ಕಲಬುರಗಿ,ಜು.19: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮುಖ್ಯಮಂತ್ರಿಗಳ ಕಚೇರಿಯ ಛಾಯಾಗ್ರಾಹಕ ತುಳಜಾರಾಮ ಪವಾರ್ ಅವರ ತಾಯಿ ಸುಶೀಲಾಬಾಯಿ ಸೋಮಣ್ಣ ಪವಾರ (73) ಮಂಗಳವಾರ ಸಾಯಂಕಾಲ ಕಲಬುರಗಿಯಲ್ಲಿ ನಿಧನರಾಗಿದ್ದರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತುಳಜಾರಾಮ ಪವಾರ ಸೇರಿದಂತೆ ಐದು ಜನ ಗಂಡು ಮಕ್ಕಳು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಜುಲೈ 20 ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಿಟ್ಟಿನಹಳ್ಳಿ ತಾಂಡಾದ ಸ್ವಂತ ಹೊಲದಲ್ಲಿ ಬೆಳಗಿನ 10 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.