ಏಷ್ಯಾ ಕಪ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ: ಆ.28 ಪಾಕ್ ಭಾರತ ಸೆಣಸಾಟ

0
652

ಮುಂಬೈ, ಆ.2- ಬಹು ನಿರೀಕ್ಷಿತ 15ನೇ ಆವೃತ್ತಿಯ ಏಷ್ಯಾಕಪ್​ ಕ್ರಿಕೆಟ್ ಟೂರ್ನಿಯ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಗಸ್ಟ್​ 28ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಗ್ರೂಪ್​ ಎ ವಿಭಾಗದಲ್ಲಿ ಉಭಯ ತಂಡಗಳು ದುಬೈ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. ಟೂರ್ನಿಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಟ್ವಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಾರಿಯ ಏಷ್ಯಾ ಕಪ್ ಶ್ರೀಲಂಕಾದಲ್ಲಿ ನಡೆಯಬೇಕಾಗಿತ್ತು. ಆದರೆ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಶ್ರೀಲಂಕಾ ಏಷ್ಯಾಕಪ್ ಟೂರ್ನಿಯಿಂದ ಹಿಂದೆ ಸರಿದ ಕಾರಣ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾoತರಿಸಲಾಗಿದೆ.ಈ ಮಹತ್ವದ ಸರಣಿಯಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಮತ್ತೊಂದು ಕ್ವಾಲಿಫೈಯರ್​ ತಂಡವೂ ಭಾಗಿಯಾಗಲಿದೆ.
ಗಸ್ಟ್​ 27ರಿಂದ ಸರಣಿ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿ ಸ್ತಾನ ಮುಖಾಮುಖಿಯಾಗಲಿವೆ. ಆಗಸ್ಟ್​ 27ರಿಂದ ಸೆಪ್ಟೆಂಬರ್​​ 11ರವರೆಗೆ ಟೂರ್ನಿ ನಿಗದಿಯಾಗಿದೆ.‌ ಭಾರತ ಆರು ಬಾರಿ ಏಷ್ಯಾಕಪ್ ಗೆದ್ದಿದೆ. ಈ ಬಾರಿಯೂ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.

   ಏಷ್ಯಾ ಕಪ್ ವೇಳಾಪಟ್ಟಿ 

ಆಗಸ್ಟ್ 27 – ಶ್ರೀಲಂಕಾ vs ಅಫ್ಘಾನಿಸ್ತಾನ- ದುಬೈ
ಆಗಸ್ಟ್ 28 – ಭಾರತ vs ಪಾಕಿಸ್ತಾನ- ದುಬೈ
ಆಗಸ್ಟ್ 30 – ಬಾಂಗ್ಲಾದೇಶ vs ಅಫ್ಘಾನಿಸ್ತಾನ- ಶಾರ್ಜಾ
ಆಗಸ್ಟ್ 31 – ಭಾರತ vs ಕ್ವಾಲಿಫೈಯರ್ ಟೀಮ್- ದುಬೈ
ಸೆಪ್ಟೆಂಬರ್ 1 – ಶ್ರೀಲಂಕಾ vs ಬಾಂಗ್ಲಾದೇಶ- ದುಬೈ
ಸೆಪ್ಟೆಂಬರ್ 2- ಪಾಕಿಸ್ತಾನ vs ಕ್ವಾಲಿಫೈಯರ್ ಟೀಮ್- ಶಾರ್ಜಾ
ಸೂಪರ್- 4 ವೇಳಾಪಟ್ಟಿ
ಸೆಪ್ಟೆಂಬರ್ 3 – B1 vs B2 – ಶಾರ್ಜಾ
ಸೆಪ್ಟೆಂಬರ್ 4 A1 vs A2 – ದುಬೈ
ಸೆಪ್ಟೆಂಬರ್ 6 A1 vs B1 – ದುಬೈ
ಸೆಪ್ಟೆಂಬರ್ 7 A2 vs B2 – ದುಬೈ
ಸೆಪ್ಟೆಂಬರ್ 8 A1 vs B2 – ದುಬೈ
ಸೆಪ್ಟೆಂಬರ್ 9 B1 vs- A2 ದುಬೈ
ಸೆಪ್ಟೆಂಬರ್ 11- ಫೈನಲ್ ಪಂದ್ಯ- ದುಬೈ

LEAVE A REPLY

Please enter your comment!
Please enter your name here