50ನೇ ಸುವರ್ಣ ಮಹೋತ್ಸವಕ್ಕೆ ಕಾಲಿಟ್ಟಿ ಚಪ್ಪಲ ಬಜಾರ ದೀಪಕ ಗಣೇಶ ಮಂಡಳಿ

0
526

ಕಲಬುರಗಿ, ಸೆ. 05: ಪ್ರಮುಖ ಸ್ವಾತಂತ್ರ‍್ಯ ಹೋರಾಟಗಾರರಲ್ಲಿ ಒಬ್ಬರಾದ ಬಾಲಗಂಗಾಧರ ತಿಲಕ್ ಅವರು 1906 ರಲ್ಲಿ ಪುಣೆಯಿಂದ ಬೆಳಗಾವಿ ಬಂದು ಝೆಂಡಾ ಚೌಕದಲ್ಲಿ ಮೊದಲ ಸರ್ವಜನಿಕ ಗಣೇಶ ಉತ್ಸವ ಮಂಡಲವನ್ನು ಸ್ಥಾಪಿಸಿದರು.
ಸುಮಾರು 117 ವರ್ಷಗಳ ಇತಿಹಾಸ ಹೊಂದಿದ್ದ ಸಾರ್ವಜನಿಕ ಗಣೇಶ ಉತ್ಸವವು ಸಾರ್ವಜನಿಕವಾಗಿ ಆಚರಣೆಗಳನ್ನು ನಡೆಸುವುದುರ ಹಿಂದಿನ ಉದ್ದೇಶವು ಯಾವೂದು ಅಲ್ಲ, ಅದು ಸ್ವಾತಂತ್ರö್ಯ ಹೋರಾಟಕ್ಕೆ ಕೊಡುಗೆ ನೀಡುವುದಕ್ಕಾಗಿ ಜನರನ್ನು ಒಂದೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಮತ್ತು ಸ್ವಾತಂತ್ರö್ಯ ಚಳುವಳಿಯಲ್ಲಿ ಪಾಲ್ಗೋಳ್ಳುವಂತೆ ಪ್ರೇರಿಸುವುದು ಇರದ ಉದ್ದೇಶವಾಗಿತ್ತು.
ಇಂತಹ ಅಖಂಡ 117 ವರ್ಷಗಳ ಇತಿಹಾಸವುಳ್ಳ ಸಾರ್ವಜನಿಕರ ಗಣೇಶ ಪ್ರತಿಷ್ಠಾಪನೆಗೆ ಕಲಬುರಗಿ ನಗರದ ಚಪ್ಪಲ ಬಜಾರದಲ್ಲಿಯ ಶ್ರೀ ದೀಪಕ ಗಣೇಶ ಮಂಡಳಿ ತನ್ನ ಅಖಂಡ 49 ವರ್ಷ ಪೂರೈಸಿ 50ನೇ ವರ್ಷ ಗಣೇಶೋತ್ಸವ ಆಚರಿಸುತ್ತಿದೆ.
ಸಿದ್ಧಣ್ಣ ತಾಳಿಕೋಟಿ ಅವರು 50 ವರ್ಷಗಳಿಂದ ಈ ಗಣೇಶ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಎಲ್ಲ ಯುವಕರಿಗೆ ಮಾದರಿಯಾಗಿದ್ದಾರೆ.
50ನೇ ಸುವರ್ಣ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಭಕ್ತಾದಿಗಳಿಗಾಗಿ ಮಂಗಳವಾರ ಮತ್ತು ಬುಧುವಾರ ಎರಡು ದಿನಗಳ ಕಾಲ ಚಪ್ಪಲ ಬಜಾರ ಗಣೇಶ ಮಂಡಳಿವತಿಯಿAದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ಭಕ್ತಾದಿಗಳು ಪ್ರಸಾದ ಸ್ವೀಕರಿಸಿ ಧನ್ಯರಾಗಬೇಕೆಂದು ಮಂಡಳಿಯ ಪದಾಧಿಕಾರಿಗಳು ವಿನಂತಿಸಿಕೊAಡಿದ್ದಾರೆ.
ಈ ಮಂಡಳಿಯಲ್ಲಿ ಪ್ರತಿವರ್ಷ ವಿಜೃಂಭಣೆಯಿAದ ಗಣೇಶ ಚತುರ್ಥಿ ಆಚರಿಸುವುದರ ಜೊತೆಗೆ ಇಲ್ಲಿ ಪ್ರತಿ ವರ್ಷ ಸಾವಿರಾರು ಭಕ್ತಾದಿಗಳು ಪ್ರಸಾದ ಸ್ವೀಕರಿಸುವ ಮೂಲಕ ತನು, ಮನ, ಧನದಿಂದ ಸಂಘಕ್ಕೆ ಸಹಾಯ ಹಸ್ತ ಚಾಚುತ್ತಿದ್ದಾರೆ.
11 ದಿನಗಳ ಕಾಲ ವಿಜೃಂಭಿಸುವ ಗಣೇಶನಿಗೆ ವಿವಿಧ ರೀತಿಯ ವಿದ್ಯುತ್ ದೀಪಗಳ ಅಲಂಕಾರದೊAದಿಗೆ ಸಾಂಸ್ಕೃತಿಕ ಕಾರ್ಯಕ್ರ ಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ.
ಇಲ್ಲಿ ಯಾವುದೇ ಜಾತಿ, ಧರ್ಮ, ಬಡವ, ಶ್ರೀಮಂತ ಯಾವುದೇ ಭೇಧ ಭಾವವಿಲ್ಲದೇ ಸಡಗರಿಂದ ಗಣೇಶ ಹಬ್ಬ ಆಚರಿಸುತ್ತಿದ್ದು, ಮುಂದೆಯೂ ಗಣೇಶನ ಹಬ್ಬ ಇನ್ನು ವಿಜೃಂಭಣೆಯಿAದ ಆಚರಿಸಲು ಎಂದು ಶುಭ ಹಾರೈಸುವೆವು.
ಇತ್ತೀಚಿನ ದಿನಗಳಲ್ಲಿ ನಗರದ ವಿವಿಧ ಮಂಡಲಗಳಿAದ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದು ಒಂದು ಯುವಕರಲ್ಲಿ ಜಾಗೃತಿ ಮೂಡಿಸುವ ಸಂಕೇತವಾಗಿದೆ.
ಗಣಪತಿ ಬಪ್ಪ ಮೋರಾಯಾ… ಪುಡಚಾ ವರರ್ಷಿ ಲೌಕರ್ ಯಾ… ಅಂದ ಹಾಗೆ ಗಣೇಶ ನಿನಗೆ ಜಯವಾಗಲೀ, ಮುಂದಿನ ವರ್ಷ ಮತ್ತೆ ನೀನು ಬೇಗನೆ ಬಾ… ಎನ್ನುವ ಘೋಷಣೆ ಆ ಗಣೇಶನಿಗೆ ಕೇಳಿಸುವಷ್ಟು ಉದ್ಘೋಷಣೆಗಳು ಎಲ್ಲಡೆ ಕೇಳಿಬರುತ್ತಿವೆ.

LEAVE A REPLY

Please enter your comment!
Please enter your name here