ನಗರ ಸೌಂದರ್ಯೀಕರಣದ ಹೆಸರಿನಲ್ಲಿ ಮುದ್ರಣಾಲಯಗಳ ಮೇಲೆ ಪಾಲಿಕೆ ಕೆಂಗಣ್ಣು

0
669

ಕಲಬುರಗಿ, ಸೆ. 23: ಕರ್ನಾಟಕ ತೆರೆದ ಸ್ಥಳಗಳು ವಿಕಾರಗೊಳಿಸುವಿಕೆ ತಡೆಗಟ್ಟುವಿಕೆ ಕಾಯಿದೆ 1981 (ಕರ್ನಾಟಕ ಕಾಯಿದೆ 35 ರ 1982) ಅನ್ವಯ ನಗರದ ಸೌಂದರ್ಯೀಕರಣಕ್ಕಾಗಿ ಸರಕಾರಿ ಕಟ್ಟಡಗಳ ಗೋಡೆಯ ಮೇಲೆ ಹಾಗೂ ಇನ್ನಿತರ ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಸ್ಟೀಕರ್‌ಗಳನ್ನು ಅಂಟಿಸಬಾರದು, ಆದರೆ ಈ ಬಗ್ಗೆ ಮುಂಚಿತವಾಗಿ ನಗರದ ಎಲ್ಲ ಮುದ್ರಣಾಲಯಗಳಿಗೆ ಮಹಾನಗರಪಾಲಿಕೆ ನೋಟಿಸ್ ಜಾರಿ ಮಾಡಬೇಕು. ಆದ್ಯಾಗೂ ನೋಟಿಸ್ ಜಾರಿ ಮಾಡಿದರೂ ಕೂಡ ತಪ್ಪು ಮಾಡಿದರೆ ಅಂತಹ ಮುದ್ರಣಾಲಯದ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು.
ಅದು ಬಿಟ್ಟು ಯಾವುದೇ ನೋಟಿಸ್ ನೀಡದೇ ಪೋಸ್ಟರ್, ಸ್ಟೀಕರ್‌ಗಳನ್ನು ಮುದ್ರಿಸಬಾರದು ಎಂಬ ಮಹಾನಗರಪಾಲಿಕೆಯ ನೀತಿ ಹಾಸ್ಯಾಸ್ಟದವಾಗಿದೆ.
ಉದಾಹರಣೆಗೆ ನಗರದ ಸರಕಾರಿ ಕಛೇರಿಯ ಗೋಡೆಯ ಮೇಲೆ ಯಾವುದೋ ಒಂದು ಕಾರ್ಯಕ್ರಮದ ಭಿತ್ತಪತ್ರ ಅಂಟಿಸಿದ್ದ ಹಿನ್ನೆಲೆಯಲ್ಲಿ ಆ ಭಿತ್ರಪತ್ರ ಮುದ್ರಣ ಮಾಡಿದ ಮುದ್ರಣಾಲಯಕ್ಕೆ ಒಂದು ಸಾವಿರ ರೂ. ದಂಡ ಹಾಕಿದ್ದು ಎಷ್ಟು, ಸರಿ, ಮೊದಲನೇ ಬಾರಿಯಾದರೆ ಒಂದು ಸಾವಿರ, ಎರಡನೇ ಬಾರಿಯಾದರೆ 5000 ಸಾವಿರ ಮತ್ತು ಮೂರನೇ ಬಾರಿಯಾದರೆ 10 ಸಾವಿರ ವಿಧಿಸಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ನಮ್ಮ ಬ್ರಹತ್ ಮಹಾನಗರಪಾಲಿಕೆಯ ಆಯುಕ್ತರು ದಿನಾಂಕ 22ರಂದು ಪ್ರಕಟಣೆ ಹೊರಡಿಸಿದ್ದಾರೆ.
ಆದರೆ ಪೋಸ್ಟರ್ ಮೇಲೆ ಮುದ್ರಕರ ಹೆಸರು ಇದ್ದ ಮಾತ್ರಕ್ಕೆ ಅವರಿಗೆ ದಂಡ ಹಾಕುವುದಕ್ಕೆ ಮೊದಲು ಇದು ಆ ಮುದ್ರಣಾಲಯದಲ್ಲಿಯೇ ಮುದ್ರಣವಾಗಿದೆಯೇ? ಅಥವಾ ಅದಕ್ಕೆ ರಸೀದಿ ಕೋಡಲಾಗಿದೆ? ಅಲ್ಲದೇ ಆ ಭಿತ್ತಪತ್ರದ ಆಯೋಜಕರನ್ನು ವಿಚಾರಣೆಗೆ ಗುರಿಪಡಿಸಿ, ಮುಂದಿನ ಕ್ರಮತೆಗೆದುಕೊಳ್ಳುವುದು ಸೂಕ್ತ.
ಇಲ್ಲಿ ಆದ್ಯಾವುದೂ ನಡೆದಿಲ್ಲ, ತರಾತುರಿಯಲ್ಲಿ ಮುದ್ರಣಾಲಯಕ್ಕೆÀ ಪರಿಸರ ವಿಭಾಗದ ಇಂಜೀನಿಯರ್, ಜೆಇ ಮತ್ತು ಓರ್ವ ಪೋಲಿಸ್ ಪೇದೆಯೊಂದಿಗೆ ಭೇಟಿ ನೀಡಿ, ಸಾವಿರ ರೂ. ದಂಡವಿದ್ದು ಎಷ್ಟು ಸಮಂಜಸವಾಗಿದೆ.
ಮಹಾನಗರಪಾಲಿಕೆಯವರ ಕ್ರಮ ಸ್ವಾಗರ್ತಾವಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಎಲ್ಲ ಮುದ್ರಣಾಲಯಗಳಿಗೆ ಯಾವುದು ಬೇಕು, ಯಾವುದು ಬೇಡ ಎಂಬ ಒಂದು ಪಟ್ಟಿ ತಯಾರಿಸಿ, ವ್ಯಾಪಾರ ಲೈಸೆನ್ಸ್ ಪಡೆದಿದ್ದಾರೋ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಿ, ಅವರಿಗೆ ತಿಳುವಳಿಕೆ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಂಡರೆ ಉತ್ತಮವಾಗಿರುತ್ತದೆ.
ಇನ್ನು ರಸ್ತೆಗಳ ಮೇಲೆ ಕಸ ಎಸೆಯಬಾರದೆಂಬ ನಿಯಮ ಅಂತ್ಯAತ ಸ್ವಾಗರ್ತಾ ವಾಗಿದ್ದು, ಇದು ಇಲ್ಲಿ ಹಲವಡೆ ಗಾಳಿಗೆ ತೂರಿರುವುದಲ್ಲದೇ ಮಹಾನಗರಪಾಲಿಕೆಯ ಮೂರು-ನಾಲ್ಕು ಪೌರಕಾರ್ಮಿಕರು ರಸ್ತೆಯ ಮೇಲಿನ ಅದು ಅಂಗಡಿಗಳಲ್ಲಿ ವ್ಯಾಪಾರ ಮಾಡಿದ ಅನಧಿಕೃತ ಪ್ಲಾಸ್ಟಿಕ್‌ಗಳನ್ನು ಒಂದೆಡೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗೂಡಿಸುವ ಕೆಲಸ ಇಲ್ಲಿನ ಆಸಿರ್ಫ ಗಂಜ್‌ನ ಡಬ್ದಾ ಚಪ್ಪಲ ಅಂಗಡಿಗಳ ಮುಂದಿನ ರಸ್ತೆಯ ಕಥೆಯಾಗಿದೆ, ಇದು ಯಾಕೆ ಮಹಾನಗರಪಾಲಿಕೆಯ ನಿಷ್ಠಾವಂತ ಅಧಿಕಾರಿಗಳಿಗೆ ಕಾಣಿಸುತ್ತಿಲ್ಲ.
ಅಲ್ಲದೇ ನಗರದ ಹಲವಾರು ಬೇಕರಿ, ಟೀ ಪಾಯಿಂಟ್ ಸಣ್ಣ ಸಣ್ಣ ಹೊಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಅದರಲ್ಲೂ 40 ಮೇಗ್ರಾನ್‌ಗಿಂತ ಕಡಿಮೆಯಿರುವ ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್‌ಗಳನ್ನು ರಾಜಾರೋಷವಾಗಿ ನಡೆಯುತ್ತಿದೆ. ಇದು ಅಧಿಕಾರಿಗಳಿಗೆ ಗೊತಿಲ್ಲವೇ ಮೇಲಾಧಿಕಾರಿಗಳು ಹೇಳಿದ ಮೇಲೆಯೆ ಕೆಳಗಿನ ಅಧಿಕಾರಿಗಳು, ಸಿಬ್ಬಂದಿಗಳು ಫೀಲ್ಡಗೆ ಇಳಿದು ನಾವು ಎಷ್ಟು ನಿಷ್ಠೆಯಿಂದ ಕೆಲಸ ಮಾಡುತ್ತೇವೆ ಎಂದು ತೋರಿಸುತ್ತಾರೆ.
ಏನೆ ಆದರೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪ್ಲಾಸ್ಟಿಕ್ ಬಳಕೆ, ಕಸ ಎಲ್ಲಿಂದರಲ್ಲಿ ಎಸೆಯದೇ ಪ್ರತಿ ಅಂಗಡಿಗಳ ಮುಂದೆ ಒಂದು ಡಸ್ಟ್ಬಿನ್ ಇಟ್ಟು ಶುಚಿತ್ವ ಕಾಪಾಡುವ ಜೊತೆಗೆ ನಮ್ಮ ಆರೋಗ್ಯ ನಾವು ಕಾಪಾಡಿಕೊಂಡAತಾಗುತ್ತದೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಕೆಲಸ ಮಾಡಲೀ, ಅಲ್ಲದೇ ವ್ಯಾಪಾರಕ್ಕಾಗಿ ಮಹಾನಗರಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಕೊಡಲು ಪ್ರಮುಖ ಮಾರುಕಟ್ಟೆಯ ಪ್ರದೇಶಗಳಲ್ಲಿ ಒಂದೊAದು ದಿನ ಒಂದು ಏರಿಯಾದಲ್ಲಿ ಶಿಬಿರಗಳನ್ನು ಏರ್ಪಡಿಸಿ, ವ್ಯಾಪಾರಸ್ಥರಿಗೆ ಸರಳವಾಗಿ ವ್ಯಾಪಾರಕರಣ ಲೈಸೆನ್ಸ್ ದೊರೆಯುವಂತೆ ಮಾಡುವ ಮೂಲಕ ಮಹಾನಗರಪಾಲಿಕೆಗೂ ಕರ ಸಂಗ್ರಹ ಹೆಚ್ಚುವದಲ್ಲದೇ ಇನ್ನಷ್ಟು ಹೆಚ್ಚಿನ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಿದಂತಾಗುತ್ತದೆ.

LEAVE A REPLY

Please enter your comment!
Please enter your name here