ್ರಾಫಿಕ್ ಮೂಲಕ ಅಂಬ್ಯೂಲರನ್ಸನಲ್ಲಿ ಕರೆದೊಯ್ದ ಪೊಲೀಸರು ಏರ್ ಪೋರ್ಟನಲ್ಲಿ ರೆಡಿಯಾಗಿ ನಿಂತಿರುವ ಏರ್ ಆಂಬ್ಯೂಲೆನ್ಸ ಬೆಂಗಳೂರಿಗೆ ಏರ್ ಲಿಫ್ಟ ಮಾಡಿ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುತ್ತಿದೆ.
ಕಲಬುರಗಿಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ಶ್ರೀಮಂತ ಇಲ್ಲಾಳ ಅವರ ಚಿಕಿತ್ಸೆಗಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ
ಮೂವರು ವೈದ್ಯರು ಹಾಗೂ ಶ್ರೀಮಂತ ಇಲ್ಲಾಳ ಅವರ ಪತ್ನಿ, ಪುತ್ರ ಸಹ ಏರ್ ಆಂಬ್ಯೂಲೆನ್ಸನಲ್ಲಿ ಬೆಂಗಳೂರಿಗೆ ಸೇರಿಸಲಾಗಿತ್ತು, ಏರ್ ಲಿಫ್ಟ್ ಸೇರಿ ಇಡೀ ಚಿಕಿತ್ಸಾ ವೆಚ್ಚವನ್ನು ಪೋಲಿಸ್ ಇಲಾಖೆ ಭರಿಸಲಿದೆ.
ಗಾಂಜಾ ಮಾಫಿಯಾ ಮಟ್ಟ ಹಾಕಲು ಹೋದ ಸಂದರ್ಭದಲ್ಲಿ ಶ್ರೀಮಂತ ಇಲ್ಲಾಳÀ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು.
ಮಹಾರಾಷ್ಟ್ರದ ತರಲೆವಾಡಿ ಗ್ರಾಮದ ಬಳಿಯ ಗಾಂಜಾ ಹೊಲದಲ್ಲಿ ಗಾಂಜಾ ದಂಧೆಕೋರರಿAದ ನಡೆದ ಮಾರಣಾಂತಿಕ ಹಲ್ಲೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಿಪಿಐ ಶ್ರೀಮಂತ ಇಲ್ಲಾಳ ಅವರು ಬಹುತೇಕವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.