ಕಲಬುರ್ಗಿ, ಸೆ. 21: ಸಚಿವರೊಬ್ಬರ ಅಕ್ರಮಕ್ಕೆ ಸಂಬAಧಿಸಿದAತೆ ನಾಳೆ ಸದನದಲ್ಲಿ ದಾಖಲೆ ಬಿಡುಗಡೆ ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಅವರಿಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಹಿಟ್ ಅಂಡ್ ರನ್ ಪ್ರಶ್ನೆಗೆ ಇಲ್ಲ. ಯಾವತ್ತು ಗಾಳಿಯಲ್ಲಿ ಗುಂಡು ಹೊಡೆಯುವುದು ನನ್ನ ಜಾಯಮಾನ ಅಲ್ಲ, ದಾಖಲೆ ಇಲ್ಲದೇ ಇಲ್ಲದೇ ಯಾವತ್ತು ಯಾವುದು ಮತನಾಡಲಾರೆ ಎಂದರು.
ನನ್ನನ್ನು ಏಕ ವಚನದಲ್ಲಿ ನಿಂದಿಸಿದ ಸಚಿವರಿಗೆ ಸಂಬAಧಿಸಿದ ದಾಖಲೆ ಬಿಡುಗಡೆ ಮಾಡುವೆ ನನ್ನನ್ನು ಕೆಣಕಿದವರಿಗೆ ನಾಳೆಯ ಕೊಡುವ ಉತ್ತರ ಕೇವಲ ಶಾಂಪಲ್ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದು ಇದೆ ಎಂದರು.
ಬಿಜೆಪಿ ಸರಕಾರ ಇದು 40% ಸರ್ಕಾರ ಅನ್ನೋದು ಎಲ್ಲರಿಗೂ ಗೊತ್ತಿರುವಂತದ್ದೇ ಆಗಿದ್ದಾಗಿದೆ ಎಂದು ನುಡಿದರು.
ಅವರು ಮುಂದುವರೆದು ಮಾತನಾಡುತ್ತ, ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಪ್ರಕರಣ ಸರಕಾರ ಕೇವಲ ತೋರಿಕೆಗೆ ಒತ್ತುವರಿ ತೆರವು ಮಾಡುತ್ತಿದೆ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬ್ಲ್ಯೂ ಪ್ರಿಂಟ್ ರೆಡಿ ಮಾಡಬೇಕೊಳ್ಳಬೇಕು, ಸಂಪೂರ್ಣ ಒತ್ತುವರಿ ತೆರವು ಮಾಡದೇ ಕೇವಲ ನಾಟಕೀಯವಾಗಿ ತೋರಿಕೆ ಸರಕಾರ ಒತ್ತುವತಿ ತೆರವು ಮಾಡುತ್ತಿದೆ ಈ ವಿಷಯದಲ್ಲಿ ಬಡವ ಶ್ರೀಮಂತ ಎನ್ನುವ ಪ್ರಶ್ನೆ ಇಲ್ಲದೇ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಒಂದು ಕಡೆ ನಿರ್ದಾಕ್ಷಿಣ್ಯವಾಗಿ ಬಡವರ ಮನೆಗಳನ್ನು ಒಡೆಯುತ್ತಿದ್ದಿರಿ, ಇನ್ನೊಂದು ಕಡೆ ಕೆಲವರಿಗೆ ನೋಟಿಸ್ ಕೊಟ್ಟು ಕೋರ್ಟನಿಂದ ಸ್ಟೇ ತರಲು ಸಹಕರಿಸುತ್ತಿದ್ದಿರಿ. ಇದು ಸರಿಯಲ್ಲ.. ಈ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಬ್ಲ್ಯೂ ಪ್ರಿಂಟ್ ಮಾಡಿ ಕ್ರಮಕ್ಕೆ ಮುಂದಾಗಿ ಎಂದು ನುಡಿದರು.
ಬೆಂಗಳೂರಿನಲ್ಲಿ ಪೇ ಸಿಎಂ ಪೋಸ್ಟರ್ ಅಳವಡಿಕೆ ವಿಚಾರವಾಗಿ ಮಾತನಾಡು ಕುಮಾರಸ್ವಾಮಿ ಅವರು ಸಾರ್ವಜನಿಕವಾಗಿ ಈಗಿನ ಸರ್ಕಾರದಲ್ಲಿ ಭ್ರಷ್ಟತೆಯ ವ್ಯವಸ್ಥೆ ಬಗ್ಗೆ ಜನಸಾಮಾನ್ಯರಲ್ಲಿಯೂ ಕೂಡ ಚರ್ಚೆ ನಡೆಯುತ್ತಿದೆ. ಭ್ರಷ್ಟಾಚಾರ ನಡೆದ ಬಗ್ಗೆ ಯಾವುದೆ ರೀತಿಯ ಅನುಮಾನವಿಲ್ಲ ಎಂದರು.
40% ಚರ್ಚೆ ಎಲ್ಲರಿಗೂ ಗೊತ್ತಿದೆ ಈ ಸರ್ಕಾರದ ಮಂತ್ರಿಗಳು ಯಾವ ರೀತಿ ತೆಗೆದುಕೊಳ್ಳುತ್ತಿದ್ದಾರೆ ಅಂತಾ ಗೋತ್ತಿದೆ, ರೈತರಿಗೆ ಕೊಡುವ ಸಬ್ಸಿಡಿ ಯಲ್ಲು ಪರ್ಸೆಂಟೆಜ್ ತೆಗೆದುಕೊಳ್ಳುತ್ತಿರೋದು ರೈತರು ಮಾತಾಡ್ತಿದ್ದಾರೆ. ಟೆಂಡರ್ ಪ್ರಕ್ರಿಯೆಲ್ಲಿ ಅಷ್ಟೆ ಅಲ್ಲ , ನಿನ್ನೆ ಕಲಾಪದಲ್ಲಿ ಒಬ್ಬ ಮಂತ್ರಿ ಅಧಿಕಾರಿಗಳು ಮಾತು ಕೇಳಲ್ಲ ಅಂತಾ ಹೇಳ್ತಾರಂದ್ರೆ ಇವರ ಬಗ್ಗೆ ಅಧಿಕಾರಿಗಳು ಯಾವ ಮಟ್ಟದಲ್ಲಿ ಇದ್ದಾರೆ ಅಂತಾ ಗೋತ್ತಾಗುತ್ತೆ ಎಂದರು.