ಕಾಮನ್‌ವೇಲ್ತ್ ಕ್ರೀಡಾಕೂಟ: ಭಾರತಕ್ಕೆ ಲಾನ್‌ಬೌಲ್ಸ್ನಲ್ಲಿ ಚಿನ್ನದ ಪದಕ

0
518

ಬರ್ಮಿಂಗ್‌ಹ್ಯಾಮ್: ಆಗಸ್ಟ್ 02:ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತದ ಲಾನ್ ಬೌಲ್ಸ್ ಮಹಿಳೆಯರ ತಂಡ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದೆ.
ಇದು ಭಾರತಕ್ಕೆ ಕ್ರೀಡೆಯಲ್ಲಿ ಮೊದಲ ಪದಕವಾಗಿದೆ. ಹಾಗು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ಸಿಕ್ಕಿದೆ.
ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಭಾರತದ ವನಿತೆಯರು ಫೈನಲ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದರು. ಆರಂಭಿಕ ಹಂತದಲ್ಲಿ ಭಾರತೀಯರು ದೊಡ್ಡ ಮುನ್ನಡೆ ಸಾಧಿಸಿದರು. ಆದರೆ ದಕ್ಷಿಣ ಆಫ್ರಿಕಾ 10-8 ಮುನ್ನಡೆ ಸಾಧಿಸಲು ಬಲವಾಗಿ ಮರಳಿತು. ಒಂದು ಹಂತದಲ್ಲಿ ಭಾರತಕ್ಕೆ ಚಿನ್ನದ ಪದಕ ಜಾರಿಹೋಗುವಂತೆ ತೋರುತ್ತಿತ್ತು. ಆದರೆ ಕೊನೆಯ ಮೂರು ಸೆಟ್‌ಗಳಲ್ಲಿ ಭಾರತ ತಂಡವು 17-10ಅಂತರದಲ್ಲಿ ಜಯಭೇರಿ ಬಾರಿಸಿತು.
ತಂಡದ ನಾಯಕಿ,38 ವರ್ಷದ ಲಲ್ಲಿ ಚೌಬೆ ಜಾರ್ಖಂಡ್ ಪೊಲೀಸ್‌ನಲ್ಲಿ ಕಾನ್‌ಸ್ಟೆಬಲ್ ಆಗಿದ್ದು, ರಾಂಚಿಯವರಾದ ರೂಪಾ ರಾಣಿ ಟರ್ಕಿ ಕೂಡ ರಾಜ್ಯ ಕ್ರೀಡಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ದೆಹಲಿಯಲ್ಲಿ 2010 ರ ಕಾಮನ್ ವೆಲ್ತ್ ಗೇಮ್ಸ್ ಸಮಯದಲ್ಲಿ ಆಕಸ್ಮಿಕವಾಗಿ ಕ್ರೀಡೆ ಪ್ರವೇಶಿಸಿದ ಪಿಂಕಿ, ನವದೆಹಲಿಯ ಡಿಪಿಎಸ್ ಆರ್ ಕೆ ಪುರಂನಲ್ಲಿ ಕ್ರೀಡಾ ಶಿಕ್ಷಕಿಯಾಗಿದ್ದು, ನಯನ್ನೋನಿ ಸೈಕಿಯಾ ಅಸ್ಸಾಂನ ಕೃಷಿ ಕುಟುಂಬದಿAದ ಬಂದವರು ಮತ್ತು ರಾಜ್ಯದ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ.
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ 16-13 ಸ್ಟೋರ್‌ಲೈನ್‌ನೊಂದಿಗೆ ಮೊದಲ ಸಲ ಫೈನಲ್ ಗೆ ಲಗ್ಗೆ ಇಟ್ಟಿತ್ತು.

LEAVE A REPLY

Please enter your comment!
Please enter your name here